ನೋಡು
ಅವನು ಗಾಂಧಿವಾದಿ
ಇವನೇ
ಗಾಂಧಿ ವಿರೋಧಿ
ಯಾರು ಒಳ್ಳೆಯವರು..!

ಸ್ವಾತಂತ್ರ್ಯದ ಬಾಯಾರಿಕೆಯಲ್ಲಿದ್ದ
ಭಾರತಕ್ಕೆ
ನೀರು ನೀಡಿದವರಲ್ಲಿ ಪ್ರಭಾವಿ ದೊರೆ
ಈ ಗಾಂಧೀಜಿ
ಸತ್ಯ,ಅಹಿಂಸೆಯ ದಾರಿ ಮಾಡಿಕೊಂಡು
ಭಾರತ ಗೆದ್ದ
ಬರಿ ಕೈ ಪಕೀರ..
ತುಂಡು ಬಟ್ಟೆಯಲ್ಲಿದ್ದೇ
ಜನರ ಎದೆ ಗೆದ್ದ ಶ್ರೀಮಂತ..

ಮೊದಲ ವರ್ಷದ
ಸ್ವಾತಂತ್ರ್ಯ ಆಚರಿಸುವ ಮೊದಲೇ
ಕಣ್ಣು ಮುಚ್ಚಿದ್ದ.
ಆಗಲೇ
ಎರಡು ಬಣ ಸೃಷ್ಟಿಯಾಗಿತ್ತು
“ಅನುಯಾಯಿ ಮತ್ತು ವಿರೋಧಿ”..

ದೇಶದಲ್ಲೊಂದು ತಲ್ಲಣ ಸೃಷ್ಟಿಗೆ ಸಾಕಿತ್ತು ಇಷ್ಟು..
ಗಾಂಧಿ ಟೋಪಿ ಹಾಕಿದವರಲ್ಲಿ
ಕೂಡಿಟ್ಟವರಿದ್ದಾರೆ.
ಗಾಂಧಿಯ ವಿರೋಧಿಯರಲ್ಲಿ ಬ್ರಹ್ಮಚರ್ಯ ಆಚರಿಸಿದವರಿದ್ದಾರೆ.
ಇಬ್ಬರಿಗೂ ಅಸ್ತ್ರ ಒಂದೇ
ಅದೇ ಈ ಗಾಂಧೀಜಿ..!

ಗಾಂಧಿ ಯನ್ನು ಮತ್ತೆ ಕೊಲ್ಲುತ್ತಿದ್ದಾರೆ..
‘ಯಾರು…!?’
“ಗಾಂಧಿ ಗಾಂಧಿ” ಅಂದು
ಬೇಳೆ ಬೇಯಿಸಿದವರು..
ಗಾಂಧಿಯ ತ್ಯಾಗ ಮರೆತು
ಸಿಕ್ಕ ಸಿಕ್ಕಲ್ಲಿ ಉಗಿದವರು..
ಸಿದ್ದಾಂತ ತಿಳಿಯದೆ ಮಾತಾಡಿದವರು
ಸುಳ್ಳನ್ನೇ ಸತ್ಯ ಎಂದು ವಾದಿಸಿದವರು
ಒಟ್ಟಾರೆ ಗಾಂಧಿಯ ಮುಂದೆ, ಹಿಂದೆ
ಇರಿಸಿದವರು..!

ಬಿಟ್ಟು ಬಿಡಿ ಗಾಂಧಿಯನ್ನ..
ಎಳೆದು, ತಂದು ,ಕಿತ್ತು
ಗಾಂಧೀಜಿಯ ಮತ್ತೆ ಮತ್ತೆ ಕೊಲ್ಲದಿರಿ..!
ಈಗಾಗಲೇ ಸತ್ತಿದ್ದಾರೆ..!?

ಯತೀಶ್ ಕಾಮಾಜೆ

LEAVE A REPLY

 Click this button or press Ctrl+G to toggle between Kannada and English

Please enter your comment!
Please enter your name here