ಮಂಗಳೂರು: ನಿನ್ನೆಯಿಂದ ಆತಂಕದಲ್ಲಿದ್ದ ಮಂಗಳೂರಿನ ಜನರು ಕೊನೆಗೂ ನಿಟ್ಟುಸಿರು ಬಿಟ್ಟಿದ್ದಾರೆ. ನಿನ್ನೆ ಬಜ್ಪೆ ನಿಮಾನ ನಿಲ್ದಾಣದಲ್ಲಿ ಪತ್ತೆಯಾಗಿದ್ದ ಸಜೀವ ಬಾಂಬ್‌ ಇರುವ ಬ್ಯಾಗ್‌ನ್ನು ಭದ್ರತಾ ಸಿಬ್ಬಂದಿಯು ನಿರ್ಜನ ಪ್ರದೇಶಕ್ಕೆ ತೆಗೆದುಕೊಂಡು ಹೋಗಿ ಯಶಸ್ವಿಯಾಗಿ ಸ್ಫೋಟಿಸಿದ್ದಾರೆ. ಇದರೊಂದಿಗೆ ಭಾರೀ ದುರಂತವನ್ನು ತಪ್ಪಿಸಿದ್ದಾರೆ.

ಮೊದಲಿಗೆ ಬಾಂಬ್ ನಿಷ್ಕ್ರಿಯಗೊಳಿಸಲು ವಿಶೇಷ ಬಾಂಬ್ ನಿಷ್ಕ್ರೀಯ ದಳದವರು ಯತ್ನಿಸಿದರು. ಆದರೆ ಅದು ಸಾಧ್ಯವಾಗಲಿಲ್ಲ. ನಂತರ ಮಂಗಳೂರು ಪೊಲೀಸರು ಸಜೀವ ಬಾಂಬ್ ಸ್ಫೋಟಿಸಲು ನಿರ್ಧರಿಸಿದರು. ಅದರಂತೆ ಸ್ಫೋಟಿಸಿ ಯಶಸ್ವಿಯಾಗಿದ್ದಾರೆ. ಬಾಂಬ್‌ ಇರುವ ಬ್ಯಾಗ್ ಅನ್ನು 350 ಮೀಟರ್‌ ದೂರದಲ್ಲಿ ಇಟ್ಟು, ಅಲ್ಲಿ ಸಾಕಷ್ಟು ಮರಳಿನ ಚೀಲ ಪೇರಿಸಿದ ಬಳಿಕ ವೈರ್‌ ಅಳವಡಿಸಿ ಸುರಕ್ಷಿತವಾಗಿ ಬಾಂಬ್ ಸ್ಫೋಟಿಸುವಲ್ಲಿ ಯಶಸ್ವಿಯಾದರು. ಮೊದಲ ಬಾರಿಗೆ ಬಾಂಬ್‌ ನಿಷ್ಕ್ರಿಯಗೊಳಿಸಲು ಮಾಡಿದ ಯತ್ನ ವಿಫಲವಾಯಿತು. ಎರಡನೇ ಹಂತದ ಪ್ರಯತ್ನದಲ್ಲಿ ಬಾಂಬ್ ಸ್ಫೋಟಿಸಲು ಸಾಧ್ಯವಾಯಿತು.
ಇದಕ್ಕೆ ಸಂಬಂಧಿಸಿದಂತೆ ಮಂಗಳೂರು ಪೊಲೀಸರು ಪ್ರತಿಕ್ರಿಯಿಸಿ ಆ ವ್ಯಕ್ತಿಯ ಪೋಟೋ ರಿವೀಲ್ ಮಾಡಿದ್ದಾರೆ. ಸಿಸಿ ಟಿವಿ ಪರಿಶೀಲಿಸಿ, ಸಿಕ್ಕಿದ ಮಾಹಿತಿಯಂತೆ, ವ್ಯಕ್ತಿಯು ಬೆಳಿಗ್ಗೆ ಆಟೋದಲ್ಲಿ ಬಂದು ಬಾಂಬ್ ಇದ್ದ ಬ್ಯಾಗ್‌ ಅನ್ನು ಏರ್‌ಪೋರ್ಟ್‌ನಲ್ಲಿ ಇಟ್ಟುಹೋದ ವ್ಯಕ್ತಿ ಹಾಗೂ ಆಟೋದ ಚಿತ್ರವನ್ನು ಬಿಡುಗಡೆ ಮಾಡಿದ್ದಾರೆ.


ಕಪ್ಪು ಬಣ್ಣದ ಪ್ಯಾಂಟ್, ಬಿಳಿ ಬಣ್ಣದ ಶರ್ಟ್, ಬಿಳಿ ಟೋಪಿ ಹಾಗೂ ಕನ್ನಡಕ ಧರಿಸಿದ್ದ ಆ ವ್ಯಕ್ತಿಯು, ಕಪ್ಪು ಮತ್ತು ಹಳದಿ ಬಣ್ಣದ ಆಟೋದಲ್ಲಿ ಬಂದು ಬಾಂಬ್ ತುಂಬಿದ್ದ ಬ್ಯಾಗ್‌ ಇಟ್ಟು ಹೋಗಿರುವುದು ಏರ್‌ಪೋರ್ಟ್‌ನ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾದ ಆಧಾರದ ಮೇಲೆ ಶಂಕಿತನ ಚಿತ್ರ ಬಿಡುಗಡೆ ಮಾಡಲಾಯಿತು. ಆ ವ್ಯಕ್ತಿಗಾಗಿ ಈಗಾಗಲೇ ತನಿಖೆ ಆರಂಭವಾಗಿದ್ದು, ಆತನ ಪತ್ತೆಗೆ ಮಂಗಳೂರು ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ.

LEAVE A REPLY

 Click this button or press Ctrl+G to toggle between Kannada and English

Please enter your comment!
Please enter your name here