ವಿಟ್ಲ: ವಿಟ್ಲ ವ್ಯವಸಾಯ ಸೇವಾ ಸಹಕಾರಿ ಸಂಘದ ನೂತನ ಅಧ್ಯಕ್ಷರಾಗಿ ನರ್ಸಪ್ಪ ಪೂಜಾರಿ ಅವರನ್ನು ಸರ್ವಾನುಮತದಲ್ಲಿ ಆಯ್ಕೆ ಮಾಡಲಾಯಿತು. ಉಪಾಧ್ಯಕ್ಷರಾಗಿ ಮಹಾಬಲೇಶ್ವರ ಭಟ್ ಅವರು ಆಯ್ಕೆಗೊಂಡರು.
ಸಂಘದ ಕಚೇರಿಯಲ್ಲಿ ಶನಿವಾರ ನಡೆದ ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆ ಚುನಾವಣೆಯಲ್ಲಿ ಚುನಾವಣಾಧಿಕಾರಿ ತ್ರೀವೇಣಿ ರಾವ್ ಅವರು ಆಯ್ಕೆ ಪ್ರಕ್ರಿಯೆ ನಡೆಸಿಕೊಟ್ಟರು. ಸಂಘದ ಕಾರ್ಯನಿರ್ವಾಹಣಾಧಿಕಾರಿ ಶಶಿಕಲಾ ಕೆ.ಪಿ ಸಹಕರಿಸಿದರು. ಇತ್ತೀಚೆಗೆ ನಡೆದ ಚುನಾವಣೆಯಲ್ಲಿ ೧೩ ಬಿಜೆಪಿ ಬೆಂಬಲಿತ ಸದಸ್ಯರು ಆಯ್ಕೆಗೊಂಡಿದ್ದರು.
ಸಂಘದ ನಿರ್ದೇಶಕರಾದ ದಯಾನಂದ ಶೆಟ್ಟಿ, ಸದಾನಂದ, ರಾಘವೇಂದ್ರ ಪೈ ಎ, ದಿನೇಶ್ ಕೆ, ಅಚ್ಚುತ ನಾಯಕ್, ಗೌರಿ ಎಸ್.ಎನ್ ಭಟ್, ಸಂಗೀತ ಎನ್, ಕವಿತಾ ಕೆ.ಯನ್, ವಾಸು ಸಿ.ಎಚ್, ಶಿವಪ್ಪ ನಾಯ್ಕ, ಉದಯಕುಮಾರ್, ವಿಟ್ಲ ಬಿಜೆಪಿ ನಗರ ಅಧ್ಯಕ್ಷ ಮೋಹನದಾಸ ಉಕ್ಕುಡ, ಪ್ರಮುಖರಾದ ಜಗನ್ನಾಥ ಸಾಲಿಯಾನ್, ವಿಟ್ಲ ಪಟ್ಟಣ ಪಂಚಾಯಿತಿ ಸ್ಥಾಯಿ ಸಮಿತಿ ಅಧ್ಯಕ್ಷೆ ಉಷಾ ಕೃಷ್ಣಪ್ಪ, ಸದಸ್ಯರಾದ ಮಂಜುನಾಥ ಕಲ್ಲಕಟ್ಟ, ರವಿಪ್ರಕಾಶ್, ಅರುಣ್ ವಿಟ್ಲ, ಶ್ರೀಕೃಷ್ಣ, ಚಂದ್ರಕಾಂತಿ ಶೆಟ್ಟಿ, ರಾಮದಾಸ್ ಶೆಣೈ, ಲೋಕನಾಥ ಶೆಟ್ಟಿ ಕೊಲ್ಯ, ವಿಟ್ಲ ಮುಡ್ನೂರು ಗ್ರಾಮ ಪಂಚಾಯಿತಿ ಅಧ್ಯಕ್ಷೆ ಪ್ರೇಮಲತಾ, ಬ್ರಹ್ಮಶ್ರೀ ನಾರಾಯಣ ಗುರು ವಿವಿಧೋದ್ಧೇಶ ಸೌಹಾರ್ದ ಸಹಕಾರಿ ಸಂಘದ ಅಧ್ಯಕ್ಷ ಸಂಜೀವ ಪೂಜಾರಿ ನಿಡ್ಯ, ಉಪಾಧ್ಯಕ್ಷ ಬಾಬು ಕೆ.ವಿ, ನಿರ್ದೇಶಕ ಮಾಧವ ಪೂಜಾರಿ ಪಟ್ಲ, ರಮೇಶ್ ಆರ್.ಎಸ್, ಎಸ್. ನಾರಾಯಣ ಮಾಣಿಲ, ಗೋವರ್ಧನ್ ನಾಯಕ್, ಪುನೀತ್ ಮಾಡತ್ತಾರು, ನೋಣಯ್ಯ ಪೂಜಾರಿ ಕಲ್ಲಕಟ್ಟ, ಸೂರಜ್, ಲಕ್ಷ್ಮಣ ಆರ್.ಎಸ್, ಸತ್ಯನಾರಾಯಣ, ಯತೀಶ್ ಪೂಜಾರಿ, ಯಶವಂತ, ಸಂಕಪ್ಪ ಗೌಡ, ಅನಂತ ಪ್ರಸಾದ್ ಮೊದಲಾದವರು ಉಪಸ್ಥಿತರಿದ್ದರು.

LEAVE A REPLY

 Click this button or press Ctrl+G to toggle between Kannada and English

Please enter your comment!
Please enter your name here