ಬಂಟ್ವಾಳ: ಅಮೃತಸಂಜೀವಿನಿ (ರಿ‌.) ಮಂಗಳೂರು ಮತ್ತು ಜ್ಞಾನ ಸಂಜೀವಿನಿ ವತಿಯಿಂದ ಯೋಧರಿಗೆ “ಯೋಧ ರತ್ನ” ಬಿರುದು ಪ್ರದಾನ ಮತ್ತು ಗೌರವಾರ್ಪಣೆ ಕಾರ್ಯಕ್ರಮ ಕೆಂಜಾರಿನ ಶ್ರೀ ದೇವಿ ತಾಂತ್ರಿಕ ಮಹಾವಿದ್ಯಾಲಯದಲ್ಲಿ ನಡೆಯಿತು.
ಕಾರ್ಯಕ್ರಮದಲ್ಲಿ ಸೇವಾ ಅವಧಿಯಲ್ಲಿ ನಿಧನರಾದ ಲಾನ್ಸ್ ನಾಯಕ್ ಶಿವರಾಮ ಕೆ. ಪಿ., ಸುಬೆದಾರ್ ಗೋಪಾಲಕೃಷ್ಣ ಗೌಡ, ಹವಲ್ದಾರ್ ಗಿರೀಶ ಅವರಿಗೆ ಮರಣೋತ್ತರವಾಗಿ ಯೋಧ ರತ್ನ ಬಿರುದು ನೀಡಿ ಗೌರವಿಸಲಾಯಿತು.

ಸೇವಾ ಅವಧಿಯಲ್ಲಿ ಗಾಯಾಳುಗಳಾಗಿ ನಿವೃತ್ತರಾದ ಚಂದಪ್ಪ ಡಿ.ಎಸ್., ಬಾಲಕೃಷ್ಣ ಭಂಡಾರಿ ಎಲ್ಲೂರು ಹಾಗೂ ಅಸೌಖ್ಯರಾಗಿ ನಿವೃತ್ತರಾದ ಉಮೇಶ್ ಮಾಲಾಡಿ ಅವರನ್ನು ಯೋಧ ರತ್ನ ಬಿರುದು ನೀಡಿ ಗೌರವಿಸಲಾಯಿತು.

ಮುಖ್ಯ ಅತಿಥಿ ಕರ್ನಲ್ ಎ.ಕೆ. ಜಯಚ್ಂದ್ರನ್ ಮಾತನಾಡಿ, ವಿದ್ಯಾರ್ಥಿಗಳಿಗೆ ಯೋಧರ ಬದುಕಿನ ಬಗ್ಗೆ ಹಾಗೂ ಸೇನೆಗೆ ಸೇರಲು ಇರುವ ಮಾರ್ಗಗಳ ಬಗ್ಗೆ ಮಾಹಿತಿಯನ್ನು ನೀಡಿದರು. ಗೌರವ ಅತಿಥಿ ಗಣೇಶ್ ಕುಲಾಲ್ ಮಾತನಾಡಿ, ದೆಹಲಿಯ ಘಟನೆಯನ್ನು ಉಲ್ಲೇಖಿಸುತ್ತಾ, ಇಂತಹ ಕಾರ್ಯಕ್ರಮಗಳು ಪ್ರತಿ ಕಾಲೇಜಿನಲ್ಲಿ ಆದರೆ ಮುಂದಕ್ಕೆ ಯೋಧರ ಮೇಲೆ ಕಲ್ಲು ಹಾಗು ಯಾಸಿಡ್ ದಾಳಿ ಮಾಡುವಂತಹ ಮನಸ್ಥಿತಿ ಹುಟ್ಟುವುದಿಲ್ಲ ಎಂದು ಹೇಳಿದರು.


ಕಾರ್ಯಕ್ರಮದಲ್ಲಿ ಅತಿಥಿಗಳನ್ನು ಸ್ವಾಮಿ‌ ವಿವೇಕಾನಂದರ ಪುಸ್ತಕವನ್ನು ನೀಡಿ ಸ್ವಾಗತಿಸಲಾಯಿತು.
ಈ ಸಂದರ್ಭದಲ್ಲಿ ಗೌರವ ಅತಿಥಿಗಳಾಗಿ ಆಶಿಶ್ ಶೆಟ್ಟಿ ಹಾಗೂ ಅತಿಥಿಗಳಾಗಿ ಕಾಲೇಜಿನ ನಿರ್ದೇಶಕ ಡಾ.ಕೆ.ಇ. ಪ್ರಕಾಶ್ ಮತ್ತು ಜ್ಞಾನ ಸಂಜೀವಿನಿಯ ದೀಕ್ಷಿತ್ ಕುಲಾಲ್, ಕಾರ್ಯಕ್ರಮದ ಸಂಯೋಜಕ ಡಾ.ವಿಜಯ ಆಳ್ವ, ಅಮೃತಸಂಜೀವಿನಿಯ ಸುಶಾಂತ್ ಅಮಿನ್ ಮತ್ತು ಜ್ಞಾನ ಸಂಜೀವಿನಿಯ ಕೀರ್ತನ್ ದಾಸ್, ಅಮೃತಸಂಜೀವಿನಿ ಮತ್ತು ಜ್ಞಾನ ಸಂಜೀವಿನಿಯ ಸದಸ್ಯರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ಕಾಲೇಜಿನ ಪ್ರಾಂಶುಪಾಲ ಡಾ‌. ದಿಲೀಪ್ ಕುಮಾರ್ ಸ್ವಾಗತಿಸಿ, ಸಾಕ್ಷಾತ್ ಶೆಟ್ಟಿ ವಂದಿಸಿದರು. ಲಿಯಾನ ಮತ್ತು ಮೇಘ ಸಾಲ್ಯಾನ್ ಕಾರ್ಯಕ್ರಮವನ್ನು ನಿರೂಪಿಸಿದರು.

LEAVE A REPLY

 Click this button or press Ctrl+G to toggle between Kannada and English

Please enter your comment!
Please enter your name here