ಬಂಟ್ವಾಳ: ಕಲ್ಲಡ್ಕ ಶ್ರೀರಾಮ ಹಿರಿಯ ಪ್ರಾಥಮಿಕ ಶಾಲೆಯ ವೇದವ್ಯಾಸ ಧ್ಯಾನಮಂದಿರದಲ್ಲಿ ಭಾರತೀಯ ಭೌತಶಾಸ್ತ್ರಜ್ಞ ಸರ್ ಸಿ.ವಿ. ರಾಮನ್‌ ರವರು ಆವಿಷ್ಕರಿಸಿದ ರಾಮನ್ ಪ್ರಭಾವದ ದಿನವನ್ನು ಗುರುತಿಸುವ ರಾಷ್ಟ್ರೀಯ ವಿಜ್ಞಾನ ದಿನಾಚರಣೆಯನ್ನು ಆಚರಿಸಲಾಯಿತು.
ಹಿಂದಿನಿಂದಲೂ ವಿಜ್ಞಾನವು ಭಾರತೀಯರ ಜೀವನದಲ್ಲಿ ಹಾಸುಹೊಕ್ಕಾಗಿದೆ. ನಮ್ಮ ಭಾರತೀಯರ ಪರಂಪರೆಯಲ್ಲಿ ಹಲವು ಪದ್ಧತಿಗಳಿವೆ. ಇದನ್ನು ಮೂಢನಂಬಿಕೆಯೆಂದು ಕಡೆಗಣಿಸದೆ, ಅದರ ವೈಜ್ಞಾನಿಕ ಮೂಲವನ್ನು ಹುಡುಕಬೇಕಾಗಿದೆ. ವೈಜ್ಞಾನಿಕ ಚಿಂತನೆಯೊಂದಿಗೆ ಎಲ್ಲರೂ ವಿಜ್ಞಾನಿಗಳಾಗಿ ಎಂದು ಕಲ್ಲಡ್ಕ ಶ್ರೀರಾಮ ಪ್ರೌಢಶಾಲೆಯ ವಿಜ್ಞಾನ ಅಧ್ಯಾಪಕ ಗೋಪಾಲ್ ಶ್ರೀಮಾನ್ ಶುಭ ಹಾರೈಸಿದರು.


ಕಾರ್ಯಕ್ರಮಕ್ಕೆ ಅಗಮಿಸಿದ ಅತಿಥಿಗಳಿಗೆ ಗಿಡವನ್ನು ಬೆಳೆಸಿ, ಪರಿಸರವನ್ನು ಉಳಿಸಿ ಎಂಬ ಧ್ಯೇಯದೊಂದಿಗೆ ಗಿಡವನ್ನು ನೀಡಿ ಸ್ವಾಗತಿಸಲಾಯಿತು. ಕಾರ್ಯಕ್ರಮವನ್ನು ಶಾಲೆಯ ವಿದ್ಯಾರ್ಥಿಗಳಾದ ಭರತ್ ರಾಜ್ ಮತ್ತು ಶ್ರವಣ್ ರವರ ವೈಜ್ಞಾನಿಕ ಮಾದರಿಯ ಮೂಲಕ ಅತಿಥಿಗಳು ಉದ್ಘಾಟಿಸಿದರು.
ವಿದ್ಯಾರ್ಥಿಗಳು ವಿಜ್ಞಾನಕ್ಕೆ ಸಂಬಂಧಪಟ್ಟ ರಂಗೋಲಿ ಬಿಡಿಸಿದರು. ವಿಜ್ಞಾನ ಪ್ರಯೋಗಗಳು, ವಿಜ್ಞಾನಿಗಳು ಮತ್ತು ಸಂಶೋಧನೆಯ ಪರಿಚಯ, ವಿಜ್ಞಾನಿಗಳ ಹೆಸರುಗಳ ಜುಗಲ್ ಬಂಧಿ, ಪರಿಸರ ಗೀತೆ ಮತ್ತು ಭಾಷಣ ಕಾರ್ಯಕ್ರಮಗಳು ನಡೆದವು. ವಿಜ್ಞಾನದ ಪರಿಕರಗಳ ಪ್ರದರ್ಶನವನ್ನು ಆಯೋಜಿಸಲಾಗಿತ್ತು. ವೇದಿಕೆಯಲ್ಲಿ 15 ಭಾರತೀಯ ವಿಜ್ಞಾನಿಗಳ ಛಾಯಚಿತ್ರಗಳನ್ನು ಪ್ರದರ್ಶಿಸಿದ್ದು, ಕಾರ್ಯಕ್ರಮದ ವಿಶೇಷತೆ. ನಂತರ ದಾಸವಾಳದಿಂದ ತಯಾರಿಸಿದ ದೇಶಿಯ ಪಾನೀಯವನ್ನು ವಿತರಿಸಲಾಯಿತು.

ವೇದಿಕೆಯಲ್ಲಿ ಶ್ರೀರಾಮ ಪದವಿ ಮಹಾವಿದ್ಯಾಲಯದ ವಿಜ್ಞಾನ ವಿಭಾಗದ ಉಪನ್ಯಾಸಕಿ ವಿದ್ಯಾಶ್ರೀ, ಪದವಿಪೂರ್ವ ವಿಭಾಗದ ವಿಜ್ಞಾನ ಉಪನ್ಯಾಸಕಿ ರಮ್ಯಶ್ರೀ ಹಾಗೂ ಶಾಲಾ ಮುಖ್ಯ ಶಿಕ್ಷಕ ರವಿರಾಜ್ ಕಣಂತೂರು ಉಪಸ್ಥಿತರಿದ್ದರು.
ವಿದ್ಯಾರ್ಥಿಗಳಾದ ಹೇಮಂತ್ ಸಿ.ಎಚ್. ಸ್ವಾಗತಿಸಿ, ಕಿಶನ್ ವಂದಿಸಿದರು. ಶಾಲಾ ನಾಯಕ ದೀಕ್ಷಿತ್ ಕಾರ್ಯಕ್ರಮ ನಿರೂಪಿಸಿದರು.

LEAVE A REPLY

 Click this button or press Ctrl+G to toggle between Kannada and English

Please enter your comment!
Please enter your name here