ವಿಟ್ಲ: ರಸ್ತೆಯಲ್ಲಿ ಅನುಮಾನಾಸ್ಪದವಾಗಿ ತಿರುಗಾಡುತ್ತಿದ್ದ ವ್ಯಕ್ತಿಯನ್ನು ರಾತ್ರಿ ಪಾಳಿಯಲ್ಲಿ ಪೊಲೀಸರು ವಶಕ್ಕೆ ಪಡೆದು ನ್ಯಾಯಾಲಯಕ್ಕೆ ಹಾಜರು ಪಡಿಸಿದ ಘಟನೆ ಪೆರುವಾಯಿ ಸಮೀಪದ ಮುಚ್ಚಿರಪದವಿನಲ್ಲಿ ನಡೆದಿದೆ.

ಮಂಜೇಶ್ವರ ಹೊಸಗಂಡಿ ನಿವಾಸಿ ಹರೀಶ ಯಾನೆ ಗಿರೀಶ (೨೭) ಅನುಮಾನಾಸ್ಪದವಾಗಿ ತಿರುಗಾಡುತ್ತಿದ್ದ ವ್ಯಕ್ತಿಯಾಗಿದ್ದಾನೆ. ವಿಟ್ಲ ಎಸ್ ಐ ವಿನೋದ್ ಎಸ್. ಕೆ. ನೇತೃತ್ವದ ಪೊಲೀಸರು ರಾತ್ರಿ ಪಾಳಿಯಲ್ಲಿ ಬೀಟ್ ನಲ್ಲಿದ್ದ ಸಮಯ ಜೀಪ್ ಕಾಣುತ್ತಿದ್ದ ಹಾಗೆ ರಸ್ತೆಯಲ್ಲಿ ನಿಂತಿದ್ದ ವ್ಯಕ್ತಿಯೊಬ್ಬ ಓಡಲು ಪ್ರಾರಂಭಿಸಿದ್ದರಿಂದ ಆತನನ್ನು ಬೆನ್ನಟ್ಟಿ ವಶಕ್ಕೆ ಪಡೆದು ನ್ಯಾಯಾಲಯ್ಯಕ್ಕೆ ಹಾಜರು ಪಡಿಸಲಾಗಿದೆ.

LEAVE A REPLY

 Click this button or press Ctrl+G to toggle between Kannada and English

Please enter your comment!
Please enter your name here