Tuesday, October 31, 2023

ಕರಾಟೆ: ಬಹುಮಾನ ವಿಜೇತ ವಿದ್ಯಾರ್ಥಿಗಳಿಗೆ ಅಭಿನಂದನೆ

Must read

ಬಂಟ್ವಾಳ: ಬುಡೋಕಾನ್ ಕರಾಟೆ ಮತ್ತು ಉಡುಪಿ ಅಂಬಲಪಾಡಿಯ ಸ್ಪೋಟ್ಸ್ ಅಸೋಸಿಯೇಷನ್ ಸಹಯೋಗದಲ್ಲಿ ಅಂಬಲಪಾಡಿಯ ಮಹಾಕಾಳಿ ದೇವಸ್ಥಾನದ ಜನಾರ್ದನ ಬಯಲು ರಂಗಮಂದಿರದಲ್ಲಿ ಎರಡು ದಿನಗಳ ಕಾಲ ಓಪನ್ ಕರಾಟೆ ಚಾಂಪಿಯನ್ ಶಿಪ್ -2020 ನಡೆಯಿತು.

ಕಾನ್-ರೂಯ್- ಆರ್.ವಿ.ಟೈಗರ್ ಸ್ಪೋಟ್ಸ್ ಕರಾಟೆ-ಡೋ ಕರ್ನಾಟಕ ಸಂಸ್ಥೆಯಿಂದ ಸುಮಾರು 50 ವಿದ್ಯಾರ್ಥಿಗಳು ಸ್ಪರ್ಧೆಯಲ್ಲಿ ಭಾಗವಹಿಸಿ ಪ್ರಥಮ, ದ್ವಿತೀಯ, ತೃತೀಯ ಸಹಿತ 70 ಬಹುಮಾನ ಪದಕ ಜಾಗೂ ಟ್ರೋಫಿಯನ್ನು ಪಡೆದುದಲ್ಲದೆ ತಂಡವು ಸಮಗ್ರ ಪ್ರಶಸ್ತಿಯನ್ನು ಗೆದ್ದುಕೊಂಡಿದೆ‌. ಈ ವಿದ್ಯಾರ್ಥಿಗಳಿಗೆ ಸಂಸ್ಥೆಯ ಕರಾಟೆ ನಿರ್ದೇಶಕ ,ಮುಖ್ಯ ಶಿಕ್ಷಕ ಶಿಹಾನ್ ವಸಂತ ಕೆ. ಬಂಗೇರ ಅವರು ಮಾರ್ಗದರ್ಶನಗೈದು, ತರಬೇತಿ ನೀಡಿರುತ್ತಾರೆ. ಸಹಶಿಕ್ಷಕರಾದ ಸೆನ್ಸಾಯಿ ಯತೀಶ್ ಕುಮಾರ್, ಸೆನ್ಸಾಯಿ ಶೋಭಿತ್ ವಿ.ಆರ್.ಬಂಗೇರ ಅವರು ಸಹಕರಿಸಿರುತ್ತಾರೆ. ಅಭಿನಂದನೆ ವಿಜೇತ ವಿದ್ಯಾರ್ಥಿಗಳನ್ನು ಅಭಿನಂದಿಸುವ ಸರಳ ಸಮಾರಂಭ ಬಿ.ಸಿ.ರೋಡಿನ ಪೊಲೀಸ್ ಲೈನ್ ನಲ್ಲಿರುವ ಶ್ರೀ ಅನ್ನಪೂರ್ಣೇಶ್ವರೀ ನಾಗದೇವರ ದೇವಸ್ಥಾನದ ಸಭಾಭವನದಲ್ಲಿ ನಡೆಯಿತು. ಚಲನಚಿತ್ರ ನಟ ಶ್ರೀತಮ್ಮನ್ನ ಸಮಾರಂಭದ ಅಧ್ಯಕ್ಷತೆ ವಹಿಸಿ, ವಿದ್ಯಾರ್ಥಿಗಳ ಸಾಧನೆಯನ್ನು ಅಭಿನಂದಿಸಿ ಶುಭಹಾರೈಸಿದರು. ಉದ್ಯಮಿಗಳಾದ ಬೊಂಡಾಲ ಸಚ್ಚಿದಾನಂದ ಶೆಟ್ಟಿ, ಚಿತ್ತರಂಜನ್ ಶೆಟ್ಟಿ, ನಿವೃತ್ತ ಶಿಕ್ಷಕ ರಾಮಚಂದ್ರ ರಾವ್ ಅತಿಥಿಗಳಾಗಿ ಭಾಗವಹಿಸಿದ್ದರು‌. ಕರಾಟೆ ನಿರ್ದೇಶಕ ವಸಂತ ಕೆ.ಬಂಗೇರ ಉಪಸ್ಥಿತರಿದ್ದರು.

More articles

Latest article