


ಬಂಟ್ವಾಳ: ಬೆಂಜನಪದವು ಸಮೀಪದ ಕಲ್ಪನೆ ಬಸ್ ಅಪಘಾತದಲ್ಲಿ ಗಾಯಗೊಂಡವರ ಸಂಖ್ಯೆ 54 ಕ್ಕೆ ಏರಿದೆ.
ಕಲ್ಪನೆಯ ಬಸ್ಸು ಅಪಘಾತ ಪ್ರಕರಣದಲ್ಲಿ ಗಂಭೀರ ಹಾಗೂ ಸಣ್ಣಪುಟ್ಟ ಗಾಯಗಳು ಸೇರಿದಂತೆ ಒಟ್ಟು ೫೪ ಮಂದಿ ವಿವಿಧ ಆಸ್ಪತ್ರೆಗಳಿಗೆ ತೆರಳಿದ್ದು, ಬಹುತೇಕ ಮಂದಿಗೆ ಚಿಕಿತ್ಸೆ ಪಡೆದು ಮರಳಿದ್ದಾರೆ.
ಘಟನೆಯಲ್ಲಿ ಪ್ರಯಾಣಿಕ ಮೋಹನ್ ಸಿಂಗ್ ಅವರ ತಲೆಗೆ ಗಂಭೀರ ಸ್ವರೂಪದ ಗಾಯವಾಗಿದೆ. ಉಳಿದಂತೆ ೧೨ ಮಂದಿ ಬಂಟ್ವಾಳ ಸರಕಾರಿ ಆಸ್ಪತ್ರೆ, ೭ ಮಂದಿ ಬಿ.ಸಿ.ರೋಡು ಸೋಮಯಾಜಿ ಅಸ್ಪತ್ರೆ, ೧೯ ಮಂದಿ ತುಂಬೆ ಫಾದರ್ ಮುಲ್ಲರ್ ಆಸ್ಪತ್ರೆ, ೧೫ ಮಂದಿ ಕಂಕನಾಡಿ ಫಾದರ್ ಮುಲ್ಲರ್ ಆಸ್ಪತ್ರೆಗೆ ಚಿಕಿತ್ಸೆಗಾಗಿ ತೆರಳಿದ್ದಾರೆ ಎಂದು ಬಂಟ್ವಾಳ ಸಂಚಾರಿ ಪೊಲೀಸರು ತಿಳಿಸಿದ್ದಾರೆ. ಚಾಲಕನನ್ನು ಪೊಲೀಸರು ವಿಚಾರಣೆ ನಡೆಸಿದ್ದು, ಸ್ಪಷ್ಟವಾದ ಕಾರಣ ತಿಳಿದು ಬಂದಿಲ್ಲ ಎನ್ನಲಾಗಿದೆ.
ಘಟನೆಯಲ್ಲಿ ಗುರುಪುರ ಕೈಕಂಬ ನಿವಾಸಿಗಳಾದ ಚಂದ್ರಶೇಖರ, ಕಮಲಾಕ್ಷ, ಪೆರ್ಮುದೆ ನಿವಾಸಿ ಲೀಲಾವತಿ ಅವರಿಗೆ ತೀವ್ರ ಸ್ವರೂಪದ ಗಾಯಗಳಾಗಿವೆ.
ತೆಂಕಮಿಜಾರ್ ಸುಧಾ , ಮೊಡಂಕಾಪು ಗರ್ವೀನ್ ,ಪೊರ್ಕೋಡಿ ಪೇಜಾವರ ನಿವಾಸಿಗಳಾದ ವನಜಾ , ಲಲಿತಾ, ಶ್ರೀಮತಿ,ವಸಂತಿ, ವಿಮಲ, ಕಮಲ, ಪೆರ್ಮುದೆ ಲೀಲಾವತಿ, ಗುರುಪುರ ಕೈಕಂಬ ಚಂದ್ರಶೇಖರ, ಕಮಲಾಕ್ಷ, ಕರಿಯಂಗಳ ನಿರ್ವಾಹಕ ಆಶೋಕ, ಪೆರ್ಮುದೆ ಲೀಲಾವತಿ ಮಗಳು, ಹಾಶೀಕಾ (9) ಗುರುಪುರ ಕೈಕಂಬಸುಧಾ ಮಗಳು ರಮ್ಯ (22), ನೆರೆನಗರ ರಾಜೇಶ್ , ಕೆಂಜಾರು ಗುಲಾಬಿ, ಕೆಂಜಾರು ಪೊರ್ಕಾಡಿ ಹೇಮಲತಾ , ಚಾಲಕ ಸುರೇಸ್ , ಕೆಂಜಾರು ಚರಣ್, ಸಾವಿತ್ರಿ , ಸರಿತಾ, ಸುಲೈಮಾನ್, ಜೋಹನ್, ಜೆಯಿನ್ , ದಯಾಲತಾ, ಸುಶ್ಮಿತಾ, ಮಹಮ್ಮದ್ ಸಲೀಂ, ಪಲ್ಕೀಶ್, ಹಸನಬ್ಬ, ಮಹಮ್ಮದ್ ರಝಾಕ್ ಇನ್ನು ಕೆಲವರ ಹೆಸರು ಮಾಹಿತಿ ತಿಳಿಯಬೇಕು.
ಸ್ಥಳಕ್ಕೆ ಎಡಿಸನಲ್ ಎಸ್.ಪಿ.ವಿಕ್ರಂ ಅಮ್ಟೆ, ಬಂಟ್ವಾಳ ವೃತ್ತ ನಿರೀಕ್ಷಕ ಟಿ. ಡಿ.ನಾಗರಾಜ್, ಗ್ರಾಮಂತರ ಎಸ್.ಐ.ಪ್ರಸನ್ನ , ನಗರ ಠಾಣಾ ಎಸ್. ಐ.ಅವಿನಾಶ್, ಟ್ರಾಫಿಕ್ ಎಸ್.ಐ.ರಾಮನಾಯ್ಕ್ ಬೇಟಿ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.





