ಕುಂಡಡ್ಕ: ವಿಟ್ಲಮೂಡ್ನೂರು ಗ್ರಾಮದ ಕುಂಡಡ್ಕ ವಿಷ್ಣುನಗರ ಶ್ರೀ ವಿಷ್ಣುಮೂರ್ತಿ ಯುವಕ ವೃಂದದ ಏಳನೇ ವರ್ಷದ ವಾರ್ಷಿಕೋತ್ಸವದ ಪ್ರಯುಕ್ತ ಶ್ರೀ ಕ್ಷೇತ್ರ ಕುಂಡಡ್ಕ ಕ್ರೀಡೋತ್ಸವ ನಡೆಯಿತು.
ಸಮಾರೋಪ ಸಮಾರಂಭದ ಅಧ್ಯಕ್ಷತೆಯನ್ನು ಯುವ ಉದ್ಯಮಿ ಲೋಕೇಶ್ ಶೆಟ್ಟಿ ಕೆ. ಕಲ್ಲಂದಡ್ಕ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ವಿಟ್ಲ ಪೊಲೀಸ್ ಉಪ ನಿರೀಕ್ಷಕ ವಿನೋದ್ ರೆಡ್ಡಿ, ಧಾರ್ಮಿಕ ಮುಂದಾಳು ರಾಜಾರಾಮ್ ಶೆಟ್ಟಿ ಕೋಲ್ಪೆಗುತ್ತು, ಉದ್ಯಮಿ ಜಗದೀಶ್ ಅಳಕೆಮಜಲು, ಕುಂಡಡ್ಕ ಬ್ರಹ್ಮಶ್ರೀ ನಾರಾಯಣಗುರು ಸೇವಾ ಸಂಘದ ಅಧ್ಯಕ್ಷ ಹರೀಶ್ ಮರುವಾಳ, ಶಿಕ್ಷಕ ವೇಣುಗೋಪಾಲ ಶೆಟ್ಟಿ ಮರುವಾಳ, ಲಿಂಗಪ್ಪ ಅರ್ಕಲತೋಟ, ಪ್ರಗತಿಪರ ಕೃಷಿಕ ಚಂದ್ರಶೇಖರ ಗಿರಿನಿವಾಸ, ಜಿನ್ನಪ್ಪ ಗಾಳಿಗುಡ್ಡೆ, ಇಡ್ಕಿದು ಗ್ರಾ.ಪಂ. ಸದಸ್ಯ ಚಿದಾನಂದ ಪೆಲತ್ತಿಂಜ, ಉದ್ಯಮಿ ಕೃಷ್ಣಪ್ಪ ಅಡ್ಯಾಲು ಹಾಗೂ ಶ್ರೀವಿಷ್ಣುಮೂರ್ತಿ ಯುವಕವೃಂದದ ಗೌರವಾಧ್ಯಕ್ಷರು ದಯಾನಂದ ಶೆಟ್ಟಿ ಉಜಿರೆಮಾರು, ಕಾರ್ಯಾಧ್ಯಕ್ಷ ಪ್ರಶಾಂತ್ ಶೆಟ್ಟಿ ಬರೆ, ಅಧ್ಯಕ್ಷರು ಆನಂದ ಮಾನಾಜೆಮೂಲೆ, ಉಪಾಧ್ಯಕ್ಷ ಯತೀಶ್ ಹಡೀಲು, ಕಾರ್ಯದರ್ಶಿ ಜಿತೇಶ್ ಕೊಲ್ಯ ಮತ್ತು ಪದಾಧಿಕಾರಿಗಳು, ಸದಸ್ಯರುಗಳು ಉಪಸ್ಥಿತರಿದ್ದರು.

ಇದೇ ಸಂದರ್ಭದಲ್ಲಿ ಜಗದೀಶ್ ಬಾಕಿಮಾರು ಅವರ ಕ್ರೀಡಾಕ್ಷೇತ್ರದ ಸಾಧನೆಯನ್ನು ಗುರುತಿಸಿ ಸನ್ಮಾನಿಸಲಾಯಿತು.
ದಯಾನಂದ ಶೆಟ್ಟಿ ಉಜಿರೆಮಾರು ಸ್ವಾಗತಿಸಿದರು. ದಿವಾಕರ ಉಪ್ಪಳ ನಿರೂಪಿಸಿದರು. ವಿನೋದ್ ಗಾಳಿಗುಡ್ಡೆ ವಂದಿಸಿದರು.

 

LEAVE A REPLY

 Click this button or press Ctrl+G to toggle between Kannada and English

Please enter your comment!
Please enter your name here