ಬಂಟ್ವಾಳ: ಬಂಟ್ವಾಳ ವಲಯ ಅರಣ್ಯಾಧಿಕಾರಿ ಬಿ.ಸುರೇಶ್ ಅವರ ಬೀಳ್ಕೋಡುಗೆ ಕಾರ್ಯಕ್ರಮ ಬಿಸಿರೋಡಿನ ವಲಯ ಅರಣ್ಯಾಧಿಕಾರಿ ಕಚೇರಿಯಲ್ಲಿ ಶನಿವಾರ ಸಂಜೆ ನಡೆಯಿತು.
ಬಂಟ್ವಾಳ ಅರಣ್ಯಾಧಿಕಾರಿಯಾಗಿ ಮೂರುವರೆ ವರ್ಷಗಳ ಸೇವೆ ಸಲ್ಲಸಿ ಇದೀಗ ಸಾಗರದ ಶಿರಾಲಕೊಪ್ಪ ವಲಯ ಅರಣ್ಯಾಧಿಕಾರಿ ಯಾಗಿ ವರ್ಗಾವಣೆ ಗೊಂಡಿರುವ ಬಿ.ಸುರೇಶ್ ಅವರಿಗೆ ಹಾಗೂ ಅವರ ಪತ್ನಿ ಭಾಗ್ಯ ಅವರಿಗೆ ಬಂಟ್ವಾಳ ವಲಯ ಅರಣ್ಯ ಇಲಾಖೆಯ ವತಿಯಿಂದ ಬೀಳ್ಕೋಡುಗೆ ಕಾರ್ಯಕ್ರಮ ನಡೆಯಿತು.
ಸಮಾರಂಭದಲ್ಲಿ ಮಂಗಳೂರು ಸಹಾಯಕ ಅರಣ್ಯ ಸಂರಕ್ಷಣಾ ಧಿಕಾರಿ ಶಂಕರೇ ಗೌಡ ಅವರು ಕಾರ್ಯಕ್ರಮ ದ ಅಧ್ಯಕ್ಷೆ ತೆ ವಹಿಸಿದ್ದರು. ‌
ಸಿಬ್ಬಂದಿ ಗಳಾದ ಉಪವಲಯ ಅರಣ್ಯ ಧಿಕಾರಿ ಅನಿಲ್ ಅರಣ್ಯ ರಕ್ಷಕರಾದ ಜಿತೇಶ್, ದಯಾನಂದ, ಸ್ಮಿತಾ, ಮನೋಜ್, ರೇಖಾ, ಲಕ್ಮೀನಾರಾಯಣ , ಅರಣ್ಯ ವೀಕ್ಷಕ ಭಾಸ್ಕರ, ಕಚೇರಿ ಸಿಬ್ಬಂದಿಗಳು ಭಾಗವಹಿಸಿದ್ದರು.

ಉಪವಲಯ ಅರಣ್ಯಾಧಿಕಾರಿ ಪ್ರೀತಂ ಎಸ್ ಸ್ವಾಗತಿಸಿ, ಅರಣ್ಯ ರಕ್ಷಕ ವಿನಯ್ ಎಸ್ ವಂದಿಸಿದರು.
ಕಾರ್ಯಕ್ರಮ ಉಪವಲಯ ಅರಣ್ಯಾಧಿಕಾರಿ ಯಶೋಧರ ನಿರೂಪಿಸಿದರು.

LEAVE A REPLY

 Click this button or press Ctrl+G to toggle between Kannada and English

Please enter your comment!
Please enter your name here