ಬಂಟ್ವಾಳ: ವಾಮದಪದವು ಮೂಡುಪಡುಕೋಡಿಯಲ್ಲಿ ಸ್ಕೌಟ್ಸ್ ಗೈಡ್ಸ್ ಸ್ಥಳೀಯ ಸಂಸ್ಥೆ ಸಂಘಟಿಸಿದ ಸ್ಕೌಟ್ಸ್ ಗೈಡ್ಸ್ ವಿದ್ಯಾರ್ಥಿಗಳ ದ್ವಿತೀಯ ಸೋಪಾನ ಪರೀಕ್ಷೆಯಲ್ಲಿ ರಝಾನಗರದ ಬುರೂಜ್ ಆಂಗ್ಲ ಮಾಧ್ಯಮ ಪ್ರೌಢಶಾಲೆಯ ಸ್ಕೌಟ್ಸ್ ೭ನೇ ತರಗತಿಯ ವಿದ್ಯಾರ್ಥಿಗಳಾದ ಎಮ್. ಎ. ಮೊಹಮ್ಮದ್ ಇರ್ಫಾನ್, ಮೊಹಮ್ಮದ್ ಶಫೀಕ್, ಶೇಕ್ ಮೋಹಮ್ಮದ್ ಜುನೈದ್, ಮೊಹಮ್ಮದ್ ಅನ್ವಾಝ್, ಮೊಹಮ್ಮದ್ ಮಹ್‌ಶೂಕ್, ರಿದಾನ್ ರೆಹಮಾನ್ ಘಾಝಿ, ಶ್ರೇಯಸ್ ಎಸ್ ಪೂಜಾರಿ, ಮೊಹಮ್ಮದ್ ಶವಾದ್, ಸಾತ್ವಿಕ್ ಎಸ್. ಗಟ್ಟಿ, ವರುಣ್, ಪ್ರತೀಕ್, ಮುಹಮ್ಮದ್ ಅನ್ಸಾಫ್, ಕೀರ್ತೆಶ್ ಆರನೇ ತರಗತಿಯ ವಿದಾರ್ಥಿಗಳಾದ ವಿಶ್ರಾಂತ್ ಸಾಲ್ಯಾನ್, ವಿತೇಶ್, ಪ್ರಗತ್ ಪಿ ಶೆಟ್ಟಿ, ಮೊಹಮ್ಮದ್ ಫವಾಝ್ ಹಾಗೂ ೯ನೇ ತರಗತಿಯ ವಿದ್ಯಾರ್ಥಿಗಳಾದ ಮೊಹಮ್ಮದ್ ಬಾಕಿರ್, ಮೊಹಮ್ಮದ್ ಶಬೀಬ್, ಮೊಹಮ್ಮದ್ ಸುಹೈಲ್ ವಿದ್ಯಾರ್ಥಿಗಳು ಭಾಗವಹಿಸಿ ಸ್ಥಳಿಯ ಸಂಸ್ಥೆ ನೀಡುವ ಪ್ರಶಸ್ತಿಯನ್ನು ಗಳಿಸಿದ್ದಾರೆ.
ಈ ಪ್ರಶಸ್ತಿ ಪತ್ರಗಳನ್ನು ಬುರೂಜ್ ಸಂಸ್ಥೆಯ ಸಂಚಾಲಕ ಜನಾಬ್ ಶೇಕ್ ರಹ್ಮತ್ತುಲ್ಲಾ ವಿದ್ಯಾರ್ಥಿಗಳಿಗೆ ಹಸ್ತಾಂತರಿಸಿ, ಅಭಿನಂದಿಸಿದ್ದಾರೆ.
ಮುಖ್ಯ ಶಿಕ್ಷಕಿ ಜಯಶ್ರೀ ಸಾಲ್ಯಾನ್, ಸ್ಕೌಟ್ಸ್ ಶಿಕ್ಷಕಿ ಶೋಭಾ, ಗೈಡ್ಸ್ ಶಿಕ್ಷಕಿ ವನಿತಾ ಶೆಟ್ಟಿ ತರಬೇತಿ ನೀಡಿರುತ್ತಾರೆ.

LEAVE A REPLY

 Click this button or press Ctrl+G to toggle between Kannada and English

Please enter your comment!
Please enter your name here