Wednesday, October 18, 2023

ಟ್ರಾಫಿಕ್ ಕಂಟ್ರೋಲ್ ಗೆ ಸಿ.ಸಿ.ಕ್ಯಾಮರಾ ಬಳಕೆ, ನೋಟಿಸ್ ಜಾರಿ, ಸಿಬ್ಬಂದಿಗಳ ಕೈಗೆ ವಿಡಿಯೋ ಕ್ಯಾಮರಾ: ಎಸ್.ಐ. ರಾಜೇಶ್ ಕೆ.ವಿ

Must read

ಬಂಟ್ವಾಳ: ಬಿಸಿರೋಡಿನ ಟ್ರಾಫಿಕ್ ಸಮಸ್ಯೆ ಪರಿಹಾರಕ್ಕೆ ಉನ್ನತ ಅಧಿಕಾರಿಗಳ ಮಾರ್ಗದರ್ಶನದಂತೆ ನೂತನ ಟ್ರಾಫಿಕ್ ಎಸ್.ಐ. ರಾಜೇಶ್ ಕೆ.ವಿ., ಸಿ.ಸಿ.ಕ್ಯಾಮರಾದ ಪೂಟೇಜ್ ಬಳಕೆ ಮಾಡಿ ಆ ಮೂಲಕ ನೋಟೀಸ್ ಜಾರಿ ಮಾಡಿ ದಂಡ ವಸೂಲಿಗೆ ಮುಂದಾಗಿದ್ದಾರೆ.
ಟ್ರಾಫಿಕ್ ರೂಲ್ಸ್ ಗಳನ್ನು ಅನುಸರಿಸಿದ ವಾಹನ ಸವಾರರಿಗೆ ಎಸ್.ಐ. ಈ ರೀತಿಯಲ್ಲಿ ಟ್ರಾಫಿಕ್ ಬಿಸಿ ಮುಟ್ಟಿಸಲು ಮುಂದಾಗಿದ್ದಾರೆ.
ಅಧಿಕಾರ ಪಡೆದ ಹತ್ತು ದಿನಗಳಲ್ಲಿ ಸಿಸಿ ಕ್ಯಾಮರಾ ನೋಡಿ ಸುಮಾರು 30 ನೋಟಿಸ್ ಜಾರಿ ಮಾಡಿದ್ದಾರೆ.

ತ್ರಿಬಲ್ ರೈಡ್, ಹೆಲ್ಮೆಟ್ ಇಲ್ಲದೆ ಪ್ರಯಾಣ, ಅತಿಯಾದ ವೇಗ, ಒನ್ ವೇ ಪ್ರಯಾಣ ಮುಂತಾದ ಟ್ರಾಫಿಕ್ ಕಿರಿಕಿರಿ ಉಂಟು ಮಾಡುವ ಸವಾರರನ್ನು ಸಿಸಿ ಕ್ಯಾಮರಾದ ಮೂಲಕ ಪತ್ತೆ ಹಚ್ಚಿ ಅವರ ಮನೆಗೆ ನೋಟಿಸ್ ಜಾರಿ ಮಾಡಿ ನ್ಯಾಯಾಲಯದಲ್ಲಿ ದಂಡ ಕಟ್ಟುವಂತೆ ಮಾಡಿದ್ದಾರೆ.

ಅವರು ಟ್ರಾಫಿಕ್ ಠಾಣಾ ಎಸ್.ಐ.ಅಗಿ ಠಾಣೆಗೆ ಅಗಮಿಸಿದ ಬಳಿಕ ಹತ್ತು ದಿನಗಳಲ್ಲಿ ಸಿ.ಸಿ.ಕ್ಯಾಮರಾ ನೋಡಿ 30 ನೋಟಿಸ್ ಕಳುಹಿಸಿದ್ದಾರೆ.‌ ಟ್ರಾಫಿಕ್ ಸಿಬ್ಬಂದಿಗಳ ಮೂಲಕವೇ ಸಂಚಾರ ನಿಯಮ ಪಾಲಿಸದ ಸವಾರರ ಮನೆಗೆ ಹೋಗಿ ಅವರ ಕೈಗೆ ನೇರವಾಗಿ ತಲುಪಿಸುವ ಕೆಲಸ ಮಾಡುತ್ತಿದ್ದಾರೆ.

ಈ ರೀತಿಯಲ್ಲಿ ಸಿ.ಸಿ. ಕ್ಯಾಮರಾ ಬಳಸಿ ಪ್ರಕರಣ ದಾಖಲಿಸುವುದರಿಂದ ಸ್ಥಳದಲ್ಲಿ ಪ್ರಕರಣ ದಾಖಲಿಸುವ ಸಂದರ್ಭದಲ್ಲಿ ಸಿಬ್ಬಂದಿಗಳ ಜೊತೆಗೆ ನಡೆಯುವ ಕಿರಿಕಿರಿ ಕೂಡಾ ತಪ್ಪುತ್ತದೆ ಎಂದು ಅವರ ಯೋಚನೆಯಾಗಿದೆ. ಮುಂದಿನ‌ ದಿನಗಳಲ್ಲಿ ಸಿ.ಸಿ.ಕ್ಯಾಮರಾ ಪೂಟೇಜ್ ಗಳ ಅನುಸರಿಸಿ ಹೆಚ್ಚು ನೋಟೀಸ್ ನೀಡುವ ಯೋಚನೆ ಅವರದ್ದಾಗಿದೆ.
ಒಟ್ಟಿನಲ್ಲಿ ಬಂಟ್ವಾಳ ತಾಲೂಕಿನ ಟ್ರಾಫಿಕ್ ಸಮಸ್ಯೆ ನಿವಾರಣೆ ಮತ್ತು ಸಂಚಾರ ನಿಯಮಗಳ ಪಾಲನೆ ಸರಿಯಾಗಿ ಅಗಬೇಕಾಗಿದೆ,ಆ ಮೂಲಕ ಟ್ರಾಫಿಕ್ ಪ್ರಕರಣ ಕಡಿಮೆಯಾಗಬೇಕು, ಸಾರ್ವಜನಿಕರು ನಿರಾತಂಕವಾಗಿ ಪ್ರಯಾಣ ಮಾಡಬೇಕು ಎಂಬುದು ಅವರ ಗುರಿ.
ಟ್ರಾಫಿಕ್ ಸಿಬ್ಬಂದಿಗಳ ಕೈಗೆ ವಿಡಿಯೋ ನೀಡಿ ಬಹುತೇಕ ಟ್ರಾಫಿಕ್ ಸಮಸ್ಯೆ ಕಡಿಮೆ ಮಾಡಲು ಪ್ರಯತ್ನವನ್ನು ಇವರು ಮಾಡುತ್ತಿದ್ದಾರೆ.
ಟ್ರಾಫಿಕ್ ಸಮಸ್ಯೆ ನಿಯಂತ್ರಣಕ್ಕೆ ಎಸ್.ಐ.ರಾಜೇಶ್ ಕಟ್ಟುನಿಟ್ಟಿನ ಕ್ರಮಕ್ಕೆ ಮುಂದಾಗಿದ್ದು, ಸಾರ್ವಜನಿಕರು ಸಂಚಾರ ನಿಯಂತ್ರಣ ಮಾಡಲು ಟ್ರಾಫಿಕ್ ಸಿಬ್ಬಂದಿಗಳ ಜೊತೆ ಸಹಕರಿಸಲು ಹಾಗೂ ಸಂಚಾರಿ ನಿಯಮಗಳ ಪಾಲನೆ ಮಾಡವಂತೆ ಅವರು ಮನವಿ ಮಾಡಿದ್ದಾರೆ.

 

More articles

Latest article