ಬಂಟ್ವಾಳ: ಕಟ್ಟೆಮಾರ್ ಅಮ್ಟೂರು ಶ್ರೀ ಮಂತ್ರದೇವತಾ ಕ್ಷೇತ್ರ ಸಾನಿಧ್ಯದ ಪುನರ್ ಪ್ರತಿಷ್ಠಾ ಕಲಶಾಭಿಷೇಕದ ಧಾರ್ಮಿಕ ಸಭಾ ಕಾರ್ಯಕ್ರಮವನ್ನು ವಿವೇಕಾನಂದ ವಿದ್ಯವರ್ಧಕ ಸಂಘದ ಅಧ್ಯಕ್ಷ ಡಾl ಕಲ್ಲಡ್ಕ ಪ್ರಭಾಕರ ಭಟ್ ಉದ್ಘಾಟಿಸಿ, ಪ್ರಕೃತಿಯನ್ನು ಪೂಜಿಸುವ ದೇಶ ನಮ್ಮದು, ಮಹಿಳೆಯರಿಗೆ ದೇವತಾ ಸ್ಥಾನ ಕೊಟ್ಟ ದೇಶ ನಮ್ಮದು, ದೇಶದ ಪ್ರಸ್ತುತ ವಿದ್ಯಮಾನದ ಬಗ್ಗೆ ಜಾಗ್ರತರಾಗಬೇಕು ಮತ್ತು ದೈವ ದೇವರ ಬಗ್ಗೆ ನಂಬಿಕೆ ಹುಟ್ಟಿಸುವ ಕಾರ್ಯ ಅಗತ್ಯವಾಗಿ ಆಗಬೇಕಾಗಿದೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಮೋಹನ್ ರಾಜ ಚೌಟ ಪುಂಚೋಲಿಮಾರ್ ಗುತ್ತು ಮಾತನಾಡಿ, ನಮ್ಮ ಜೀವನ ನಂಬಿಕೆಯ ಮೇಲೆ ನಿಂತಿದೆ, ನಂಬಿಕೆ ಕಡಿಮೆಯಾದಾಗ ಅದು ಸಂಘರ್ಷಕ್ಕೆ ದಾರಿಯಾಗುತ್ತದೆ ಆದ್ದರಿಂದ ಸಮಾಜದಲ್ಲಿ ನಂಬಿಕೆಯೇ ಮೂಲ ಎಂದರು. ಮುಖ್ಯ ಅತಿಥಿಯಾಗಿ ಆಗಮಿಸಿದ ಮಾಜಿ ಶಾಸಕ ಎ. ರುಕ್ಮಯ ಪೂಜಾರಿ ಮಾತನಾಡಿ, ಶ್ರೀ ಮಂತ್ರ ದೇವತಾ ಸಾನಿಧ್ಯ ಕೇವಲ ಒಂದು ಮನೆಗೆ ಸೀಮಿತವಾಗಿರದೆ, ಎಲ್ಲರ ಆರಾಧನೆಯ ಸ್ಥಳವಾಗಬೇಕು ಎಂದರು. ಕ್ಷೇತ್ರದ ಪ್ರಮುಖರಾದ ಮನೋಜ್ ಕುಮಾರ್ ಕಟ್ಟೆಮಾರ್ ಕ್ಷೇತ್ರದ ಸಾನಿಧ್ಯದ ಹಿನ್ನಲೆಯ ಬಗ್ಗೆ ವಿವರಿಸಿದರು.
ಈ ಸಂದರ್ಭದಲ್ಲಿ ಬದನಾಡಿ ಶ್ರೀ ನಾಗಬ್ರಹ್ಮ ಸುಬ್ರಮಣ್ಯ ಭಜನಾ ಮಂಡಳಿ ಅಧ್ಯಕ್ಷ ರವೀಂದ್ರ ಪೂಜಾರಿ ಬದನಾಡಿ, ಬಿರುವೆರ್ ಕಡೇಶಿವಾಲಯದ ಸಂಚಾಲಕ, ನಿವೃತ್ತ ಯೋಧ ವಿದ್ಯಾಧರ ಪೂಜಾರಿ, ಮುಂಬೈಯ ಸಾಮಾಜಿಕ ಮುಖಂಡ ಅಶೋಕ್ ಕರ್ಕೇರಾ ಬಂಟ್ವಾಳ, ಮಾಜಿ ಜಿ.ಪಂ. ಸದಸ್ಯ, ಕಲ್ಲಡ್ಕ ಶ್ರೀರಾಮ ಮಂದಿರದ ಅಧ್ಯಕ್ಷ ಆರ್‍. ಚೆನ್ನಪ್ಪ ಕೋಟ್ಯಾನ್, ತುಳು ನಿರೂಪಕ ದಿನೇಶ್ ಸುವರ್ಣ ರಾಯಿ ಅವರುಗಳನ್ನು ಸನ್ಮಾನಿಸಲಾಯಿತು. ನಾಗಮ್ಮ ಶಾಂತಿಪಲ್ಕೆ, ಲೀಲಾವತಿ ರಾಯಪ್ಪಕೋಡಿ, ಸೀತು ಪೊಯ್ಯೇಕಂಡ ಅಮ್ಟೂರ್, ಉಮೇಶ್ ತಾರಾಬರಿ ಅಮ್ಟೂರ್, ಲಿಂಗಪ್ಪ ಪೂಜಾರಿ ಕರಿಂಗಾಣ, ವೆಂಕಪ್ಪ ಶೆಟ್ಟಿಗಾರ್ ಅಮ್ಟೂರ್, ಗಣೇಶ್ ಶೆಟ್ಟಿ ಬಾಳಿಕೆ, ಅಚ್ಚು ಪೆಲತಕಟ್ಟೆ ಸಜಿಪ. ಅವರಿಗೆ ಧನಸಹಾಯ ನೀಡಲಾಯಿತು.
ಸಾಂಸ್ಕೃತಿಕ ಕಾರ್ಯಕ್ರಮಕ್ಕೆ ಯಕ್ಷಗಾನ ಹಾಸ್ಯ ವೈಭವ ಕಾರ್ಯಕ್ರಮದಲ್ಲಿ ಪ್ರಖ್ಯಾತ ಯಕ್ಷಗಾನ ಭಾಗವತರಾದ ಪಟ್ಲ ಸತೀಶ್ ಶೆಟ್ಟಿ, ರವೀಂದ್ರ ಕನ್ನಡಿಕಟ್ಟೆ, ಕಾವ್ಯಶ್ರೀ ಅಜೇರು ,ಅವರ ಗಾನ ಜುಗಲ್ಬಂದಿ ಹಾಗೂ ಹಾಸ್ಯ ಕಲಾವಿದರಾದ ಅರವಿಂದ ಬೋಲಾರ್, ದಿನೇಶ್ ಶೆಟ್ಟಿಗಾರ್ ಕೊಡಪದವು ,ರಾಜೇಶ್ ನಿಟ್ಟೆ ಅವರ ಹಾಸ್ಯ ತುಣುಕುಗಳು ಪ್ರೇಕ್ಷಕರನ್ನು ನಗೆಗಡಲಲ್ಲಿ ತೇಲಿಸಿತು .ಆ ಬಳಿಕ ಶ್ರೀ ಚಿಂತಾಮಣಿ ಡಾನ್ಸ್ ಗ್ರೂಪ್ ಮತ್ತು ಟೀಮ್ ಡಿವೈನ್ ಬಿ.ಸಿ. ರೋಡ್ ನಿಂದ ಡಾನ್ಸ್ ಕಾರ್ಯಕ್ರಮ ನಡೆಯಿತು.
ಕಾರ್ಯಕ್ರಮದಲ್ಲಿ ಅತಿಥಿಗಳಾಗಿ ಉದ್ಯಮಿ ವಿಜಯ ಬಂಗೇರ ಮುಂಬೈ, ಸೀತಾರಾಮ ಮಂಗಳೂರು, ಉದ್ಯಮಿ ಹರೀಶ್ ಶೆಟ್ಟಿ ಮುಂಬೈ, ಯುವ ಉದ್ಯಮಿ ಜಗದೀಶ್ ಬಜ್ಜರ್ ಅಮ್ಟೂರ್, ಶೈಲೇಶ್ ಪೂಜಾರಿ ಕುಟ್ಟಿಗುಡ್ಡೆ ಶೈಲೇಶ್ ಮೆಲ್ಕಾರ್, ಸಂತೋಷ ಪೂಜಾರಿ ಮುಂಬೈ, ಲಕ್ಷ್ಮಣ ಪೂಜಾರಿ ಇರುವೈಲ್ ಉದ್ಯಮಿ ಮುಂಬೈ ಉಪಸ್ಥಿತರಿದ್ದರು ,
ಚೆನ್ನಪ್ಪ ಕೋಟ್ಯಾನ್ ಸ್ವಾಗತಿಸಿ, ವಸಂತ ಪೂಜಾರಿ ಬಟ್ಟೆಹಿತ್ಲು ವಂದಿಸಿದರು. ದಿನೇಶ್ ಸುವರ್ಣ ರಾಯಿ ಕಾರ್ಯಕ್ರಮ ನಿರೂಪಿಸಿದರು.
ಬಳಿಕ ಶ್ರೀ ಮಂತ್ರದೇವತೆ ಹಾಗೂ ಗುಳಿಗ ದೈವಗಳಿಗೆ ಕೋಲ ಉಸ್ತವ ಜರಗಿತು.

LEAVE A REPLY

 Click this button or press Ctrl+G to toggle between Kannada and English

Please enter your comment!
Please enter your name here