ಬಂಟ್ವಾಳ: ಸಿ.ವಿ.ರಾಮನ್‌ರವರು ನಮ್ಮ ದೇಶ ಕಂಡ ಅತ್ಯುತ್ತಮ ವಿಜ್ಞಾನಿ, ಭಾರತೀಯ ವಿಜ್ಞಾನಕ್ಕೆ ಅವರ ಕೊಡುಗೆ ಶ್ಲಾಘನೀಯ, ವಿಜ್ಞಾನದಲ್ಲಿ ನೊಬೆಲ್ ಪಾರಿತೋಷಕ ಪಡೆದ ಮೊದಲ ಭಾರತೀಯ ವಿಜ್ಞಾನಿ ಸಿ.ವಿ.ರಾಮನ್. ಬಡತನದಲ್ಲೇ ಬೆಳೆದವರು, ಪ್ರತಿಯೊಂದು ವಿಷಯವನ್ನು ಬಹಳ ಆಸಕ್ತಿಯಿಂದ, ಕುತೂಹಲದಿಂದ ಗಮನಿಸುತ್ತಿದ್ದರು ಹಾಗೂ ಪ್ರಬಲ ಆತ್ಮವಿಶ್ವಾಸವನ್ನು ಹೊಂದಿದ್ದರು.ಇದು ಅವರ ಸಾಧನೆಗೆ ಕಾರಣವಾಯಿತು.ನಾವು ಪ್ರತಿ ನಿತ್ಯ ಪ್ರತಿಯೊಂದು ವಿಷಯದಲ್ಲೂ ವಿಜ್ಞಾನವನ್ನು ಹುಡುಕಿ, ಭಾರತೀಯ ವಿಜ್ಞಾನ ಇನ್ನಷ್ಟು ಎತ್ತರಕ್ಕೆ ಬೆಳೆಯಲು ಕಾರಣರಾಗೋಣ ಎಂದು ಶ್ರೀರಾಮ ಪದವಿ ವಿಭಾಗದ ಭೌತಶಾಸ್ತ್ರ ಉಪನ್ಯಾಸಕ  ಅಭಿಷೇಕ್‌ ಹೇಳಿದರು.

ಅವರು ಶ್ರೀರಾಮ ಪ್ರೌಢಶಾಲೆ ಮಧುಕರ ಸಭಾಂಗಣದಲ್ಲಿ ನಡೆದ ರಾಷ್ಟ್ರೀಯ ವಿಜ್ಞಾನ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ಕೃತಕ ಜ್ವಾಲಾಮುಖಿಯ ಪ್ರಾತ್ಯಕ್ಷಿಕೆಯನ್ನು ಮಾಡಿ ತೋರಿಸುವ ಮೂಲಕ ಕಾರ್ಯಕ್ರಮ ಉದ್ಘಾಟಿಸಲಾಯಿತು. ವೇದಿಕೆಯಲ್ಲಿ ಪ್ರೌಢಶಾಲಾ ಮುಖ್ಯ ಶಿಕ್ಷಕಿ ವಸಂತಿಕುಮಾರಿ ಉಪಸ್ಥಿತರಿದ್ದರು. ಅಟಲ್‌ ಟಿಂಕರಿಂಗ್ ಪ್ರಯೋಗಾಲಯದಲ್ಲಿ ವಿವಿಧ ರೀತಿಯ ವಿಜ್ಞಾನ ವಸ್ತು ಪ್ರದರ್ಶನವನ್ನುಏರ್ಪಡಿಸಲಾಗಿತ್ತು.ಎಲ್ಲಾ ವಿದ್ಯಾರ್ಥಿಗಳು ಪ್ರದರ್ಶನವನ್ನು ವೀಕ್ಷಿಸಿದರು. ವಿದ್ಯಾರ್ಥಿನಿಯರಾದ ತ್ರಿಶಾ ಸ್ವಾಗತಿಸಿ, ಹೇಮಶ್ರೀ ವಂದಿಸಿದರು. ಭೂಮಿಕಾ ಕಾರ್ಯಕ್ರಮ ನಿರೂಪಿಸಿದರು.

 

LEAVE A REPLY

 Click this button or press Ctrl+G to toggle between Kannada and English

Please enter your comment!
Please enter your name here