


ಬಂಟ್ವಾಳ: ಬಂಟ್ವಾಳ ತಾಲೂಕು ಉಳಿ ಗ್ರಾಮದ ಕಕ್ಯಪದವುನಲ್ಲಿರುವ ಉಳಿ ಸೇವಾ ಸಹಕಾರಿ ಸಂಘ ಇದರ ಆಡಳಿತ ಮಂಡಳಿಗೆ ಮುಂದಿನ 5 ವರ್ಷಗಳ ಅವಧಿಗೆ 13 ಸ್ಥಾನಗಳಿಗೆ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಆಡಳಿತ ಮಂಡಳಿ ಆಯ್ಕೆಗೆ ಜ.27 ರಂದು ನಡೆಯಬೇಕಾಗಿದ್ದ ಚುನಾವಣೆಗೆ ಸಂಘದ ಉಪನಿಯಮಗಳ ಪ್ರಕಾರ ಅವಿರೋಧವಾಗಿ ಈ ಆಯ್ಕೆ ನಡೆಸಲಾಗಿದೆ ಎಂದು ಜ.22ರಂದು ಸಂಘದ ಕಚೇರಿಯಲ್ಲಿ ನಡೆದ ಆಯ್ಕೆ ಪ್ರಕ್ರಿಯೆಯಲ್ಲಿ ಚುನಾವಣಾಧಿಕಾರಿ ಅವರು ಘೋಷಿಸಿದ್ದಾರೆ.
ಸಾಲಗಾರ ಸಾಮಾನ್ಯ ಸ್ಥಾನದಿಂದ ವಾಸುದೇವ ಮಯ್ಯ, ಡಾ. ದಿನೇಶ ಬಂಗೇರ, ಚಿದಾನಂದ ರೈ, ಸಂಜೀವ ಗೌಡ ಅಗಲ, ಎ.ಚೆನ್ನಪ್ಪ ಸಾಲ್ಯಾನ್, ಸಾಂತಪ್ಪ ಗೌಡ, ಹಿಂದುಳಿದ ವರ್ಗದಿಂದ ರಂಜಿತ್ ಎಂ., ವಿಶ್ವನಾಥ ಪೂಜಾರಿ, ಮಹಿಳಾ ಸ್ಥಾನದಿಂದ ಶಶಿಕಲಾ, ರೇಖಾ, ಪ.ಜಾತಿ ಸ್ಥಾನದಿಂದ ಕೃಷ್ಣಪ್ಪ, ಪ. ಪಂಗಡದಿಂದ ಲಿಂಗಪ್ಪ ನಾಯ್ಕ, ಸಾಲಗಾರರಲ್ಲದ ಸ್ಥಾನದಿಂದ ಹರೀಶ್ಚಂದ್ರ ಅವರು ಆಯ್ಕೆಯಾಗಿದ್ದಾರೆ.
ರಿಟರ್ನಿಂಗ್ ಅಧಿಕಾರಿ, ಸಹಕಾರಿ ಸಂಘಗಳ ಉಪನಿಬಂಧಕರ ಕಚೇರಿಯ ಅಧಿಕಾರಿ ಕೆ.ಎಸ್.ಜಗದೀಶ್ ಅವರ ನೇತೃತ್ವದಲ್ಲಿ ಚುನಾವಣಾ ಪ್ರಕ್ರಿಯೆ ನಡೆಯಿತು. ಮುಖ್ಯ ಕಾರ್ಯನಿರ್ವಹಣಾಧಿಕಾರಿ, ಸಿಬಂದಿ ವರ್ಗ ಸಹಕರಿಸಿದರು.







