ಬೀಜಿಂಗ್: ಚೀನಾದಲ್ಲಿ ಹುಟ್ಟಿಕೊಂಡ ಡೆಡ್ಲಿ ವೈರಸ್ ಮಾರಕ ಕೊರೋನಾ ಇದೀಗ ಇತರ ದೇಶಗಳಿಗೂ ವ್ಯಾಪಿಸಿದ್ದು, 60ಕ್ಕೂ ಅಧಿಕ ದೇಶಗಳಿಗೆ ಹರಡಿದೆ. ಚೀನಾವೊಂದರಲ್ಲೇ ಮೂರು ಸಾವಿರ ಮಂದಿ ಕೊರೋನಾ ವೈರಸ್‍ಗೆ ಬಲಿಯಾಗಿದೆ. ಇಡೀ ವಿಶ್ವದಾದ್ಯಂತ 3250ಕ್ಕೂ ಹೆಚ್ಚು ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. ಚೀನಾದಲ್ಲಿ ಮತ್ತೆ 80,270 ಮಂದಿ ಕೊರೋನಾ ವೈರಸ್‍ಗೆ ತುತ್ತಾಗಿದ್ದು, ಸೂಕ್ತ ಚಿಕಿತ್ಸೆ ನೀಡಲಾಗುತ್ತಿದೆ ಎಂದು ರಾಷ್ಟ್ರೀಯ ಆರೋಗ್ಯ ಆಯೋಗ ವರದಿ ನೀಡಿದೆ.

ಕೊರೊನಾ ವೈರಸ್ ಕಳೆದ ಡಿಸೆಂಬರ್‌ನಲ್ಲಿ ಕೇಂದ್ರ ಚೀನಾದ ಹುಬೇ ಪ್ರಾಂತ್ಯದ ವುಹಾನ್ ನಗರದಲ್ಲಿ ಸ್ಫೋಟಗೊಂಡಿತ್ತು. ಅದರಲ್ಲೂ ಜೀವಂತ ಪ್ರಾಣಿ ಮಾರುಕಟ್ಟೆಯಿಂದ ಹರಡಿತ್ತು ಎಂದು ಹೇಳಲಾಗಿದೆ.ಇನ್ನು ಮಲೇಷ್ಯಾದಿಂದ ಬಂದಿದ್ದ ವ್ಯಕ್ತಿ ಕೇರಳದ ಎರ್ನಾಕುಲಂ ಆಸ್ಪತ್ರೆಯಲ್ಲಿ ರವಿವಾರ ಮೃತಪಟ್ಟಿದ್ದು, ಇವರ ರಕ್ತದ ಮಾದರಿ ಪರೀಕ್ಷೆಗೆ ಒಳಪಡಿಸಿದಾಗ ವರದಿ ನೆಗೆಟಿವ್ ಬಂದಿದೆ. ಇದರೊಂದಿಗೆ ಭಾರತಕ್ಕೂ ಕೊರೋನಾ ಭೀತಿ ಎದುರಾಗಿದೆ ಎನ್ನಲಾಗಿದೆ.

ಚೀನಾದಲ್ಲಿ ದಿನದಿಂದ ದಿನಕ್ಕೆ ಕೊರೋನಾ ವೈರಸ್ ಸೋಕಿತರ ಸಂಖ್ಯೆ ದ್ವಿಗುಣಗೊಳ್ಳುತ್ತಲೇ ಸಾಗುತ್ತಿರುವ ನಡುವೆಯೇ ಸೋಂಕಿತರಿಗೆ ಸೂಕ್ತ ಚಿಕಿತ್ಸೆ ನೀಡಲಾಗುತ್ತಿದ್ದು, ಇದುವರೆಗೂ ಆಸ್ಪತ್ರೆಗಳಲ್ಲಿ ದಾಖಲಾಗಿದ್ದ 2652 ರೋಗಿಗಳು ಗುಣಮುಖರಾಗಿ ತಮ್ಮ ಮನೆಗಳಿಗೆ ತೆರಳಿದ್ದಾರೆ.

ಹಾಂಕಾಂಗ್‍ನಲ್ಲಿ ನೂರು ಮಂದಿಗೆ ಕೊರೋನಾ ವೈರಸ್ ಇದ್ದು, ಇವರಲ್ಲಿ ಇಬ್ಬರು ಮೃತಪಟ್ಟಿದ್ದಾರೆ, ಮಕಾವಾದಲ್ಲಿ 10 ಮಂದಿಯನ್ನು ರೋಗ ಲಕ್ಷಣಗಳು ಕಾಣಿಸಿಕೊಂಡಿದೆ. ತೈವಾನ್‍ನಲ್ಲಿ 42 ಮಂದಿಯಲ್ಲಿ ರೋಗ ಲಕ್ಷಣಗಳು ಕಾಣಿಸಿಕೊಂಡಿದ್ದು, ಓರ್ವ ರೋಗಿ ಮೃತಪಟ್ಟಿದ್ದಾನೆ. ದಕ್ಷಿಣ ಕೊರಿಯಾದಲ್ಲಿ 5328 ಮಂದಿ ಕೊರೋನಾ ವೈರಸ್ ಬಾಧಿತರಾಗಿದ್ದು, ಹೊಸದಾಗಿ 142 ಮಂದಿಯಲ್ಲಿ ರೋಗ ಲಕ್ಷಣಗಳು ಕಾಣಿಸಿಕೊಂಡಿದ್ದು, ಇಬ್ಬರು ರೋಗಿಗಳು ಮೃತಪಟ್ಟಿದ್ದಾರೆ.

ಭಾರತದಲ್ಲಿ ಇಟಾಲಿಯನ್ ದಂಪತಿ ಸೇರಿದಂತೆ ಆರು ಮಂದಿ ಕೊರೋನಾ ವೈರಸ್ ಬಾಧಿತರಾಗಿದ್ದು, ಇತರ ಅನುಮಾನಾಸ್ಪದ ವ್ಯಕ್ತಿಗಳನ್ನು ರೋಗ ಪತ್ತೆ ಪರೀಕ್ಷೆಗೆ ಒಳಪಡಿಸಲಾಗಿದೆ. ಇಟಲಿಯಲ್ಲಿ 2507 ರೋಗಿಗಳಲ್ಲಿ 79 ಮಂದಿ ಮೃತಪಟ್ಟಿದ್ದರೆ, ಇರಾನ್‍ನಲ್ಲೂ ಮಾರಕ ಕೊರೋನಾಗೆ 77 ಮಂದಿ ಜೀವ ಕಳೆದುಕೊಂಡಿದ್ದಾರೆ. ಜಪಾನ್‍ನಲ್ಲಿ 1000 ಮಂದಿಯಲ್ಲಿ ಸೋಂಕು ಕಾಣಿಸಿಕೊಂಡಿದ್ದು, 12 ಮಂದಿ ಮೃತಪಟ್ಟಿದ್ದಾರೆ. ಅಮೆರಿಕದಲ್ಲಿ ಕೇವಲ 7 ಮಂದಿಯಲ್ಲಿ ಕಾಣಿಸಿಕೊಂಡಿದ್ದ ಕೊರೋನಾ ವೈರಸ್ 100 ಮಂದಿಗೆ ಹರಡಿದೆ.

ಇಂಗ್ಲೆಂಡ್‍ನಲ್ಲಿ 39 ಮಂದಿಗೆ ಕೊರೋನಾ ವೈರಸ್ ಸೋಂಕು ಪತ್ತೆಯಾಗಿದ್ದು, ಫ್ರಾನ್ಸ್ನಲ್ಲಿ 21 ಮಂದಿಯಲ್ಲಿ ರೋಗ ಲಕ್ಷಣಗಳು ಕಾಣಿಸಿಕೊಂಡಿದ್ದು, ಒಟ್ಟಾರೆ ಮಾರಕ ಕೊರೋನಾ ವೈರಸ್ ಇಡೀ ವಿಶ್ವವನ್ನೇ ಆವರಿಸುತ್ತಿದೆ. ಕೊರೋನಾ ವೈರಸ್ ಇಡೀ ವಿಶ್ವಕ್ಕೇ ಮಾರಕವಾಗಿ ಪರಿಣಮಿಸುತ್ತಿರುವ ಹಿನ್ನೆಲೆಯಲ್ಲಿ ಅಂತಾರಾಷ್ಟ್ರೀಯ ಸಹಭಾಗಿತ್ವದಲ್ಲಿ ವಿಜ್ಞಾನಿಗಳು ಕೊರೋನಾ ವೈರಸ್‍ಗೆ ಸೂಕ್ತ ಮದ್ದು ಕಂಡುಹಿಡಿಯಲು ಆದ್ಯತೆ ನೀಡಬೇಕು ಎಂದು ಚೀನಾ ಅಧ್ಯಕ್ಷ ಮನವಿ ಮಾಡಿಕೊಂಡಿದ್ದಾರೆ.

LEAVE A REPLY

 Click this button or press Ctrl+G to toggle between Kannada and English

Please enter your comment!
Please enter your name here