ಬಂಟ್ವಾಳ: ಪಕ್ಷಿಗಳ ಗೂಡನ್ನು ಕಂಡು ನಾವುಗಳು ಕುತೂಹಲದಿಂದ ಅದನ್ನು ಮುಟ್ಟಿ, ಕಲ್ಲು ಬಿಸಾಡಿ, ಗೂಡಿನಲ್ಲಿರುವ ಮೊಟ್ಟೆಯನ್ನು ಕುಟ್ಟಿ ಪುಡಿ-ಪುಡಿ ಮಾಡುವ ಅಥವಾ ಮರಿಗಳನ್ನು ಸಾಯಿಸುವ ವಿಕೃತ ಮನಸ್ಸಿನಿಂದ ಪಕ್ಷಿ ಪ್ರಪಂಚಕ್ಕೆ ಕಂಟಕವಾಗಿದೆ. ನಾವು ಬದುಕುವ, ಈ ಭೂಮಿಯ ಮೇಲೆ ಬದುಕುವ ಇತರ ಜೀವಿಗಳನ್ನು ಬದುಕಲು ಬಿಡುವ. ಪಕ್ಷಿಗಳ ಬಂಧನ ತರವಲ್ಲ ಎಂದು ಗುಬ್ಬಚ್ಚಿ ಗೂಡು ಜಾಗೃತಿ ಅಭಿಯಾನದ ಸಂಚಾಲಕಿ ರಮ್ಯ ನಿತ್ಯಾನಂದ ಶೆಟ್ಟಿ ಹೇಳಿದರು.
ಅವರು ಸಿದ್ಧಕಟ್ಟೆ ಸರಕಾರಿ ಪ್ರೌಢಶಾಲೆಯಲ್ಲಿ ನಡೆದ ಗುಬ್ಬಚ್ಚಿ ಗೂಡು….. ಅಳಿವಿನಂಚಿನಲ್ಲಿರುವ ಪಕ್ಷಿ ಸಂಕುಲಗಳ ಉಳಿವಿಗೆ ಸಸ್ಯರಾಶಿಗಳ ಮಹತ್ವ ಜಾಗೃತಿ ಕಾರ್ಯಾಗಾರದಲ್ಲಿ ಮಾತನಾಡಿದರು.


ಗುಬ್ಬಚ್ಚಿ ಗೂಡು ಜಾಗೃತಿ ಅಭಿಯಾನದ ರೂವಾರಿ ನಿತ್ಯಾನಂದ ಶೆಟ್ಟಿ, ವಿದ್ಯಾರ್ಥಿಗಳಿಗೆ ಪಕ್ಷಿ ಮತ್ತು ಪತಂಗಗಳ ಛಾಯಾಗ್ರಹಣ ತೋರಿಸಿ, ಸಂವಾದ ನಡೆಸಿ, ಕಾಗೆಗಳಿದ್ದರೆ ಮಾತ್ರ ಕೋಗಿಲೆಗಳ ಉಳಿವು ಸಾಧ್ಯ, ಬಣ್ಣಕ್ಕೆ ಮರುಳಾಗಿ ಕಾಗೆಗಳ ಪಾಲಿಗೆ ಕಂಟಕರಾಗದಿರಿ. ಕಾಗೆಗಳು ಕೂಡ ನಮಗೆ ಅವಶ್ಯ. ಪಕ್ಷಿ ಸಂರಕ್ಷಣೆ ನಮ್ಮೆಲ್ಲರ ಹೊಣೆ, ಬೇಸಿಗೆ ಕಾಲದಲ್ಲಿ ನೀರು, ಆಹಾರವನ್ನು ಇಟ್ಟು ಮಳೆಗಾಲದಲ್ಲಿ ಗಿಡಗಳನ್ನು ನೆಟ್ಟು ಪಕ್ಷಿ ಲೋಕದ ಉಳಿವಿಗೆ ಪಣ ತೊಡೋಣ ಅಂದರು.
ಈ ಸಂದರ್ಭದಲ್ಲಿ ಮಣ್ಣಿನ ಪಾತ್ರೆಯನ್ನು ಉಚಿತವಾಗಿ ನೀಡಿ, ಪಕ್ಷಿಗಳಿಗೆ ನೀರು ಮತ್ತು ಆಹಾರ ಇಡುವ ವಿಧಾನವನ್ನು ಪ್ರಾತ್ಯಕ್ಷಿಕೆಯ ಮೂಲಕ ವಿವರಿಸಲಾಯಿತು.
ಉಪ ಪ್ರಾಂಶುಪಾಲ ರಮಾನಂದ ಹಾಗೂ ಸಹ ಶಿಕ್ಷಕರು ಉಪಸ್ಥಿತರಿದ್ದರು.

LEAVE A REPLY

 Click this button or press Ctrl+G to toggle between Kannada and English

Please enter your comment!
Please enter your name here