ಕೊಳ್ನಾಡು: ಕೊಳ್ನಾಡು ಗ್ರಾಮ ಪಂಚಾಯತಿ ವತಿಯಿಂದ ಕುಳಾಲು ದಾಸಗಿರಿ ಎಂಬಲ್ಲಿ “ಸ್ವಚ್ಛ ಭಾರತ್ ಮಿಷನ್” ನಡಿ 2 ಲಕ್ಷರೂ ವೆಚ್ಚದಲ್ಲಿ ನಿರ್ಮಿಸಿದ ಸಮುದಾಯ ಶೌಚಾಲಯದ ಕೀ ಯನ್ನು ಕೊಳ್ನಾಡು ಗ್ರಾಮ ಪಂಚಾಯತಿ ಅಧ್ಯಕ್ಷ ಸುಭಾಶ್ಚಂದ್ರ ಶೆಟ್ಟಿಯವರು,ಶೌಚಾಲಯದ ನಿರ್ವಹಣೆಯ ಜವಾಬ್ದಾರಿಯನ್ನು ವಹಿಸಿರುವ ಶ್ರಿ ಶಾರದ ಸೇವಾ ಟ್ರಸ್ಟ್ ನವರಿಗೆ ಹಸ್ತಾಂತರಿಸುವ ಮೂಲಕ ಅಧಿಕೃತವಾಗಿ ಉದ್ಘಾಟಿಸಿದರು.

ಈ ಸಂದರ್ಭದಲ್ಲಿ ಟ್ರಸ್ಟ್ ಅಧ್ಯಕ್ಷ ಶೀನ ಗೌಡ, ಶಶಿಧರ ರೈ ಕುಳಾಲು, ಆನಂದ ಪೂಜಾರಿ, ಜಯಪ್ರಸಾದ್,ಚಂದ್ರಹಾಸ ಶೆಟ್ಟಿ ಪಟ್ಲಕೋಡಿ ಮೊದಲಾದವರು ಉಪಸ್ಥಿತರಿದ್ದರು.

 

LEAVE A REPLY

 Click this button or press Ctrl+G to toggle between Kannada and English

Please enter your comment!
Please enter your name here