Sunday, October 22, 2023

ಝಿರೋ ಟ್ರಾಫಿಕ್ ಗೆ ನೆರವಾದ ಜಿಲ್ಲೆಯ ಜನತೆಗೆ ಪೋಲೀಸರಿಂದ ಧನ್ಯವಾದ

Must read

ಬಂಟ್ವಾಳ: ಝಿರೋ ಟ್ರಾಫಿಕ್ ಗೆ ನೆರವಾದ ಜಿಲ್ಲೆಯ ಜನತೆಗೆ ಪೋಲೀಸರು ಧನ್ಯವಾದ ಹೇಳಿದ್ದಾರೆ.

ಮಂಗಳೂರು ಖಾಸಗಿ ಆಸ್ಪತ್ರೆಯಲ್ಲಿ ಹೃದಯ ಸಂಬಂಧಿ ಕಾಯಿಲೆಯಿಂದ ಬಳಲುತ್ತಿದ್ದ ೪೦ ದಿನಗಳ ಸೈಫುಲ್ ಅಝ್ಮಾನ್ ಎಂಬ ಮಗುವನ್ನು ಗುರುವಾರ ಬೆಂಗಳೂರಿನ ಜಯದೇವ ಆಸ್ಪತ್ರೆಗೆ ಆ್ಯಂಬುಲೆನ್ಸ್ ಮೂಲಕ ಝೀರೊ ಟ್ರಾಫಿಕ್ ನಲ್ಲಿ ಸಾಗಿಸಬೇಕಿತ್ತು.
ಆದರೆ ಮಂಗಳೂರಿನಿಂದ ಬೆಂಗಳೂರುವೆರಗೂ ಜನರು ಉತ್ತಮ ಸಹಕಾರ ನೀಡಿದ್ದಾರೆ, ಎಂದು ಪೋಲೀಸರು ತಿಳಿಸಿದ್ದಾರೆ.
ಫರಂಗಿಪೇಟೆಯಿಂದ ಉಪ್ಪಿನಂಗಡಿವರೆಗೆ ಆ್ಯಂಬುಲೆನ್ಸ್ ಸಾಗುವುದಕ್ಕೆ ಬಂಟ್ವಾಳ ಸಂಚಾರಿ ಪೊಲೀಸರು ನೆರವಾಗಿದ್ದಾರೆ.
ಬಂಟ್ವಾಳ ಸಂಚಾರಿ ಪಿಎಸ್ಐ ರಾಮ ನಾಯ್ಕ್ ಅವರ ನೇತೃತ್ವದಲ್ಲಿ ಪೊಲೀಸ್ ಸಿಬಂದಿ ಅಧಿಕ ವಾಹನದೊತ್ತಡ ಇರುವ ಫರಂಗಿಪೇಟೆ, ಕೈಕಂಬ, ಬಿ.ಸಿ.ರೋಡು, ಮೆಲ್ಕಾರ್, ಕಲ್ಲಡ್ಕ, ಮಾಣಿ ಪ್ರದೇಶದಲ್ಲಿ ಆ್ಯಂಬುಲೆನ್ಸ್ ಸಾಗುವುದಕ್ಕೆ ಸಹಕರಿಸಿದ್ದಾರೆ.
ಒಟ್ಟು 18 ಟ್ರಾಫಿಕ್ ಪೋಲೀಸರು, ನಗರ ,ಗ್ರಾಮಾಂತರ ಪೋಲಿಸರ ಜೊತೆ ಗೃಹರಕ್ಷಕದಳ ಹಾಗೂ ಸಾರ್ವಜನಿಕರು ಕೂಡ ಪೊಲೀಸರಿಗೆ ನೆರವಾಗಿದ್ದಾರೆ ಎಂದು ಪೋಲೀಸರು ತಿಳಿಸಿದ್ದಾರೆ.
ಕೇವಲ ಸಾಮಾಜಿಕ ಜಾಲತಾಣದ ಸಂದೇಶಗಳ ಮೂಲಕ ಅತೀ ಹೆಚ್ಚಿನ ಸಹಕಾರ ದೊರೆತಿದೆ ಎಂದು ಅವರು ಹೇಳಿದ್ದಾರೆ

More articles

Latest article