ಬಂಟ್ವಾಳ: ವಾಮದಪದವು ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆ, ಆಂತರಿಕ ಗುಣಮಟ್ಟ ಭರವಸಾ ಕೋಶ, ಮಹಿಳಾ ದೌರ್ಜನ್ಯ ತಡೆ ಸಮಿತಿ ಹಾಗೂ ಮಂಗಳೂರು ಇನ್ಸ್‌ಟಿಟ್ಯೂಟ್ ಆಫ್‌ಓಂಕಾಲಜೀ ಸ್ಪೆಷಾಲಿಟಿ ಆಸ್ಪತ್ರೆ ಪಂಪ್‌ವೆಲ್ ಮಂಗಳೂರು ಶಾರದೋತ್ಸವ ಸೇವಾ ಸಮಿತಿ, ಇರ್ವತ್ತೂರು ಪದವು ಇವುಗಳ ಜಂಟಿ ಆಶ್ರಯದಲ್ಲಿ ’ಕ್ಯಾನ್ಸರ್ ಜಾಗೃತಿ ಕಾರ್ಯಕ್ರಮ’ವನ್ನು ಆಯೋಜಿಸಲಾಯಿತು.

ಎಂ.ಐ.ಓ. ಪಂಪ್‌ವೆಲ್ ನ ಸಂಶೋಧನಾ ಮೇಲ್ವಿಚಾರಕ ಡಾ. ಶ್ರೀನಾಥ್ ಬಾಳಿಗ ಕಾರ್ಯಕ್ರಮ ಉದ್ಘಾಟಿಸಿ, ಮಾತನಾಡಿ, ಕ್ಯಾನ್ಸರ್ ರೋಗಕ್ಕೆ ಕಾರಣಗಳು, ಲಕ್ಷಣಗಳು ಯಾವ ರೀತಿಯಲ್ಲಿ ರೋಗವನ್ನು ಪತ್ತೆ ಹಚ್ಚಿ ಗುಣಪಡಿಸಬಹುದು, ಜನರು ರೋಗ ಬರದಂತೆ ತೆಗೆದುಕೊಳ್ಳಬೇಕಾದ ಮುಂಜಾಗ್ರತಾ ಕ್ರಮಗಳ ಬಗ್ಗೆ ಮಾಹಿತಿ ನೀಡಿದರು.

ಇರ್ವತ್ತೂರು ಶಾರದೋತ್ಸವ ಸೇವಾ ಸಮಿತಿಯ ಅಧ್ಯಕ್ಷ ಡಾ. ರಾಮಕೃಷ್ಣ ಎಸ್. ಪ್ರಾಸ್ತವಿಕವಾಗಿ ಮಾತನಾಡಿ, ಶಾರದೋತ್ಸವ ಸೇವಾ ಸಮಿತಿಯು ಸಮಾಜಮುಖಿ ಕಾರ್ಯ ಚಟುವಟಿಕೆಗಳ ಬಗ್ಗೆ ಮಾಹಿತಿ ನೀಡಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಂಶುಪಾಲ ಪ್ರೊ. ಹರಿಪ್ರಸಾದ್ ಬಿ.ಶೆಟ್ಟಿ ವಹಿಸಿ, ಉತ್ತಮ ಹಾಗೂ ಗುಣಮಟ್ಟದ ಜೀವನ ಕ್ರಮ ಹಾಗೂ ಆಹಾರ ಸೇವನೆಯ ಮೂಲಕ ಕ್ಯಾನ್ಸರ್‌ ನಿಂದ ದೂರವಿರಬಹುದು ಎಂದರು.

ಸೋಷಿಯಲ್ ವರ್ಕರ್, ಮೆಡಿಕಲ್ ರಾಜೇಶ್ ಶೆಟ್ಟಿ, ಸಾರ್ವಜನಿಕ ಸಂಪರ್ಕಾಧಿಕಾರಿ ದುರ್ಗಾಪ್ರಸಾದ್ ಅಡಪ, ಇರ್ವತ್ತೂರು ಗ್ರಾ. ಪಂ. ಉಪಾಧ್ಯಕ್ಷ ಶಂಕರ ಶೆಟ್ಟಿ, ಐ.ಟಿ. ಮೇಲ್ವಿಚಾರಕ ನಿತೇಶ್‌ಚಂದ್ರ, ಜಗದೀಶ್, ಐಕ್ಯೂಎಸಿ ಸಂಚಾಲಕ ಡಾ. ರವಿ ಎಂ.ಎನ್., ಮಹಿಳಾ ದೌರ್ಜನ್ಯ ತಡೆ ಸಮಿತಿಯ ಪ್ರೊ. ಚಂದ್ರಿಕಾ ನಾಯಕ್‌ ಯು., ಇತಿಹಾಸ ವಿಭಾಗ ಮುಖ್ಯಸ್ಥ ಪ್ರೊ. ಕೃಷ್ಣಮೂರ್ತಿಎನ್. ಬಿ., ಹಳೆ ವಿದ್ಯಾರ್ಥಿ ದಯಾನಂದ , ಡಾ.ಮೇರಿ ಎಂ. ಜೆ. ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

ರಾಷ್ಟ್ರೀಯ ಸೇವಾ ಯೋಜನಾಧಿಕಾರಿ ಪ್ರೊ. ರೊನಾಲ್ಡ್ ಪ್ರವೀಣ್ ಕೊರೆಯ ಸ್ವಾಗತಿಸಿದರು. ವಿದ್ಯಾರ್ಥಿಗಳಾದ ಸವಿತಾ ಮತ್ತು ಶ್ವೇತಾ ನಾಯಕ್ ಪ್ರಾರ್ಥಿಸಿದರು. ಯಶಸ್ವಿನಿ ವಂದಿಸಿದರು. ಸಂಗೀತಾ ಕಾರ್ಯಕ್ರಮ ನಿರೂಪಿಸಿದರು.

LEAVE A REPLY

 Click this button or press Ctrl+G to toggle between Kannada and English

Please enter your comment!
Please enter your name here