ವಿಟ್ಲ: ಕಟ್ಲೇರಿ ಅಂಗಡಿಯಲ್ಲಿ ಅಕ್ರಮವಾಗಿ ಮದ್ಯ ಮಾರಾಟ ಮಾಡುತ್ತಿದ್ದ ಸಂದರ್ಭ ದಾಳಿ ನಡೆಸಿದ ವಿಟ್ಲ ಎಸ್ ಐ ನೇತೃತ್ವದ ತಂಡ ನಗದು ಸಹಿತ ಮಧ್ಯವನ್ನು ಸ್ವಾಧೀನ ಪಡಿಸಿಕೊಂಡು ಅಂಗಡಿ ಮಾಲೀಕನನ್ನು ವಶಕ್ಕೆ ಪಡೆದ ಘಟನೆ ಮೂಡಂಬೈಲಿನಲ್ಲಿ ನಡೆದಿದೆ.
ಪುಣಚ ಮೂಡಂಬೈಲು ನಿವಾಸಿ ವಿಶ್ವನಾಥ ರೈ (63) ಬಂಧಿತ ಆರೋಪಿಯಾಗಿದ್ದಾರೆ. ಕಟ್ಲೇರಿ ಅಂಗಡಿಯ ಬಳಿಯಲ್ಲಿ ಅಕ್ರಮವಾಗಿ ಮದ್ಯವನ್ನು ಮಾರಾಟ ಮಾಡುವ ಖಚಿತ ಮಾಹಿತಿ ಮೇರೆಗೆ ವಿಟ್ಲ ಪೊಲೀಸರ ತಂಡ ದಾಳಿಯನ್ನು ನಡೆಸಿದೆ. ಈ ಸಂದರ್ಭ 180 ಎಂ ಎಲ್‌ನ 10 ವಿಸ್ಕಿ ಪ್ಯಾಕೇಟ್, 90 ಎಂ ಎಲ್ ನ 36 ವಿಸ್ಕಿ ಪ್ಯಾಕೇಟ್ ಗಳ ಜತೆಗೆ 80 ರೂ. ಅನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ. ಈ ಬಗ್ಗೆ ವಿಟ್ಲ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರು ಪಡಿಸಲಾಗಿದೆ.
ಪೊಲೀಸ್ ವರಿಷ್ಠಾಧಿಕಾರಿ ಡಾ. ಲಕ್ಷ್ಮೀ ಪ್ರಸಾದ್, ಡಿವೈಎಸ್‌ಪಿ ವೆಲೆಂಟನ್ ಡಿ’ಸೋಜ ಮಾರ್ಗದರ್ಶನದಲ್ಲಿ ವೃತ್ತ ನಿರೀಕ್ಷಕ ಟಿ. ಡಿ. ನಾಗರಾಜ್ ಅವರ ನೇತೃತ್ವದಲ್ಲಿ ವಿಟ್ಲ ಪ್ರೊಬೆಷನರಿ ಪಿಎಸ್‌ಐ ವಿನೋದ್ ರೆಡ್ಡಿ ಅವರನ್ನೊಳ್ಳಗೊಂಡ ಪೊಲೀಸರ ತಂಡ ದಾಳಿಯನ್ನು ನಡೆಸಿದೆ.

LEAVE A REPLY

 Click this button or press Ctrl+G to toggle between Kannada and English

Please enter your comment!
Please enter your name here