



ಬಂಟ್ವಾಳ: ಕಂದಾಯ ಹಾಗೂ ಗಣಿ ಇಲಾಖೆಯ ಅಧಿಕಾರಿಗಳು ಸಜೀಪಮುನ್ನೂರು ಗ್ರಾಮದ ನೇತ್ರಾವತಿ ನದಿ ಕಿನಾರೆಯ ಮರಳುಗಾರಿಕೆಯ ಧಕ್ಕೆ ಬಳಿ ದಾಳಿ ನಡೆಸಿದ ವೇಳೆ ಸುಮಾರು 800 ಮೆಟ್ರಿಕ್ ಟನ್ ಮರಳಿನ ಸಂಗ್ರಹ ಕಂಡು ಬಂದಿದ್ದು, ಅಧಿಕಾರಿಗಳು ಅದನ್ನು ವಶಕ್ಕೆ ಪಡೆದ ಘಟನೆ ನಡೆದಿದೆ.
ಮರಳುಗಾರಿಕೆಯ ಧಕ್ಕೆಯ ಬಳಿ ಯಾವುದೇ ಬೋಟ್ಗಳು ಪತ್ತೆಯಾಗದಿದ್ದು, ಆದರೆ ಅಲ್ಲೇ ಸಮೀಪದ ಜಾಗದಲ್ಲಿ ಸುಮಾರು 800 ಮೆಟ್ರಿಕ್ ಟನ್ ಮರಳು ಪತ್ತೆಯಾಗಿದೆ. ಹೀಗಾಗಿ ಅದನ್ನು ವಶಪಡಿಸಿಕೊಂಡು ಗಣಿ ಇಲಾಖೆಗೆ ಹಸ್ತಾಂತರಿಸಲಾಗಿದೆ. ಅವರು ದಾಖಲೆ ಪರಿಶೀಲಿಸಿ ಕ್ರಮ ಕೈಗೊಳ್ಳಲಿದ್ದಾರೆ ಎಂದು ಬಂಟ್ವಾಳ ತಹಶೀಲ್ದಾರ್ ರಶ್ಮಿ ಅವರು ತಿಳಿಸಿದ್ದಾರೆ.






