ಅಡ್ಯನಡ್ಕ: ಇಲ್ಲಿನ ಜನತಾ ಪದವಿಪೂರ್ವ ಕಾಲೇಜಿನಲ್ಲಿ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಿಗೆ ಬೀಳ್ಕೊಡುಗೆ ಕಾರ್ಯಕ್ರಮ ನಿನ್ನೆ ಜರಗಿತು.
ಅಡ್ಯನಡ್ಕ ಎಜುಕೇಷನಲ್ ಸೊಸೈಟಿ ಅಧ್ಯಕ್ಷ ಗೋವಿಂದ ಪ್ರಕಾಶ್ ಸಾಯ ಅಧ್ಯಕ್ಷತೆ ವಹಿಸಿ ಮಾತನಾಡಿ, ಹೆತ್ತವರು, ಗುರುಗಳು ಮತ್ತು
ಸಮಾಜ ಕೊಟ್ಟಿರುವ ಜವಾಬ್ದಾರಿಗಳನ್ನು ವಿದ್ಯಾರ್ಥಿ ಸಮುದಾಯ ಪಾಲಿಸಬೇಕು. ಉತ್ತಮ ಫಲಿತಾಂಶವನ್ನು ಪಡೆದು ಜೀವನದಲ್ಲಿ
ಯಶಸ್ಸು ಗಳಿಸಬೇಕು ಎಂದು ಹೇಳಿದರು.

ಜನತಾ ಪದವಿಪೂರ್ವ ಕಾಲೇಜಿನ ಸಂಚಾಲಕಿ ಡಾ. ಅಶ್ವಿನಿ ಕೃಷ್ಣಮೂರ್ತಿ, ಜನತಾ ವಿದ್ಯಾಸಂಸ್ಥೆಗಳ ಆಡಳಿತಾಧಿಕಾರಿ ರಮೇಶ್ ಎಂ. ಬಾಯಾರು ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದು, ಮಾತನಾಡಿದರು.

ಜನತಾ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲ ಡಿ. ಶ್ರೀನಿವಾಸ್, ಜನತಾ ಪ್ರೌಢಶಾಲೆಯ ಮುಖ್ಯೋಪಾಧ್ಯಾಯ ಟಿ.
ಆರ್. ನಾಯ್ಕ್ ಶುಭ ಹಾರೈಸಿದರು.
ಉಪನ್ಯಾಸಕ ವೃಂದದ ಪರವಾಗಿ ಜಯಶ್ರೀ ಕೆ. ಆರ್., ವೀಣಾ ಟಿ., ವಸಂತ ಕೆ. ಅವರು ಮಾತನಾಡಿದರು. ಜೀವಶಾಸ್ತ್ರ ಉಪನ್ಯಾಸಕ
ರವಿಕುಮಾರ್ ಎಸ್ ಆರ್ ಪ್ರಸ್ತಾವಿಸಿದರು. ಪ್ರಥಮ ಪಿಯುಸಿ ವಿದ್ಯಾರ್ಥಿಗಳ ಪರವಾಗಿ ಕವಿತಾಲಕ್ಷ್ಮೀ, ಅಭಯ್, ಶರೀಫ್, ಸುದೇಶ್,
ಅಭಿಲಾಷ್ ಮತ್ತು ತೇಜಸ್ವಿನಿ ಹಾಗೂ ದ್ವಿತೀಯ ಪಿಯುಸಿಯ ಕೃಷ್ಣ ಶರ್ಮ, ದೀಕ್ಷಿತಾ, ಯಾದವ್, ಸಿಂಚನಾ, ಅನ್ವಿತಾ, ಅನ್ನಪೂರ್ಣ,
ನವ್ಯಶ್ರೀ, ಶರಣ್, ಭಾಗ್ಯಶ್ರೀ, ಕಿಶೋರ್, ಸಂಕೇತ್ ಬಾಳಿಗ, ಮಹಮ್ಮದ್ ಮುಝಮ್ಮಿಲ್ ಮತ್ತು ಕಾವ್ಯ ಸಾಗರ್ ಅವರು
ಅನಿಸಿಕೆಗಳನ್ನು ಹಂಚಿಕೊಂಡರು.
ವಿದ್ಯಾರ್ಥಿನಿಯರಾದ ಭಾಗ್ಯಲಕ್ಷ್ಮೀ ಸ್ವಾಗತಿಸಿ, ಚೈತನ್ಯ ಕಾರ್ಯಕ್ರಮ ನಿರೂಪಿಸಿ, ಭವ್ಯಶ್ರೀ ವಂದಿಸಿದರು.

LEAVE A REPLY

 Click this button or press Ctrl+G to toggle between Kannada and English

Please enter your comment!
Please enter your name here