ಇರಾನ್​: ಚೀನಾ ದೇಶಕ್ಕೆ ಹಲವು ದಿನಗಳಿಂದ ಕಾಡಿದ ಕೊರೊನಾ ವೈರಸ್​ ಈಗ ಇರಾನ್​ ಗೆ ಲಗ್ಗೆ ಇಟ್ಟಿದೆ. ಇರಾನ್ ನ​ ಉಪಾಧ್ಯಕ್ಷರು ಸೇರಿ ದೇಶದಲ್ಲಿ ಒಟ್ಟು 245 ಜನರಿಗೆ ಕೊರೊನಾ ವೈರಸ್​ ತಗುಲಿರುವುದು ಧೃಡವಾಗಿದೆ.
ಈ ಕುರಿತಾಗಿ ಸುದ್ದಿಗೋಷ್ಠಿ ನಡೆಸಿರುವ ಇರಾನ್​ನ ಆರೋಗ್ಯ ಸಚಿವಾಲಯ, ಒಂದೇ ದಿನದಲ್ಲಿ 106 ಜನರಲ್ಲಿ ವೈರಸ್​ ಪತ್ತೆಯಾಗಿದ್ದು, ಇದುವರೆಗೆ ಒಟ್ಟು 245 ಜನರಲ್ಲಿ ವೈರಸ್​ ಇರುವುದು ಧೃಡವಾಗಿದೆ ಎಂದು ತಿಳಿಸಿದೆ. 26 ಜನರು ಈ ವೈರಸ್​ನಿಂದಾಗಿ ಮೃತರಾಗಿದ್ದಾರೆ ಎಂಬ ಮಾಹಿತಿಯನ್ನು ಕೂಡಾ ಸಚಿವಾಲಯ ಹಂಚಿಕೊಂಡಿದೆ. ಇರಾನ್​ನಲ್ಲಿ ಒಟ್ಟು ಏಳು ಉಪಾಧ್ಯಕ್ಷರುಗಳಿದ್ದು, ಅದರಲ್ಲಿ ಮಹಿಳಾ ವ್ಯವಹಾರಗಳ ಮೇಲ್ವಿಚಾರಣೆಯ ಜವಾಬ್ದಾರಿ ಇರುವ ಮಸೌಮೆಹ್​ ಎಬ್ಟೆಕರ್​ಗೆ ವೈರಸ್​ ಸೋಂಕಿದೆ. ಸದ್ಯ ಮಸೌಮೆಹ್​ ಎಬ್ಟೆಕರ್​ ಅವರಿಗೆ ಮನೆಯಲ್ಲಿಯೇ ಪ್ರತ್ಯೇಕವಾಗಿ ಚಿಕಿತ್ಸೆ ನೀಡಲಾಗುತ್ತಿದ್ದು, ಅವರೊಟ್ಟಿಗಿದ್ದ ಅಧಿಕಾರಿ ವರ್ಗದವರನ್ನು ತಪಾಸಣೆಗೆ ಒಳಪಡಿಸಲಾಗಿದೆ. ಸಂಸತ್ತಿನ ರಾಷ್ಟ್ರೀಯ ಭದ್ರತೆ ಮತ್ತು ವಿದೇಶಾಂಗ ವ್ಯವಹಾರಗಳ ಸಮಿತಿಯ ಮುಖ್ಯಸ್ಥ ಮೊಜ್ತಾಬಾ ಜೊಲ್ನೋರ್​ ಅವರಿಗೂ ಕೋಡಾ ಸೋಂಕು ತಗುಲಿರುವುದು ವರದಿಯಾಗಿದೆ.

 

LEAVE A REPLY

 Click this button or press Ctrl+G to toggle between Kannada and English

Please enter your comment!
Please enter your name here