



ವಿಟ್ಲ: ವಿಟ್ಲ ವಿಠಲ ವಿದ್ಯಾ ಸಂಘದ ವಿಠಲ ಪ್ರೌಢಶಾಲೆಯಲ್ಲಿ ಮುಂದಿನ ಶೈಕ್ಷಣಿಕ ವರ್ಷದಿಂದ (2020-21) 8 ತರಗತಿಯ ಎಲ್ಲಾ ವಿದ್ಯಾರ್ಥಿಗಳಿಗೆ ಉಚಿತ ಶಿಕ್ಷಣ ನೀಡುವುದಾಗಿ ಆಡಳಿತ ಮಂಡಳಿ ನಿರ್ಧರಿಸಿದೆ. ಕಳೆದ ಕೆಲವು ವರ್ಷಗಳಿಂದ 9ನೇ ತರಗತಿಗೆ ಮಕ್ಕಳು ಬಂದು ಸೇರುವುದರಿಂದ ಮಕ್ಕಳ ಭವಿಷ್ಯದ ಹತ್ತನೇ ತರಗತಿ ಪರೀಕ್ಷೆಯಲ್ಲಿ ಕೆಲವು ಮಕ್ಕಳು ಉತ್ತಮ ಅಂಕಗಳನ್ನು ಪಡೆಯುವಲ್ಲಿ ವಿಫಲರಾಗುತ್ತಿದ್ದಾರೆ. 8ನೇ ತರಗತಿಗೆ ಸೇರಿದ ಮಕ್ಕಳಿಗೆ ಮೂರು ವರ್ಷ ಒಂದೇ ಶಾಲೆಯಲ್ಲಿ ಉತ್ತಮ ಶಿಕ್ಷಕರಿಂದ ಗುಣಮಟ್ಟದ ಶಿಕ್ಷಣ ದೊರೆತು ಹತ್ತನೇ ತರಗತಿಯಲ್ಲಿ ಹೆಚ್ಚಿನ ಅಂಕಳನ್ನು ಪಡೆಯುವಂತಾಗುತ್ತದೆ ಎಂದು ಎಲ್ಲಾ ಅಧ್ಯಾಪಕರ ಮನವಿಯ ಮೇರೆಗೆ ಆಡಳಿತ ಮಂಡಳಿಯು ಈ ತೀರ್ಮಾಣ ಕೈಗೊಂಡಿದೆ.
ವಿಠಲ ವಿದ್ಯಾ ಸಂಘದ ಅಧ್ಯಕ್ಷ ಮುಗುಳಿ ತಿರುಮಲೇಶ್ವರ ಭಟ್ ಈ ನಿರ್ಣಯವನ್ನು ಆಡಳಿತ ಮಂಡಳಿಯ ಸಭೆಯಲ್ಲಿ ಘೋಷಿಸಿದರು. ಇತರ ಪದಾಧಿಕಾರಿಗಳು ಮತ್ತು ಸದಸ್ಯರು ಭಾಗವಹಿಸಿದ ಈ ಸಭೆಯಲ್ಲಿ ಪ್ರೌಢ ಶಾಲೆಯ ವಿದ್ಯಾರ್ಥಿಗಳಿಗೆ (ಹುಡುಗರಿಗೆ) ಹಾಸ್ಟೆಲ್ ಸೌಲಭ್ಯವನ್ನು ರಿಯಾಯಿತಿ ದರದಲ್ಲಿ ಕಲ್ಪಿಸುವುದೆಂದು ತೀರ್ಮಾನಿಸಲಾಯಿತು.
,






