Wednesday, October 18, 2023

ಕುದ್ದುಪದವು ಆಶ್ರಮ ಶಾಲೆ ಸುವರ್ಣ ಸಂಭ್ರಮ ಸಮಾರೋಪ

Must read

ವಿಟ್ಲ: ವಿದ್ಯಾಭಿಮಾನಿಗಳೊಂದಿಗೆ ಸರಕಾರದ ಇಲಾಖೆಗಳ ಸಹಕಾರದಿಂದ ಸುವರ್ಣ ಸಂಭ್ರಮ ಅದ್ದೂರಿಯಾಗಿ ಮತ್ತು ಅರ್ಥಪೂರ್ಣವಾಗಿ ನಡೆಸಲಾಗಿದೆ ಎಂದು ಸುವರ್ಣ ಸಂಭ್ರಮ ಸಮಿತಿಯ ಅಧ್ಯಕ್ಷರಾದ ಪ್ರಭಾಕರ ಶೆಟ್ಟಿ ದಂಬೆಕಾನ ಹೇಳಿದರು.
ಕುದ್ದುಪದವು ಆಶ್ರಮ ಶಾಲೆಯ ತೋನ್ಸೆ ವೆಂಕಟೇಶ ಪೈ ವೇದಿಕೆಯಲ್ಲಿ ನಡೆದ ಸುವರ್ಣ ಮಹೋತ್ಸವದ ಸಮಾರೋಪದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಸುವರ್ಣ ಸಂಭ್ರಮ ಸಮಿತಿಯ ಗೌರವಾಧ್ಯಕ್ಷ ರಾಧಾಕೃಷ್ಣ ಪೈ ಅಡ್ಯನಡ್ಕ, ಗೌರವ ಸಲಹೆಗಾರರು ಮತ್ತು ರಾಜ್ಯ ಪ್ರಶಸ್ತಿ ಪುರಸ್ಕೃತ ನಿವೃತ್ತ ಶಿಕ್ಷಕರಾದ ರಮೇಶ ಯಂ. ಬಾಯಾರು, ರೇವಣ್ಣ ನಾಯ್ಕ್, ಪುಷ್ಪಾ ಎಚ್, ಉಪಾಧ್ಯಕ್ಷರಾದ ಬಾಲಕೃಷ್ಣ ಶೆಟ್ಟಿ ಬೇಂಗ್ರೋಡಿ, ಬಾಲಕೃಷ್ಣ ಕಾರಂತ ಎರುಂಬು, ರಾಧಾಕೃಷ್ಣ ಶೆಟ್ಟಿ ಚೆಲ್ಲಡ್ಕ, ಪ್ರಕಾಶ್ ರೈ ಕಲ್ಲಂಗಳ, ಮೇಲ್ವಿಚಾರಕಿ ಪ್ರಮೀಳಾ ಹೆಚ್. ಜತೆ ಕಾರ್ಯದರ್ಶಿಗಳಾದ ಜಿಲ್ಲಾ ಪ್ರಶಸ್ತಿ ಪುರಸ್ಕೃತ ಮುಖ್ಯ ಶಿಕ್ಷಕ ಎಂ. ಕುಂಞ ನಾಯ್ಕ್, ನಾರಾಯಣ ಕುಲಾಲ್ ಅಮೈ, ಕೋಶಾಧಿಕಾರಿ ಗೋವಿಂದರಾಯ ಶೆಣೈ, ಕೇಪು ಗ್ರಾಮ ಪಂಚಾಯಿತಿಯ ಅಧ್ಯಕ್ಷ ತಾರಾನಾಥ ಆಳ್ವ, ಸಲಹೆಗಾರರಾದ ಶ್ರೀನಿವಾಸ ರೈ ಕುಂಡಕೋಳಿ, ಕೇಪು ಗ್ರಾಮ ಪಂಚಾಯಿತಿ ಸದಸ್ಯರಾದ ಅಬ್ದುಲ್ ಕರೀಮ್ ಉಪಸ್ಥಿತರಿದ್ದರು. ಜಿನಚಂದ್ರ ಜೈನ್ ಮೈರ, ಸದಾನಂದ ಶೆಟ್ಟಿ ಎರುಂಬು, ಜಯರಾಮ ಸಾರಡ್ಕ, ಹರೀಶ್ ಕುಲಾಲ್ ಸಹಕರಿಸಿದರು.
ಶಿಕ್ಷಕಿಯರಾದ ಗೀತಾ ಕುಮಾರಿ ಮತ್ತು ತುಳಸಿ ಬಹುಮಾನ ವಿಜೇತ ಮಕ್ಕಳ ಪಟ್ಟಿಯನ್ನು ವಾಚಿಸಿದರು. ಶಿಕ್ಷಕಿ ಮತ್ತು ಜತೆ ಕೋಶಾಧಿಕಾರಿಯಾದ ಭವ್ಯ ಪಿ. ವಂದಿಸಿದರು. ವಿಟ್ಲ ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕಿ ಕೆ. ಸುಜಾತ ರೈ ಕಾರ್ಯಕ್ರಮ ನಿರೂಪಿಸಿದರು. ಶಾಲಾ ವಿದ್ಯಾರ್ಥಿಗಳು ಮತ್ತು ಹಿರಿಯ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ಜರಗಿತು. ವಿಠಲ ನಾಯಕ್ ಕಲ್ಲಡ್ಕ ಮತ್ತು ಬಳಗದಿಂದ ಗೀತ ಸಾಹಿತ್ಯ ಸಂಭ್ರಮ ಕಾರ್ಯಕ್ರಮ ಪ್ರದರ್ಶಿಸಲ್ಪಟ್ಟಿತು.

More articles

Latest article