ಬಂಟ್ವಾಳ: ಬೌದ್ಧಿಕ ಸಾಮರ್ಥ್ಯವನ್ನು ಹೆಚ್ಚಿಸುವುದರೊಂದಿಗೆ ಆಧ್ಯಾತ್ಮಿಕ ಹಾಗೂ ರಾಷ್ಟ್ರ ಚಿಂತನೆಗಳನ್ನೂ ಹೆಚ್ಚಿಸುವುದು ಶ್ರೀರಾಮ ವಿದ್ಯಾ ಕೇಂದ್ರದ ಕಾರ್ಯವಾಗಿದೆ ಎಂದು ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಡಾ. ಪ್ರಭಾಕರ್ ಭಟ್ ಕಲ್ಲಡ್ಕ ಹೇಳಿದರು.
ಅವರು ಕಲ್ಲಡ್ಕ ಶ್ರೀರಾಮ ಪದವಿಪೂರ್ವ ವಿದ್ಯಾಲಯದ ೨೦೧೯-೨೦ನೇ ಸಾಲಿನ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳ ದೀಪ ಪ್ರದಾನ ಕಾರ್ಯಕ್ರಮದಲ್ಲಿ ಮಾತನಾಡಿದರು. ಆಚರಣೆ ಹಾಗೂ ಸಂಸ್ಕೃತಿಯನ್ನು ಮುಂದಿನ ಪೀಳಿಗೆಗೆ ಬೆಳಕಿನ ಮೂಲಕ ಹಸ್ತಾಂತರಿಸಿ, ಜೀವನದ ಸಾರ್ಥಕತೆಯೆಡೆಗೆ ಸಾಗುವುದೇ ದೀಪ ಪ್ರದಾನ ಎಂದು ಹೇಳಿದರು.
ಕರ್ನಾಟಕ ಜಾನಪದ ವಿಶ್ವವಿದ್ಯಾಲಯದ ಉಪನ್ಯಾಸಕಿ ಹಾಗೂ ಮಹಿಳಾ ಲೈಂಗಿಕ ದೌರ್ಜನ್ಯ ತಡೆ ಸಮಿತಿಯ ಅಧ್ಯಕ್ಷೆ ಡಾ. ಭಾರತಿ ಮರವಂತೆ ಅವರು, ದೇಶಭಕ್ತಿ ಹಾಗೂ ಸಂಸ್ಕೃತಿಯ ಸಮ್ಮೇಳನ ಶ್ರೀರಾಮ ವಿದ್ಯಾಕೆಂದ್ರ ಎಂದು ಪ್ರಶಂಸಿಸಿದರು. ಪುತ್ತೂರಿನ ವಿವೇಕಾನಂದ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲ ಡಾ. ಸಿ.ಕೆ ಮಂಜುನಾಥ್ ಅವರು, ದೀಪ ಪ್ರದಾನವು ವಿದ್ಯಾರ್ಥಿಗಳ ಅಂತರಾಳದ ದೀಪವನ್ನು ಪ್ರಜ್ವಲಿಸಲಿ ಎಂದರು ಉಡುಪಿಯ ಬಸ್ರೂರು ಶಾರದಾ ಕಾಲೇಜಿನ ನಿವೃತ್ತ ಪ್ರಾಂಶುಪಾಲ ಪ್ರೊ. ಕನರಾಡಿ ವಾದಿರಾಜ್ ಭಟ್ ಹೇಳಿದರು. ಮುಂಬಯಿಯ ಹೋಟೇಲ್ ಉದ್ಯಮಿ ಬೆರ್ಮುಟ್ಟು ಚಂದ್ರಕೃಷ್ಣ ಶೆಟ್ಟಿ ಅವರು ವಿದ್ಯಾರ್ಥಿಗಳ ಭವಿಷ್ಯ ಉಜ್ವಲವಾಗಲಿ ಎಂದು ಹಾರೈಸಿದರು.
ಶ್ರೀರಾಮ ವಿದ್ಯಾಕೇಂದ್ರದ ಅಧ್ಯಕ್ಷ ನಾರಾಯಣ ಸೋಮಯಾಜಿ, ಹಿರಿಯರಾದ ಕಮಲಾ ಪ್ರಭಾಕರ್ ಭಟ್, ಶ್ರೀ ರಾಘವೇಂದ್ರ ಲಕ್ಕವಳ್ಳಿ, ಖಈಔ ಲಕ್ಕವಳ್ಳಿ, ಚಿಕ್ಕಮಗಳೂರು ಬೆಂದೂರಿನ ಸ.ಮಾ.ಹಿ.ಪ್ರಾ. ಶಾಲೆಯ ಶಿಕ್ಷಕ ಗಣಪತಿ ಹೋಬ್ಳಿದಾರ್, ಬೈಂದೂರು ಉದ್ಯಮಿ ಜಯಾನಂದ ಹೋಬ್ಳಿದಾರ್, ಬೈಂದೂರು ಸ.ಮಾ.ಹಿ.ಪ್ರಾ. ಶಾಲೆಯ ಮುಖ್ಯ ಶಿಕ್ಷಕ ಜನಾರ್ಧನ, ಹಾಗೂ ವಿದ್ಯಾಕೆಂದ್ರದ ಸಹಸಂಚಾಲಕ ರಮೇಶ್ ಎನ್. ಉಪಸ್ಥಿತರಿದ್ದರು
ಕಾಲೇಜಿನ ಪ್ರಾಂಶುಪಾಲ ವಸಂತ ಬಲ್ಲಾಳ್ ಸ್ವಾಗತಿಸಿದರು ಪ್ರಥಮ ವಿಜ್ಞಾನ ವಿಭಾಗದ ವಿದ್ಯಾರ್ಥಿನಿಯರಾದ ಪ್ರೇಕ್ಷಾ ವಂದಿಸಿ, ಭವನೀಶ್ ಕಾರ್ಯಕ್ರಮ ನಿರೂಪಿಸಿದರು.

LEAVE A REPLY

 Click this button or press Ctrl+G to toggle between Kannada and English

Please enter your comment!
Please enter your name here