ಯಶಸ್ವೀ ಬದುಕಿನ ಆರಂಭದ ಜೀವನವೇ ವಿದ್ಯಾರ್ಥಿಜೀವನ. ವಿದ್ಯಾರ್ಥಿ ಜೀವನದಲ್ಲಿ ಯಶಸ್ಸು ಗಳಿಸಿದರೆ ಭವಿಷ್ಯದಲ್ಲಿ ಯಶಸ್ಸು ಸಿಗುತ್ತದೆ. ಜೀವನದಲ್ಲಿ ಪರೀಕ್ಷೆಗಳು ಎದುರಾಗುವಂತೆ, ವಿದ್ಯಾರ್ಥಿಜೀವನದಲ್ಲೂ ಪರೀಕ್ಷೆಗಳಿವೆ.ಆದರೆ ವಿದ್ಯಾರ್ಥಿ ಜೀವನದಲ್ಲಿ ಬೋಧಕರು ಕಲಿಸಿದ್ದನ್ನು ಅರಿತು ಜೀರ್ಣಿಸಿಕೊಂಡು ಕೊಟ್ಟ ಪ್ರಶ್ನೆಪತ್ರಿಕೆಗಳಿಗೆ ಉತ್ತರಿಸಿ ಸಾಧನೆಯನ್ನು ತೋರಿಸುವುದಾಗಿದೆ ಎಂಬುದಾಗಿ ರಾಜ್ಯ ಮಟ್ಟದ ಖ್ಯಾತ ತರಬೇತುದಾರ ರೊ| ಬಿ.ರಾಮಚಂದ್ರರಾವ್ ಹೇಳಿದರು. ಅವರು ಮಾತನಾಡುತ್ತ ನಮ್ಮ ಬದುಕಿನಲ್ಲಿ ಅಸಾಧ್ಯ ಎನ್ನುವುದು ಯಾವುದೂ ಇಲ್ಲ. ಮನಸ್ಸಿಟ್ಟು ಕಾರ್ಯ ಪ್ರವೃತ್ತರಾದಾಗ ಎಲ್ಲ ಕೆಲಸ ಕಾರ್ಯಗಳೂ ಸಾಧ್ಯವಾಗುತ್ತದೆ ಎಂದು ಹೇಳಿದರು.
ಅವರು ತುಂಬೆ ಪದವಿ ಪೂರ್ವಕಾಲೇಜಿನ ಶಬನಾ ಬ್ಲಾಕ್‌ನಲ್ಲಿ ನಡೆದ ಬಂಟ್ವಾಳ ರೋಟರಿಕ್ಲಬ್‌ಟೌನ್ ಹಾಗೂ ಬಂಟ್ವಾಳ ರೋಟರಿ ಆನ್ಸ್ ಸಂಸ್ಥೆಗಳು ಜಂಟಿಯಾಗಿ ಎಸ್ಸೆಸ್ಸೆಲ್ಸಿ ಮತ್ತು ಪಿಯುಸಿ ವಿದ್ಯಾರ್ಥಿಗಳಿಗಾಗಿ ಏರ್ಪಡಿಸಿದ್ದ ’ ಪರೀಕ್ಷೆ ಎದುರಿಸುವುದು ಹೇಗೆ ? ’ ಎಂಬ ಸಂವಾದ ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಮಾತನಾಡಿದರು. ಅದೇ ಸಂದರ್ಭದಲ್ಲಿ ಬಂಟ್ವಾಳ ರೋಟರಿ ಆನ್ಸ್‌ ಇವರಿಂದ ಸಂಸ್ಥೆಗೆ ಪ್ರಥಮ ಚಿಕಿತ್ಸೆಯ ಕಿಟ್ಟ್‌ನ್ನು ನೀಡಲಾಯಿತು. ಕಾರ್ಯಕ್ರಮದಲ್ಲಿ ಮೊದಲಿಗೆ ರೊಟೇರಿಯನ್‌ ಜಯರಾಜ್‌ ಎಸ್. ಬಂಗೇರ ಶುಭ ಹಾರೈಸಿ ಚಾಲನೆ ನೀಡಿದರು. ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಂಶುಪಾಲ ಕೆ.ಎನ್. ಗಂಗಾಧರ ಆಳ್ವ ಮಾತನಾಡಿ, ಇನ್ನುಳಿದ ಕೆಲವೇ ದಿನಗಳು ಕ್ರಿಕೆಟ್ ಪಂದ್ಯಾಟದ ಅಂತಿಮ ಘಟ್ಟದಲ್ಲಿ ಗೆಲುವು ಸಾಧಿಸುವುದು ಹೇಗೆ ಎಂಬುದಾಗಿ ಕೋಚ್‌ಗೈಡ್ ಮಾಡುವಂತೆ, ಈ ಕೊನೆಯ ಹಂತದ ಪರೀಕ್ಷಾ ತರಬೇತಿ ಕಾರ್ಯಗಾರ ನಿಜಕ್ಕೂ ವಿದ್ಯಾರ್ಥಿಗಳ ಮನಸ್ಸಿನಾಳಕ್ಕೆ ಇಳಿದು ಪ್ರಯೋಜನವಾಗುತ್ತದೆ ಎಂದರು.
ರೊ| ಆನ್ಸ್ ವಿಂದ್ಯಾಎಸ್. ರೈ, ರೊ| ಬೊಂಡಾಳ ಚಿತ್ತರಂಜನ್ ಶೆಟ್ಟಿ ಮುಂತಾದವರು ಉಪಸ್ಥಿತರಿದ್ದ ಕಾರ್ಯಕ್ರಮದಲ್ಲಿ ಸಹಶಿಕ್ಷಕ ನವೀನ ರಾವ್ ಟಿ. ವಂದಿಸಿದರು. ವಿದ್ಯಾರ್ಥಿನಿ ಚಂದನ ಕೊಪ್ಪಳ ನಿರೂಪಿಸಿದರು. ಸುಬ್ರಹ್ಮಣ್ಯ ಭಟ್, ದಿನೇಶ ಶೆಟ್ಟಿ ಅಳಿಕೆ, ವಿಶ್ವನಾಥ ಪೂಜಾರಿ, ಸಾಯಿರಾಂ ನಾಯಕ್ ಉಪಸ್ಥಿತರಿದ್ದರು.

LEAVE A REPLY

 Click this button or press Ctrl+G to toggle between Kannada and English

Please enter your comment!
Please enter your name here