


ಬಂಟ್ವಾಳ: ಕಲ್ಲಡ್ಕ ಶ್ರೀರಾಮ ಪ್ರಥಮ ದರ್ಜೆ ಮಹಾವಿದ್ಯಾಲಯದ ದಶಮಾನೋತ್ಸವದ ಅಂಗವಾಗಿ ಮಂಗಳೂರು ವಿಶ್ವವಿದ್ಯಾನಿಲಯ ಮಟ್ಟದ ಅಂತರ್ ಕಾಲೇಜು ಮಹಿಳಾ ವಾಲಿಬಾಲ್ ಪಂದ್ಯಾಟದ ಸಂದರ್ಭ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಇದರ ಪ್ರಾಯೋಜಕತ್ವದಲ್ಲಿ ರಾಷ್ಟ್ರ ದೇವೋಭವ ಖ್ಯಾತಿಯ ಮಂಗಳೂರು ಸನಾತನ ನಾಟ್ಯಾಲಯದ ನಿರ್ದೇಶಕ ಚಂದ್ರಶೇಖರ್ ಶೆಟ್ಟಿರವರ ಮಾರ್ಗದರ್ಶನದಲ್ಲಿ ಪ್ರಸ್ತುತಪಡಿಸಿದ ನುಡಿ -ನಾದ -ನಾಟ್ಯಗಳ ಸಂಗಮ ಪುಣ್ಯಭೂಮಿ ಭಾರತ ಎಂಬ ನಾಟ್ಯವೈಭವ ಕಾರ್ಯಕ್ರಮವು ಶ್ರೀರಾಮ ವಿದ್ಯಾಕೇಂದ್ರದ ಆವರಣದಲ್ಲಿ ಜರುಗಿತು.
ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಪ್ರಸ್ತುತ ಪುಣ್ಯಕೋಟಿಯ ಪರಿಸ್ಥಿತಿ, ಗಂಗಾವತಾರ, ವಿವೇಕಾನಂದ ಮತ್ತು ಅವರ ಸಾಧನೆ, ಭಾರತೀಯ ಸಂಸ್ಕೃತಿ ಸಂಸ್ಕಾರ, ವೀರ ಸಾವರ್ಕರ್, ದೇಶದ ಬೆನ್ನೆಲುಬು- ರೈತನ ಗುಣಗಾನವನ್ನು ’ನುಡಿ-ನಾದ-ನಾಟ್ಯ’ಗಳ ಮೂಲಕ ಸನಾತನ ನಾಟ್ಯಾಲಯದ ವಿದ್ಯಾರ್ಥಿಗಳು ಪ್ರಸ್ತುತ ಪಡಿಸಿದರು. ಕಾರ್ಯಕ್ರಮದ ಅಂತಿಮದಲ್ಲಿ ಆದರ್ಶ ಗೋಖಲೆಯವರ ನಿರ್ದೇಶನದಲ್ಲಿ ಸಭಿಕರೆಲ್ಲರು ಒಂದು ಅಂಗುಲ ಆಹಾರವನ್ನು ಬಿಸಾಡುವುದಿಲ್ಲ ಎಂಬ ಪ್ರತಿಜ್ಞೆ ಸ್ವೀಕರಿಸಿರುವುದು ವಿಶೇಷವಾಗಿತ್ತು.
ಕಾರ್ಯಕ್ರವು ಕರ್ನಾಟಕ ಕಲಾಶ್ರೀ ವಿದುಷಿ ಶಾರದಾಮಣಿ ಶೇಖರ್ರವರ ನಿರ್ದೇಶನ, ವಿದುಷಿ ಶ್ರೀಲತಾ ನಾಗರಾಜರವರ ನೃತ್ಯ ನಿರ್ದೇಶನ ಮತ್ತು ಪ್ರಖರ ವಾಗ್ಮಿ ಆದರ್ಶ ಗೋಖಲೆರವರ ನಿರೂಪಣೆಯಲ್ಲಿ ನಾಟ್ಯವೈಭವವು ಮೂಡಿಬಂತು.





