Wednesday, October 18, 2023

ಗುಬ್ಬಚ್ಚಿ ಗೂಡು ಪ್ರತಿಭಾನ್ವೇಷಣೆ-2020

Must read

ಬಂಟ್ವಾಳ: ಅಳಿವಿನಂಚಿನಲ್ಲಿರುವ ಪಕ್ಷಿಸಂಕುಲಗಳ ಉಳಿವಿಗೆ ಸಸ್ಯರಾಶಿಗಳ ಮಹತ್ವ ಜಾಗೃತಿ ಕಾರ್ಯಾಗಾರವನ್ನು ಭಾರತದಾದ್ಯಂತ ನಡೆಸುತ್ತಿದ್ದು, ಈ ಬಾರಿ ಪ್ರಾಥಮಿಕ ಮತ್ತು ಪ್ರೌಢಶಾಲಾ ವಿಭಾಗದಲ್ಲಿ ಪಕ್ಷಿ ಸಂಕುಲಗಳ ಅಳಿವು-ಉಳಿವು ನಮ್ಮ ಪಾತ್ರ ವಿಷಯದ ಕುರಿತು ಕನ್ನಡ ಪ್ರಬಂಧ ಸ್ಪರ್ಧೆಯನ್ನು ನಡೆಸಲಾಗುತ್ತಿದೆ. ದ.ಕ.ಜಿ.ಪಂ.ಹಿ.ಪ್ರಾ. ಶಾಲೆ ಕಡ್ತಾಲಬೆಟ್ಟುಇಲ್ಲಿ ಶಾಲಾ ಮಟ್ಟದ ಗುಬ್ಬಚ್ಚಿ ಗೂಡು ಪ್ರತಿಭಾನ್ವೇಷಣೆ-2020 ನಡೆಯಿತು. ಪಕ್ಷಿ ಸಂರಕ್ಷಣೆ ಕುರಿತು ಮಾಹಿತಿ ನೀಡಿದ ಗುಬ್ಬಚ್ಚಿ ಗೂಡು ಜಾಗೃತಿ ಅಭಿಯಾನದ ಸಂಚಾಲಕಿ ರಮ್ಯ ನಿತ್ಯಾನಂದ ಶೆಟ್ಟಿ ಪಕ್ಷಿ ಸಂರಕ್ಷಣೆ ನಮ್ಮೆಲ್ಲರ ಹೊಣೆ ಎಂದು ಹೇಳಿದರು.
ವಿಜೇತರಿಗೆ ಗುಬ್ಬಚ್ಚಿ ಗೂಡು ಜಾಗೃತಿ ಅಭಿಯಾನದ ಸಂಚಾಲಕಿ ರಮ್ಯ ನಿತ್ಯಾನಂದ ಶೆಟ್ಟಿ ಪ್ರಮಾಣ ಪತ್ರ ಮತ್ತು ಪದಕ ನೀಡಿ ಗೌರವಿಸಿದರು. ಈ ಸಂದರ್ಭದಲ್ಲಿ ಗುಬ್ಬಚ್ಚಿ ಗೂಡು ಜಾಗೃತಿ ಅಭಿಯಾನದ ರೂವಾರಿ ನಿತ್ಯಾನಂದ ಶೆಟ್ಟಿ, ಶಾಲಾ ಪ್ರಭಾರ ಮುಖ್ಯೋಪಾಧ್ಯಾಯ ಭಾಸ್ಕರ್ ಹಾಗು ಸಹ ಶಿಕ್ಷಕರು ಉಪಸ್ಥಿತರಿದ್ದರು.

More articles

Latest article