ವಿಟ್ಲ: ಶಿಕ್ಷಕ, ಸಾಹಿತಿ ನಾಗರಾಜ ಖಾರ್ವಿ ಕಂಚುಗೋಡು ಅವರು ಬರೆದ, ಬೆಂಗಳೂರಿನ ಹೆಚ್.ಎಸ್.ಆರ್.ಎ. ಪ್ರಕಾಶನ ಪ್ರಕಟಿಸಿರುವ, ಕಮಲತನಯನ ಷಟ್ಪದಿ ಕವನ ಸಂಕಲನವನ್ನು ಬಿಡುಗಡೆಗೊಳಿಸಲಾಯಿತು.
ಕೃತಿ ಬಿಡುಗಡೆಗೊಳಿಸಿ ಮಾತನಾಡಿದ ಡಾ.ಟಿ.ಎಂ.ಎ.ಪೈ ಶಿಕ್ಷಣ ಮಹಾವಿದ್ಯಾಲಯದ ಸಂಯೋಜಕ ಡಾ.ಮಹಾಬಲೇಶ್ವರ ರಾವ್, ಛಂದೋಬದ್ಧವಾಗಿ ಬರೆಯುವವರೆ ವಿರಳರಾದ ಈ ಕಾಲಘಟ್ಟದಲ್ಲಿ, ನೀತಿ ಬೋಧೆಯಂತಿರುವ ಸುಮಾರು 250 ಕುಸುಮ ಷಟ್ಪದಿಯ ಪದ್ಯಗಳನ್ನು ಒಳಗೊಂಡ ಪುಸ್ತಕವನ್ನು ನಾಗರಾಜ ಖಾರ್ವಿ ಬರೆದಿದ್ದಾರೆ. ಈ ಕಾಲಕ್ಕೆ ಇದೊಂದು ಸಾಧನೆಯೇ ಆಗಿದೆ ಎಂದರು.
ಬೈಂದೂರಿನ ಕ್ಷೇತ್ರ ಸಮನ್ವಯಾಧಿಕಾರಿ ಅಬ್ದುಲ್ ರವೂಫ್‍ರವರು ಪುಸ್ತಕದ ಪರಿಚಯ ಮಾಡಿದರು. ಶಿಕ್ಷಕ, ಯಕ್ಷಗಾನ ಪ್ರಸಂಗಕರ್ತ ಹೆಬ್ರಿ ತಾಲೂಕು ಕ.ಸ.ಪ. ಅಧ್ಯಕ್ಷ ಪಿ.ವಿ.ಆನಂದ ಸಾಲಿಗ್ರಾಮರವರು ಆಯ್ದ ಕುಸುಮ ಷಟ್ಪದಿಯ ಪದ್ಯಗಳನ್ನು ಗಮಕ ಮತ್ತು ಯಕ್ಷಗಾನ ಶೈಲಿಯಲ್ಲಿ ಹಾಡಿದರು. ಅನ್ನಪೂರ್ಣ ಬಿ.ಎಂ. ಕವಿ ಪರಿಚಯ ಮಾಡಿದರು. ವಿದ್ಯಾರ್ಥಿನಿ ಅಶ್ವಿನಿ ಶಾಸ್ತ್ರಿ ಸ್ವಾಗತಿಸಿದರು. ನಾಗರಾಜ ಖಾರ್ವಿ ವಂದಿಸಿದರು. ಅನುಷಾ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.

LEAVE A REPLY

 Click this button or press Ctrl+G to toggle between Kannada and English

Please enter your comment!
Please enter your name here