



ಬಂಟ್ವಾಳ: ಬಿಸಿರೋಡಿನ ಸುತ್ತ ಮುತ್ತ ಎಲ್ಲಿ ನೋಡಿದರೂ ಪ್ಲಾಸ್ಟಿಕ್ ಬ್ಯಾನರುಗಳು ರಾರಾಜಿಸುತ್ತಿದೆ.
ಪ್ಲಾಸ್ಟಿಕ್ ಬ್ಯಾನ್ ಎಂಬುದು ಕೇವಲ ನಾಮಕಾವಸ್ಥೆಯಾಗಿ ಉಳಿದಿದೆ ಅನ್ನುವುದಕ್ಕೆ ಇದೆ ಸಾಕ್ಷಿ.
ಒಂದೆಡೆ ಪ್ಲಾಸ್ಟಿಕ್ ಬ್ಯಾನ್ ಎಂದು ಸರ್ಕಾರ ಬೊಬ್ಬೆ ಹೊಡೆಯುತ್ತಿದೆ, ಮತ್ತೊಂದೆಡೆ ಸ್ಥಳೀಯಾಡಳಿಗಳು ಫ್ಲೆಕ್ಸ್ ಅಳವಡಿಕೆಗೆ ಅನುಮತಿಯನ್ನೂ ನೀಡುತ್ತಿದೆ. ವರ್ಷದ ಹಿಂದೆ ಫ್ಲೆಕ್ಸ್ ಅಳವಡಿಕೆ ಸಂಬಂಧ ರಾಜ್ಯ ಉಚ್ಛ ನ್ಯಾಯಾಲಯ ಮಹತ್ವದ ನಿರ್ದೇಶನ ನೀಡಿದ್ದರೂ, ಈ ಬಗೆಗಿನ ಸೂಚನೆಗಳು ಅನುಷ್ಠಾನ ಗೊಳ್ಳದಿರುವುದು ಖೇದಕರ. ಪ್ಲಾಸ್ಟಿಕ್ ಕೈ ಚೀಲ ಬಳಸುವ, ಮಾರುವ ಸಣ್ಣ ಪುಟ್ಟ ಅಂಗಡಿಗಳಿಗೆ ಆಗಾಗ ದಾಳಿ ನಡೆಸಿ, ದಂಡ ವಿಧಿಸುವ ಸ್ಥಳಿಯಾಡಳಿತ ಸಂಸ್ಥೆಗಳ ಅಧಿಕಾರಿಗಳು ಗ್ರಾಮೀಣ ಹಾಗೂ ನಗರ ಪ್ರದೇಶಗಳಲ್ಲಿ ರಾರಾಜಿಸುವ ಫ್ಲೆಕ್ಸ್ ಬಗ್ಗೆ ಯಾಕೆ ಕ್ರಮ ಕೈಗೊಂಡಿಲ್ಲ ಎನ್ನುವುದೇ ಪ್ರಶ್ನೆಯಾಗಿ ಉಳಿದಿದೆ.
ಬಿಸಿರೋಡಿನ ಸರ್ಕಲ್ ನಿಂದ ಶುರುವಾದ ಪ್ಲೆಕ್ಸ್ ಗಳ ಸಾಲುಗಳು ಒಂದನ್ನೊಂದು ಮೀರುವಂತಿದೆ.
ಪ್ಲಾಸ್ಟಿಕ್ ಬಳಕೆ ಕಡಿಮೆ ಮಾಡಬೇಕು ಎಂದು ಹೇಳುವ ಸ್ಥಳೀಯ ಆಡಳಿತವೇ ಮತ್ತೆ ಮತ್ತೆ ಪ್ಲೆಕ್ಸ್ ಅಳವಡಿಕೆಗೆ ಅನುಮತಿ ನೀಡುತ್ತಿರುವುದು ಮಾತ್ರ ಬೇಸರದ ವಿಚಾರ.
ಕೆಲವೊಂದು ಬ್ಯಾನರ್ ಗಳು ಕಾರ್ಯಕ್ರಮ ಮುಗಿದ ಬಳಿಕವೂ ರಾರಾಜಿಸುತ್ತಿರುತ್ತದೆ.
ಬ್ಯಾನರ್ ಗಳ ಮೂಲಕ ಅನೇಕ ಬಾರಿ ಬಿಸಿರೋಡಿನಲ್ಲಿ ಗಲಾಟೆಗಳು ನಡೆದಿವೆ.
ಹಾಗಾಗಿ ಇಲ್ಲಿನ ಅಧಿಕಾರಿಗಳು ಪ್ಲೆಕ್ಸ್ ಗಳಿಗೆ ಅನುಮತಿ ನೀಡುವಾಗ ಪ್ಲಾಸ್ಟಿಕ್ ಬಳಕೆ ಮಾಡದಂತೆ ತಡೆಯುವ ಪ್ರಯತ್ನ ಮಾಡಬೇಕಾಗಿದೆ ಎಂದು ಸಾರ್ವಜನಿಕ ಅಭಿಪ್ರಾಯವಾಗಿದೆ.





