



ಕೈಕಂಬ: ಒಡ್ಡೂರು ಧರ್ಮಚಾವಡಿಯಲ್ಲಿ ಶ್ರೀ ಕೊಡಮಣಿತ್ತಾಯ ಧರ್ಮದೈವದ ಪ್ರತಿಷ್ಠೆ ಶತಚಂಡಿಕಾಯಾಗ ಹಾಗೂ ಧರ್ಮ ನೇಮೋತ್ಸವದ ಪ್ರಯುಕ್ತ ಫೆ.24 ಸೋಮವಾರ ಬೆಳಿಗ್ಗೆ 8.30 ಋತ್ವಿಜರ ಸ್ವಾಗತ,ಸಾಮೂಹಿಕ ಪ್ರಾರ್ಥನೆ, ಹೋಮ, ಸದವಸ್ತಿ ಪುಣ್ಯಾಹವಾಚನ ತೋರಣ ಮಹೂರ್ತ, ಆದ್ಯ ಗಣಪತಿ ಹೋಮ, ಉಗ್ರಾಣ ಮಹೂರ್ತ, ದೇವಿ ಮಹಾತ್ಮೆ ಪರಾಯಣ ಆರಂಭಗೊಂಡು ಹಾಲು ಉಕ್ಕಿಸುವ ಕಾರ್ಯಕ್ರಮ ಪಲ್ಕೆ ವೇದಮೂರ್ತಿ ರತೀಶ್ ಭಟ್ ಹಾಗೂ ವೇದಮೂರ್ತಿ ಶ್ರೀ ವೆಂಕಟೇಶ ತಂತ್ರಿ ಎಡಪದವು ಇವರ ನೇತೃತ್ವದಲ್ಲಿ ನೇರವೇರಿತು.ರಾಜೇಶ್ ನಾಯ್ಕ್ ಉಳಿಪಾಡಿ ಗುತ್ತು, ಉಷಾ ಆರ್ ನಾಯ್ಕ್ ಹಾಗೂ ಕಟುಂಬಸ್ಥರು ಉಪಸ್ಥಿತರಿದ್ದರು.





