ಬಂಟ್ವಾಳ: ಮನೆಯ ಬೆಡ್ ರೂಮಿನ ಕಪಾಟಿನಲ್ಲಿದ್ದ ಚಿನ್ನಾಭರಣ ಕಾಣೆಯಾದ ಬಗ್ಗೆ ವ್ಯಕ್ತಿಯೊಬ್ಬರು ವಿಟ್ಲ ಪೊಲೀಸ್ ಠಾಣೆಗೆ ಶುಕ್ರವಾರ ದೂರು ನೀಡಿದ್ದಾರೆ.

ತಾಲೂಕಿನ ಬೋಳಂತೂರು ಗ್ರಾಮದ ನಾಡಾಜೆ ನಿವಾಸಿ ಸಂತೋಷ್ ಮಸ್ಕರೇನಸ್ ಚಿನ್ನಾಭರಣ ಕಳವಾದ ಬಗ್ಗೆ ದೂರು ನೀಡಿದ ವ್ಯಕ್ತಿ.

8 ಗ್ರಾಂ ತೂಕದ ಚಿನ್ನದ ಕರಿಮಣಿ ಸರ, 28 ಗ್ರಾಂ ತೂಕದ ಚಿನ್ನದ ಚೈನ್, 8 ಗ್ರಾಂ ತೂಕದ ಎರಡು ಚಿನ್ನದ ಉಂಗುರಗಳು, 4 ಗ್ರಾಂ ತೂಕದ 1 ಜೊತೆ ಚಿನ್ನದ ಕಿವಿಯ ಓಲೆ ಕಳವಾಗಿದೆ ಎಂದು ದೂರಿನಲ್ಲಿ ವಿವರಿಸಲಾಗಿದೆ.

ಕೃಷಿ ಹಾಗೂ ಮನೆ ಕೆಲಸದ ಸಹಾಯಕ್ಕಾಗಿ ಒಡಿಶಾ ಮೂಲದ ದಿಲೀಪ್ ಮತ್ತು ಸುಶ್ಮಿತಾ ಎಂಬ ದಂಪತಿಯನ್ನು ಜನವರಿ 6 ರಂದು ಬಂಟ್ವಾಳದಿಂದ ಕರೆದುಕೊಂಡು ಬಂದು ಮನೆಯ ಪಕ್ಕದಲ್ಲಿರುವ ಕೊಠಡಿಯೊಂದನ್ನು ಅವರಿಗೆ ವಾಸ್ತವ್ಯಕ್ಕೆ ನೀಡಲಾಗಿತ್ತು. ಕೆಲಸಕ್ಕೆ ಸೇರಿ ಒಂದು ಸಮೀಪಿಸುತ್ತಿದ್ದಾಗ ದಿಲೀಪ್ ತಾನು ಕೆಲಸ ಬಿಟ್ಟು ಹೋಗುವುದಾಗಿ ತಿಳಿಸಿದ್ದರಿಂದ ಅವರಿಗೆ 10,000 ರೂ. ಸಂಬಳ ನೀಡಲಾಗಿತ್ತು. ದಂಪತಿ ಫೆಬ್ರವರಿ 6ರಂದು ಮನೆಯಿಂದ ಹೊರಟಿದ್ದಾರೆ.

ಫೆ. 11ರಂದು ಮನೆಯ ಬೆಡ್ ರೂಮಿನ ಕಪಾಟಿನಲ್ಲಿ ಇಟ್ಟಿದ್ದ ಚಿನ್ನಾಭರಣಗಳು ಕಾಣೆಯಾಗಿರುವುದು ಗೊತ್ತಾಗಿದೆ. ಈ ಚಿನ್ನಾಭರಣವನ್ನು ಫೆಬ್ರವರಿ 2ರಂದು ಕಪಾಟಿನಲ್ಲಿ ಇಡಲಾಗಿತ್ತು. ಚಿನ್ನಾಭರಣವನ್ನು ಯಾರೋ ಕಳವು ಮಾಡಿದ್ದು ಮನೆಯಲ್ಲಿ ಕೆಲಸಕ್ಕೆ ಇದ್ದ ದಿಲೀಪ್ – ಸುಶ್ಮಿತ ದಂಪತಿಯ ಮೇಲೆ ಸಂಶಯ ಇದೆ ಎಂದು ದೂರಿನಲ್ಲಿ ತಿಳಿಸಲಾಗಿದೆ.

LEAVE A REPLY

 Click this button or press Ctrl+G to toggle between Kannada and English

Please enter your comment!
Please enter your name here