


ಬಂಟ್ವಾಳ: ರಂಗನಿರ್ದೇಶಕ, ಸಾಹಿತಿ, ಉದ್ಘೋಷಕ ಎಚ್ಕೆ.ನಯನಾಡು ಅವರು ಕರ್ನಾಟಕ ಸರಕಾರ ಕೊಡಮಾಡುವ ದ.ಕ.ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.
ನಾಳೆ ಮಂಗಳೂರಿನ ನೆಹರು ಮೈದಾನದಲ್ಲಿ ನಡೆಯುವ ಗಣರಾಜ್ಯೋತ್ಸವ ಸಮಾರಂಭದಲ್ಲಿ ಅವರು ಪ್ರಶಸ್ತಿ ಸ್ವೀಕರಿಸಲಿದ್ದಾರೆ.
ಎಚ್ಕೆ.ನಯನಾಡು ಅವರು ನಾಟಕ ರಚನೆಗಾರರಾಗಿ, ನಟರಾಗಿ, ನಿರ್ದೇಶಕರಾಗಿ, ಕವಿಯಾಗಿ, ಸಂಘಟಕರಾಗಿ, ಸಾಹಿತಿಯಾಗಿ, ಚಲನಚಿತ್ರ ಕಲಾವಿದರಾಗಿ, ಸಂಘಟಕರಾಗಿ, ಸಾಮಾಜಿಕ/ ಸಾಹಿತ್ಯ/ ಕಲೆ/ ಸಾಂಸ್ಕ್ರತಿಕ ಚಟುವಟಿಕೆಗಳಲ್ಲಿ ಸಕ್ರೀಯವಾಗಿ ತೊಡಗಿಸಿಕೊಂಡಿದ್ದಾರೆ.





