ಬಂಟ್ವಾಳ: ತಾಲೂಕಿನ ಸಜೀಪಮೂಡ ಗ್ರಾಮದ ಬೆಂಕ್ಯ ಜುಮಾದಿ ಬಂಟ ದೈವಸ್ಥಾನದ ಜೀರ್ಣೋದ್ಧಾರಕ್ಕಾಗಿ ವಾಸ್ತು ಶಾಸ್ತ್ರಜ್ಞ ಪ್ರಸಾದ್ ಬಟ್ ಮುನಿಯಂಗಳ ಬಟ್ ಮಾರ್ಗದರ್ಶನದಲ್ಲಿ ಇಂದು ಶಿಲಾನ್ಯಾಸ ಕಾರ್ಯಕ್ರಮ ನಡೆಯಿತು.
ಕಾರ್ಯಕ್ರಮದ ವೈದಿಕ ವಿಧಿವಿಧಾನಗಳನ್ನು ಸಜೀಪ ಮಾಗಣೆಯ ತಂತ್ರಿ ಎಂ. ಸುಬ್ರಹ್ಮಣ್ಯ ಭಟ್ ವಿದ್ಯುಕ್ತವಾಗಿ ನೆರವೇರಿಸಿದರು.

ಕಾರ್ಯಕ್ರಮದಲ್ಲಿ ಸಜಿಪಗುತ್ತು ಗಡಿ ಪ್ರಧಾನರಾದ ಮುಂಡಪ್ಪ ಶೆಟ್ಟಿ ಯಾನೆ ಕೋಚ್ ಭಂಡಾರಿ ಬಿ. ಸದಾನಂದ ಪೂಂಜ, ಚಂದ್ರಶೇಖರ್ ನಾಯಕ್, ಅನುಪ್ ಆಳ್ವ, ಶಿವಪ್ರಸಾದ್ ಶೆಟ್ಟಿ, ದೇವಿ ಪ್ರಸಾದ್ ಪೂಂಜಾ, ಜೀವನ ಆಳ್ವ ಅಗರಿ, ಕಲ್ಲಾಡಿ ಗೂಳಿ, ರಾಘವೇಂದ್ರ ಐತಾಳ, ಜಯರಾಮ ಶೆಟ್ಟಿ ನಗರಿ ಗುತ್ತು, ಸತೀಶ್ ಪೆರ್ಗಡೆ ಮೊದಲಾದವರು ಉಪಸ್ಥಿತರಿದ್ದರು.

 

LEAVE A REPLY

 Click this button or press Ctrl+G to toggle between Kannada and English

Please enter your comment!
Please enter your name here