ಮನೆಗೊಂದು ಅಡುಗೆ
ಕೋಣೆ ಕಡ್ಡಾಯ..,
ಅನ್ನುವ ಕಾಲದ
ಕಥೆಯಲ್ಲ ಇದು…!?

ಎರಡು ಬೆಡ್ ರೂಮ್
ಒಂದು ಹಾಲ್
ಡೈನಿಂಗ್ ಹಾಲ್ ಇರಲಿ
ಕಿಚನ್ ರೂಮ್…
ಯಾಕೆ ಬೇಡ ಬಿಡಿ..
ಸುಮ್ನೆ ವೇಸ್ಟ್‌..
ಎಕ್ಷ್ಟ್ರ ಒಂದು
ಬಾತ್ ಮತ್ತು ವಾಷ್ ರೂಮ್ ಇರಲಿ..!!

ನಿನ್ನೆಯವರೆಗೆ
‘ಹುಡುಗಿಗೆ ಅಡುಗೆ ಬರುತ್ತ’
ಹೆಣ್ಣು ತರುವಾಗ ಕೇಳುತ್ತಿದ್ದ ಪ್ರಶ್ನೆ..
ಲವ್ ಮ್ಯಾರೇಜ್ ನಲ್ಲೂ
ಈ ಪ್ರಶ್ನೆ ಬಂದು ಹೋಗುತ್ತಿತ್ತು..
“ಹುಡುಗನಿಗೂ ಅಡುಗೆ ಬರುತ್ತೆ”
ಅಂದಾಗ ಚಪ್ಪಾಳೆ ತಟ್ಟಿದ್ದು
ಮೊದಲು ಹೆಣ್ಣೇ..
ಪಕ್ಕದ ಮನೆಯಿಂದ ಸಾಸಿವೆ,ಕೊತ್ತಂಬರಿ
ಸಾಲ ಕೇಳುವುದು ಇಲ್ಲ..,
ಕೊಡುವುದು ಇಲ್ಲ.
ಇಷ್ಟಕ್ಕೂ ತರುವುದೇ ಇಲ್ಲ..!

ಈಗ ಅದರ ಚಿಂತೆಗಳೇ ಇಲ್ಲ
ಕೈಯಲ್ಲಿ ಅರೆದು ಸಾಂಬಾರು
ತಯಾರಿಸುವ ಚಿಂತೆ ಬಿಡಿಸಿದ್ದು..
ಮಿಕ್ಸಿ ,ಗ್ರೈಂಡರ್…
ಮಸಾಲಾ ಪ್ರಮಾಣ ಸರಿಯೋ ತಪ್ಪೋ
ಇವುಗಳ ಚಿಂತೆ ಬಿಡಿಸಿದ್ದು.,
ಪ್ಯಾಕೆಟ್ ರೆಡಿ ಮಸಾಲ..
ಈ ರೆಡಿ ಮಸಾಲದಲ್ಲಿ ರೆಡಿ
ಮಾಡುವ ಚಿಂತೆ ಬಿಡಿಸಿದ್ದೆ..
ಆನ್ ಲೈನ್ ಫುಡ್ ಆರ್ಡರ್..!!

ನಮಿಗಿಷ್ಟದ, ನಮಗೊಪ್ಪುವ
ನಮ್ಮ ಹೊತ್ತಿಗೆ
ನಮಗೆ ಬೇಕಾದಲ್ಲಿಗೆ
ತಯಾರಾಗಿ ಬರುವುದು.
ಒಂದೇ ಒಂದು ಕಾಲ್ ಅಥವಾ ಮೆಸೇಜ್ ಸಾಕು.
ಆನ್ ಲೈನ್ ನಲ್ಲೇ ಪೇಮೆಂಟ್.

ನಾಳೆ ಅಡುಗೆ ಏನು ಮಾಡಲಿ
ಇವತ್ತೇನು ತರಕಾರಿ ಕೊಂಡು ಹೋಗಲಿ
ಬೆಳಗ್ಗೆ ಚಹಾದ ಹೊತ್ತಿಗೆ
ಮಧ್ಯಾಹ್ನ, ಸಂಜೆ ರಾತ್ರಿ
ಏನ್ ಮಾಡಲಿ, ಏನ್ ಮಾಡಲಿ
ಅನ್ನುವ ಚಿಂತೆಯೇ ಇಲ್ಲ.
ಬೇಕಾದದ್ದನ್ನ ಮೊಬೈಲ್ ನಲ್ಲಿ ಸರ್ಚ್ ಮಾಡಿ
ಜಸ್ಟ್ ಒನ್ ಕ್ಲಿಕ್ ಸಾಕು
ಊಟ ರೆಡಿ..
‘ರೀ.. ನಿಮಗೇನು ಬೇಕು,
ಪಾಪು ನಿಂಗೆ, ಅತ್ತೆಗೆ ಮೊಸರನ್ನ ಸಾಕಲ್ವ’
ಇಷ್ಟೇ ಒಮ್ಮೆ ಸೆಲೆಕ್ಟ್ ಮಾಡಬೇಕಷ್ಟೇ..!
ಎಲ್ಲಿ ಬೇಕಾದರಲ್ಲಿ ಕೂತು..
ಹಣದ ಜೊತೆ ಜಿಪಿಎಸ್ ಸೆಂಡ್ ಮಾಡಲು
ಮರೆಯಬಾರದು..

ಮತ್ಯಾಕೆ ಅಡುಗೆ ಕೋಣೆ..
ಈ ಅಡುಗೆ ವಿದ್ಯೆ..
ಮೊಬೈಲ್ ಅಕಸ್ಮಾತ್ ಸತ್ತರೆ
ಆಗಬಹುದು ಊಟಕ್ಕೊಂದಿಷ್ಟು ತೊಂದರೆ..

ಯತೀಶ್ ಕಾಮಾಜೆ

LEAVE A REPLY

 Click this button or press Ctrl+G to toggle between Kannada and English

Please enter your comment!
Please enter your name here