


ವಿಟ್ಲ: 2019-20ನೇ ಸಾಲಿನ ಸ್ಕೌಟ್ ಮತ್ತು ಗೈಡ್ಸ್ ರಾಜ್ಯಮಟ್ಟದ ರಾಜ್ಯ ಪುರಸ್ಕಾರ ಪ್ರಶಸ್ತಿ ಪ್ರದಾನ ಸಮಾರಂಭವು ಬೆಂಗಳೂರಿನ ರಾಜಭವನದ ಗಾಜಿನಮನೆಯಲ್ಲಿ ನಡೆಯಿತು. ಕರ್ನಾಟಕದ ರಾಜ್ಯಪಾಲ ವಾಜುಭಾಯಿವಾಲಾರವರು ರಾಜ್ಯ ಪುರಸ್ಕಾರ ಪ್ರಶಸ್ತಿ ಪತ್ರವನ್ನು ವಿತರಿಸಿದರು.
ವಿಠಲ್ ಜೇಸೀಸ್ ಆಂಗ್ಲ ಮಾಧ್ಯಮ ಶಾಲೆಯ ೬ ಮಂದಿ ಗೈಡ್ ವಿದ್ಯಾರ್ಥಿನಿಯರು ದಕ್ಷಿಣ ಕನ್ನಡ ಜಿಲ್ಲೆಯ ಗೈಡ್ ಪ್ರತಿನಿಧಿಗಳಾಗಿ ಭಾಗವಹಿಸಿದ್ದರು. ಜೇಸೀಸ್ ಶಿಕ್ಷಣ ಸಂಸ್ಥೆಯ ಹತ್ತನೇ ತರಗತಿಯ ವಿದ್ಯಾರ್ಥಿನಿ ಅನ್ವೇಷಾ ಮಾನ್ಯ ರಾಜ್ಯಪಾಲರಿಂದ ಪ್ರಶಸ್ತಿ ಪಡೆದರು. ಕರ್ನಾಟಕ ರಾಜ್ಯದ ಒಟ್ಟು 5,000 ವಿದ್ಯಾರ್ಥಿಗಳು ರಾಜ್ಯಪುರಸ್ಕಾರ ಪರೀಕ್ಷೆಯಲ್ಲಿ ಉತ್ತೀರ್ಣರಾಗಿದ್ದು, 500 ವಿದ್ಯಾರ್ಥಿಗಳು ಕಬ್ಸ್, ಬುಲ್ಬುಲ್, ಸ್ಕೌಟ್, ಗೈಡ್ಸ್, ರೋವರ್, ರೇಂಜರ್ ವಿಭಾಗಗಳಿಂದ ಈ ಸಮಾರಂಭದಲ್ಲಿ ಭಾಗವಹಿಸಲು ಅವಕಾಶ ಪಡೆದಿದ್ದರು. ವಿಠಲ್ ಜೇಸೀಸ್ ಆಂಗ್ಲ ಮಾಧ್ಯಮ ಶಾಲೆಯು ಪ್ರಥಮ ಬಾರಿಗೆ ಈ ಅವಕಾಶ ಪಡೆದಿರುವುದು ಹೆಗ್ಗಳಿಕೆಯೆನಿಸಿದೆ. ಹತ್ತನೇ ತರಗತಿಯ ಗೈಡ್ಗಳಾದ ತನೀಶಾ, ಪ್ರಣಮ್ಯ, ಅನ್ವೇಷಾ, ದ್ರವ್ಯಾ, ಚಿನ್ಮಯಿ, ಸಮೃದ್ಧಿಯವರು ಹಾಗೂ ಗೈಡ್ ಶಿಕ್ಷಕಿಯಾದ ಜಯಶ್ರೀ, ಕಬ್ ಶಿಕ್ಷಕಿ ನಮಿತಾ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.





