



ಕನ್ಯಾನ: ಗುರು ಎಜ್ಯುಕೇಶನ್ ಟ್ರಸ್ಟ್ನ ಕನ್ಯಾನ ಶ್ರೀ ಸರಸ್ವತಿ ವಿದ್ಯಾಲಯದಲ್ಲಿ ೭೧ನೇ ವರ್ಷದ ಗಣರಾಜ್ಯೋತ್ಸವವನ್ನು ಸಂಭ್ರಮದಿಂದ ಆಚರಿಸಲಾಯಿತು. ಶಾಲಾ ಸಂಚಾಲಕರಾದ ಈಶ್ವರ ಪ್ರಸಾದರವರು ಧ್ವಜಾರೋಹಣವನ್ನು ನೆರವೇರಿಸಿದರು.
ಸಮಾರಂಭದಲ್ಲಿ ಪ್ರೌಢ ಶಾಲಾ ಮುಖ್ಯ ಶಿಕ್ಷಕಿ ಮಧುರಾ ಈಶ್ವರ ಪ್ರಸಾದ್, ಪ್ರಾಥಮಿಕ ಶಾಲಾ ಮುಖ್ಯ ಶಿಕ್ಷಕಿ ಸರಸ್ವತಿ, ಶಿಕ್ಷಕ ವೃಂದದವರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ವಿದ್ಯಾರ್ಥಿಗಳಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು.
ಶಾಲಾ ವಿದ್ಯಾರ್ಥಿಗಳಾದ ಸನ್ಮಯಾ ಐ.ಕೆ ಸ್ವಾಗತಿಸಿದರು. ಪಲ್ಲವಿ ವಂದಿಸಿದರು. ಮೋಕ್ಷಿತ್ ಪಿ.ಕೆ ಕಾರ್ಯಕ್ರಮ ನಿರೂಪಿಸಿದರು. ವಿದ್ಯಾರ್ಥಿಗಳಿಂದ ಆಕರ್ಷಕ ಪಥ ಸಂಚಲನ ನಡೆಯಿತು.






