ಬಂಟ್ವಾಳ:ಮಾಣಿ ಊರಿನ ಬ್ಯಾಂಕ್ ನಲ್ಲಿ ಹಣ ಇದ್ದವರು ಬ್ಯಾಂಕ್ ಗೆ ಹಣ ಹಾಕಬಹುದು. ಅಗತ್ಯಕ್ಕೆ ಬ್ಯಾಂಕ್ ನ ಗ್ರಾಹಕರು ಎ.ಟಿ.ಎಂ ಮೂಲಕ ಹಣವನ್ನು ತೆಗೆಯುವ ಹಾಗಿಲ್ಲ. ಕಳೆದ ಮೂರ್ನಾಲ್ಕು ತಿಂಗಳುಗಳಿಂದ ಮಾಣಿಯ ಬ್ಯಾಂಕ್ ಆಫ್ ಬರೋಡದ  ಎ.ಟಿ.ಎಂ. ಹಾಳಾಗಿದೆ. ಈ ಅವ್ಯವಸ್ತೆ ಬಗ್ಗೆ ಮಾಣಿ ಊರಿನಲ್ಲಿ ಯಾರೂ ಮಾತಾಡುತ್ತಿಲ್ಲ. ಎ.ಟಿ.ಎಂ. ಯಂತ್ರವನ್ನು ದುರಸ್ತಿಗೆ ಮತ್ತು ತಾಂತ್ರಿಕ ಮಾರ್ಪಾಡಿಗೆ ಕೊಂಡೊಯ್ಯಲಾಗಿದೆ ಎಂದು ಹೇಳಲಾಗುತ್ತದೆ. ಒಂದು  ಎ.ಟಿ.ಎಂ. ಯಂತ್ರದ ದುರಸ್ತಿಗೆ ಇಷ್ಟು ದಿನ ಕಾಲಾವಕಾಶ ಬೇಕೇ ಎಂದು ಸಾರ್ವಜನಿಕರು ದೂರುತ್ತಾರೆ.

ಇನ್ನೂ ಕೆಲವು ಮಂದಿ ಮಾಣಿಯಲ್ಲಿ  ಎ.ಟಿ.ಎಂ. ರದ್ದಾಗುತ್ತದೆ ಎಂದು ಅಭಿಪ್ರಾಯ ಪಡುತ್ತಾರೆ. ಅದು ಹೌದೇ ? ಅಥವಾ ಅಲ್ಲವೇ ಎಂಬ ಸ್ಪಷ್ಟನೆ ಮತ್ತು ಮಾಹಿತಿ ಸಂಬಂಧಪಟ್ಟವರು ನೀಡಿದರೆ ಸಾರ್ವಜನಿಕರಿಗೆ ಉಪಕಾರ ಆದೀತು. ಈಗಾಗಲೇ ಎ.ಟಿ.ಎಂ. ಕಾರ್ಡ್ ನ್ನು ಪಡೆದ ಮಾಣಿ ಶಾಖೆಯ ಬ್ಯಾಂಕ್ ಗ್ರಾಹಕರು ಹಣದ ಅಗತ್ಯಕ್ಕೆ ಏನು ಮಾಡಬೇಕೇಂದು ತೋಚುವುದಿಲ್ಲ ಎಂದು ಈ ಅವ್ಯವಸ್ತೆ ಬಗ್ಗೆ ದೂರಿಕೊಂಡಿದ್ದಾರೆ. ಇನ್ನಾದರೂ ಸಂಬಂಧಪಟ್ಟ ಅಧಿಕಾರಿಗಳು ಎಚ್ಚೆತ್ತುಕೊಂಡು ಶೀಘ್ರ ಕಾರ್ಯಪ್ರವೃತ್ತರಾಗಲಿ.

LEAVE A REPLY

 Click this button or press Ctrl+G to toggle between Kannada and English

Please enter your comment!
Please enter your name here