ಬಿ.ಸಿ.ರೋಡ್: ಪೊಲೀಸ್ ಲೇನ್ ನ ಶ್ರೀ ಅನ್ನಪೂರ್ಣೆಶ್ವರಿ ನಾಗದೇವರ ದೇವಸ್ಥಾನ ಟ್ರಸ್ಟ್ ನಲ್ಲಿ ಜ.30(ಗುರುವಾರ) ಶ್ರೀ ಅನ್ನಪೂರ್ಣೆಶ್ವರಿ ದೇವಿ ಸನ್ನಿಧಿಯಲ್ಲಿ ಕೀಕಾಂಗೋಡು ಬ್ರಹ್ಮಶ್ರೀ ಅರವತ್ ದಾಮೋದರ ತಂತ್ರಿಗಳ ನೇತೃತ್ವದಲ್ಲಿ ವಾರ್ಷಿಕ ಜಾತ್ರ ಮಹೋತ್ಸವ ಜರಗಲಿದೆ. ಜ.29 ರಂದು ಬುಧವಾರ ರಾತ್ರಿ ವಾಸ್ತು ಹೋಮ, ಜ.30 ರಂದು ಬೆಳಗ್ಗೆ 7 ಗಂಟೆಗೆ ಪ್ರಾರ್ಥನೆ, ಗಣಪತಿ ಹೋಮ, 7.30 ರಿಂದ ನವ ಚಂಡಿಕಾ ಹೋಮ ನಂತರ ಬೆಳಿಗ್ಗೆ 11 ಗಂಟೆಗೆ ವಿಶೇಷ ನಾಗಾರಾಧನೆ, 11.30ಕ್ಕೆ ನವ ಚಂಡಿಕಾ ಹೋಮದ ಪೂರ್ಣಾಹುತಿ, 12 ಗಂಟೆಗೆ ಮಹಾಪೂಜೆ ನಂತರ ಅನ್ನ ಸಂತರ್ಪಣೆ ನಡೆಯಲಿದೆ. ಸಂಜೆ 5 ರಿಂದ ಬಿ.ಸಿ.ರೋಡ್ ಅನ್ನಪೂರ್ಣೆಶ್ವರಿ ಭಕ್ತ ವೃಂದದವರಿಂದ ಭಜನಾ ಕಾರ್ಯಕ್ರಮ, ರಾತ್ರಿ 7 ಗಂಟೆಗೆ ಮಹಾಪೂಜೆ, ನಂತರ ದೇವರ ಬಲಿ, ಬಟ್ಟಲು ಕಾಣಿಕೆ ಜರಗಲಿದೆ. ಜ.31 ರಂದು ಶುಕ್ರವಾರ ರಾತ್ರಿ 7.30ಕ್ಕೆ ರಂಗಪೂಜೆ, ನಂತರ ಗುಳಿಗ ದೈವದ ವರ್ಷಾವಧಿ ಕೋಲ ಜರಗಲಿದೆ ಎಂದು ತಿಳಿಸಿದ್ದಾರೆ.

LEAVE A REPLY

 Click this button or press Ctrl+G to toggle between Kannada and English

Please enter your comment!
Please enter your name here