Friday, October 27, 2023

ಕಟೀಲು ಕ್ಷೇತ್ರದ ಬ್ರಹ್ಮಕಲಶೋತ್ಸವಕ್ಕೆ ಬಂಟ್ವಾಳ ತಾಲೂಕಿನ ಹೊರೆಕಾಣಿಕೆ

Must read

ಬಂಟ್ವಾಳ: ಕಟೀಲು ಕ್ಷೇತ್ರದ ಬ್ರಹ್ಮಕಲಶೋತ್ಸವಕ್ಕೆ ಬಂಟ್ವಾಳ ತಾಲೂಕಿನ ಎಲ್ಲಾ ಗ್ರಾಮಗಳಿಂದಲೂ ನೀಡಿದ ಹೊರೆಕಾಣಿಕೆ ಯನ್ನು ಜ. ೨೬ರಂದು ಆದಿತ್ಯವಾರ ಮಧ್ಯಾಹ್ನ 3 ಗಂಟೆಗೆ ತಾಲೂಕಿನ ಎಲ್ಲಾ ಕಡೆಯ ಹೊರೆಕಾಣಿಕೆಯನ್ನು ಒಟ್ಟುಗೂಡಿಸಿ ಬಳಿಕ ಕೈಕಂಬ ದ್ವಾರದವರೆಗೆ ಪಾದಯಾತ್ರೆಯ ಮೂಲಕ ಮೆರವಣಿಗೆ ನಡೆಸಿ ಕಟೀಲು ಕ್ಷೇತ್ರಕ್ಕೆ ಸಮರ್ಪಿಸಲಾಯಿತು.

ಎಂದು ಶ್ರೀಧಾಮ ಮಾಣಿಲದ ಶ್ರೀ ಮೋಹನದಾಸ ಸ್ವಾಮೀಜಿ ಅವರು ಹೊರಕಾಣಿಕೆಯ ಮೆರವಣಿಗೆಗೆ ಚಾಲನೆ ನೀಡಿದರು.

ಈ ಸಂದರ್ಭದಲ್ಲಿ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿಗುತ್ತು, ಮಾಜಿ ಸಚಿವ ಬಿ.ರಮಾನಾಥ ರೈ ಬೊಂಡಾಲ ಸಚ್ಚಿದಾನಂದ ಶೆಟ್ಟಿ, ಚಂದ್ರಹಾಸ ಡಿ.ಶೆಟ್ಟಿ, ಭುವನೇಶ್ ಪಚ್ಚಿನಡ್ಕ, ತೇವು ತಾರಾನಾಥ ಕೊಟ್ಟಾರಿ ಮತ್ತಿತರ ಪ್ರಮುಖರು ಹಾಜರಿದ್ದರು.

ಎಲ್ಲೆಲ್ಲಿಂದ ಹೊರೆಕಾಣಿಕೆ.?
ಕಟೀಲು ಕ್ಷೇತ್ರಕ್ಕೆ ಜ. 22ರಂದು ಬೆಳಗ್ಗೆ ಶಿಬರೂರು, ಅತ್ತೂರು, ಕೊಡೆತ್ತೂರು, ಜ. 23ರಂದು ಸಂಜೆ ಮಂಗಳೂರು, ಜ. 24ರಂದು ಬೆಳಗ್ಗೆ ಬಪ್ಪನಾಡು, ಉಳ್ಳಾಲ, ಸಂಜೆ ಬಜ್ಪೆ, ಜ. 25ರಂದು ಕಾಸರಗೋಡು, ಸುಳ್ಯ, ಜ. 26ರಂದು ಬಂಟ್ವಾಳ ತಾಲೂಕು, ಜ. 27ರಂದು ಬೆಳಗ್ಗೆ ಪುತ್ತೂರು, ಸಂಜೆ ಕಾವೂರು, ಕಳತ್ತೂರು, ಜ. 28ರಂದು ಉಡುಪಿ ಹಾಗೂ ಜ. 29ರಂದು ಬೆಳ್ತಂಗಡಿ ಯಿಂದ ಹೊರೆಕಾಣಿಕೆ ಸಮರ್ಪಣೆಯಾಗಲಿದೆ.

More articles

Latest article