ಕಲ್ಲಡ್ಕ: ಶ್ರೀರಾಮ ವಿದ್ಯಾಕೇಂದ್ರದ ಪ್ರಾಥಮಿಕ ಶಾಲೆ, ಪ್ರೌಢಶಾಲೆ, ಪದವಿ ಪೂರ್ವ ಹಾಗೂ ಪದವಿ ವಿದ್ಯಾಲಯದ ಎಲ್ಲಾ ವಿದ್ಯಾರ್ಥಿಗಳು ಒಟ್ಟಾಗಿ ಮೈದಾನದಲ್ಲಿ ಸೇರಿ ರಥಸಪ್ತಮಿ ನಿಮಿತ್ತ ಸಾಮೂಹಿಕ ಸೂರ್ಯನಮಸ್ಕಾರ ಮಾಡಿದರು.

 

ಯೋಗ ಶಿಕ್ಷಕ ಸಂಜಯ್ ವಿದ್ಯಾರ್ಥಿಗಳಿಗೆ ಮಂತ್ರ ಸಹಿತ ಸೂರ್ಯನಮಸ್ಕಾರ ಮಾಡಿಸಿದರು. ಆವಿಷ್ಕಾರ್‌ ಯೋಗ ತರಬೇತುದಾರ ವಿಶಿತ್ ವಿ. ದೇರಳಕಟ್ಟೆ ಅವರು ರಥಸಪ್ತಮಿ ದಿನದ ಮಹತ್ವವನ್ನು ತಿಳಿಸಿಕೊಟ್ಟರು.

ವೇದಿಕೆಯಲ್ಲಿ ಕಬಕ ಸರಕಾರಿ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲೆ ಪ್ರೇಮಲತಾ, ಹಿರಿಯರಾದ ಡಾ. ಕಮಲಾ ಪ್ರಭಾಕರ ಭಟ್, ವಿದ್ಯಾಕೇಂದ್ರದ ಸಹಸಂಚಾಲಕ ರಮೇಶ್‌ ಎನ್., ಹಾಗೂ ಎಲ್ಲಾ ವಿಭಾಗದ ಮುಖ್ಯಸ್ಥರು ಉಪಸ್ಥಿತರಿದ್ದರು. ಶಾರೀರಿಕ ನಿರ್ದೇಶಕ ಕರುಣಾಕರ ಸ್ವಾಗತಿಸಿ, ಜಿನ್ನಪ್ಪ ಏಳ್ತಿಮಾರ್ ವಂದಿಸಿದರು.

LEAVE A REPLY

 Click this button or press Ctrl+G to toggle between Kannada and English

Please enter your comment!
Please enter your name here