ಅರ್ಕುಳ: ಶ್ರೀ ಉಳ್ಳಾಕ್ಲು ಮಗೃಂತಾಯಿ ಧರ್ಮದೇವತೆಗಳ ವರ್ಷಾವಧಿ ಸಾಣದ ಜಾತ್ರೆಯು ಫ಼ೆ.2 ರವಿವಾರದಿಂದ ಫ಼ೆ.8 ಶನಿವಾರದವರೆಗೆ ನಡೆಯಲಿದೆ. ಫ಼ೆ. 2ರ ರವಿವಾರದಂದು ಮುಂಜಾನೆ ತೋರಣ ಮುಹೂರ್ತ ಹಾಗೂ ಸಂಜೆ ಪ್ರಥಮ ಚೆಂಡು, ಫೆ.6ರ ಗುರುವಾರದಂದು ಕೊನೆ ಚೆಂಡು, ರಾತ್ರಿ ಅರ್ಕುಳ ಬೀಡಿನಿಂದ ಶ್ರೀ ದೈವಗಳ ಭಂಡಾರ ಆಗಮಿಸಿ, ದ್ವಜಾರೋಹಣ ಹಾಗೂ ಕಂಚಿಲು ಸೇವೆ ನಡೆಯಲಿದೆ. ಫೆ.7 ಶುಕ್ರವಾರದಂದು ಮುಂಜಾನೆ ಮಡಸ್ತಾನ ಸೇವೆ, ನವ ಕಲಶಾಭಿಷೇಕ, ಚಂಡಿಕಾಯಾಗ, ಅನ್ನ ಸಂತರ್ಪಣೆ, ಸಂಜೆ ಸಾಮೂಹಿಕ ದುರ್ಗಾನಮಸ್ಕಾರ ಪೂಜೆ ರಾತ್ರಿ ಶ್ರೀ ಉಳ್ಳಾಕ್ಲು ಧರ್ಮದೇವತೆಗಳ ನೇಮ ಹಾಗೂ ಬಂಡಿ ಉತ್ಸವ ನಡೆಯಲಿದೆ. ಫೆ.8ರ ಶನಿವಾರದಂದು ಪೂರ್ವಾಹ್ನ ಬಸದಿಯಲ್ಲಿ ಶ್ರೀ ಪದ್ಮಾವತೀ ದೇವಿ ಪ್ರತಿಷ್ಠೆ, ಮಧ್ಯಾಹ್ನ ಸಾಣದಲ್ಲಿ ಪಂಚಾಮೃತಭಿಷೇಕ, ನಂದಿ ಪೂಜೆ,ಅನ್ನ ಸಂತರ್ಪಣೆ, ಸಂಜೆ ಅರ್ಕುಳ ಬಸದಿಯಲ್ಲಿ ಮಹಾಮಾತೆ ಪದ್ಮಾವತೀ ದೇವಿಗೆ ಲಕ್ಷಪುಷ್ಪಾರ್ಚನೆ ಪೂಜೆ, ರಾತ್ರಿ ಶ್ರೀ ಮಗೃಂತಾಯಿ ಧರ್ಮದೈವದ ನೇಮ, ಬಂಡಿ ಉತ್ಸವಗಳು ಸಂಪನ್ನಗೊಳ್ಳಲಿದೆ ಎಂದು ಶ್ರೀ ಕ್ಷೇತ್ರ ಅರ್ಕುಳದ ಧರ್ಮದರ್ಶಿ ಅರ್ಕುಳ ಬೀಡು ವಜ್ರನಾಭ ಶೆಟ್ಟಿ ಅವರು ತಿಳಿಸಿದ್ದಾರೆ.

LEAVE A REPLY

 Click this button or press Ctrl+G to toggle between Kannada and English

Please enter your comment!
Please enter your name here