ಬಂಟ್ವಾಳ: ಕಲ್ಲಡ್ಕ ಶ್ರೀರಾಮ ಪ್ರಥಮ ದರ್ಜೆ ಮಹಾವಿದ್ಯಾಲಯದ ಪ್ರಭಾಸ ಮಾನವಿಕ ಸಂಘದ ವತಿಯಿಂದ ಬಿಎ ವಿದ್ಯಾರ್ಥಿಗಳ ನ್ಯಾಯಾಲಯದ ಅಧ್ಯಯನ ಎಂಬ ಶೈಕ್ಷಣಿಕ ಚಟುವಟಿಕೆಗಾಗಿ ಬಿ.ಸಿರೋಡ್ ನ್ಯಾಯಾಲಯಕ್ಕೆ ಭೇಟಿ ನೀಡಿ ವಾದ-ವಿವಾದಗಳನ್ನು ವೀಕ್ಷಿಸಿದರು. ಈ ಸಂದರ್ಭದಲ್ಲಿ ಶ್ರೀರಾಮ ವಿದ್ಯಾ ಕೇಂದ್ರದ ಕೋಶಾಧಿಕಾರಿ ಹಾಗೂ ನ್ಯಾಯವಾದಿ ಸತೀಶ್ ಶಿವಗಿರಿ ಇವರು ನ್ಯಾಯಾಲಯದ ಕಾರ್ಯಚಟುವಟಿಕೆ ಹಾಗೂ ಹಂತಗಳ ಬಗ್ಗೆ ಸವಿವರವಾಗಿ ವಿದ್ಯಾರ್ಥಿಗಳಿಗೆ ಮಾಹಿತಿ ನೀಡಿದರು. 37 ವಿದ್ಯಾರ್ಥಿಗಳು ಹಾಗೂ ಉಪನ್ಯಾಸಕರು ಉಪಸ್ಥಿತರಿದ್ದರು.

LEAVE A REPLY

 Click this button or press Ctrl+G to toggle between Kannada and English

Please enter your comment!
Please enter your name here