ಬಂಟ್ವಾಳ: ಪಾಂಡವರಕಲ್ಲು ವ್ಯವಸಾಯ ಸೇವಾ ಸಹಕಾರಿ ಬ್ಯಾಂಕ್ ಬಡಗಕಜೆಕಾರು ಇತಿಹಾಸದಲ್ಲಿ ಚುನಾವಣೆಯ ಮೂಲಕ ಸಿಎ ಬ್ಯಾಂಕಿನಲ್ಲಿ ಆಡಳಿತದ ಚುಕ್ಕಾಣಿ ಹಿಡಿದ ಭಾರತೀಯ ಜನತಾ ಪಾರ್ಟಿ ಬೆಂಬಲಿತ ಅಭ್ಯರ್ಥಿಗಳ ಪ್ರಮಾಣವಚನ ಸ್ವೀಕಾರ ಸಮಾರಂಭ ನಿನ್ನೆ ಸಭಾಭವನದಲ್ಲಿ ನಡೆಯಿತು.

ಜನಪ್ರಿಯ ನಾಯಕ ಹರಿಶ್ಚಂದ್ರ ಪೂಜಾರಿ ಅವರ ನಾಯಕತ್ವದಲ್ಲಿ ಪಳಗಿದ ಕಾರ್ಯಕರ್ತರ ಹೋರಾಟದ ಫಲವಾಗಿ ಜಯ ಗಳಿಸಿದ ಪಕ್ಷದ ಬೆಂಬಲಿತ ಅಭ್ಯರ್ಥಿಗಳ ಪ್ರಮಾಣವಚನ ಬಂಟ್ವಾಳ ಶಾಸಕ ರಾಜೇಶ್ ನಾಯ್ಕ ಉಳಿಪ್ಪಾಡಿ ಅವರ ಸಮ್ಮುಖದಲ್ಲಿ ನಡೆಯಿತು.
ಅಧ್ಯಕ್ಷರಾಗಿ ವಿನ್ಸೆಂಟ್ ಮನೋಹರ ಸೇರಾ, ಉಪಾಧ್ಯಕ್ಷರಾಗಿ ರೋಹಿನಾಥ ಪೂಜಾರಿ ಅವಿರೋಧವಾಗಿ ಆಯ್ಕೆಯಾದರು.

ಆಯ್ಕೆಯಾದ ಅಧ್ಯಕ್ಷ/ಉಪಾಧ್ಯಕ್ಷರು ಹಾಗೂ ಪಕ್ಷ ಬೆಂಬಲಿತ ಎಲ್ಲಾ ನಿರ್ದೇಶಕರನ್ನು ಅಭಿನಂಧಿಸಲಾಯಿತು ಎಂದು ಬಿಜೆಪಿ ವಾರ್ಡ್ ಸಮಿತಿ ಮಾಡ, ಬಡಗಕಜೆಕಾರಿನ ಅಧ್ಯಕ್ಷ ಪ್ರವೀಣ್ ಪೂಜಾರಿ ತಿಳಿಸಿದರು.

LEAVE A REPLY

 Click this button or press Ctrl+G to toggle between Kannada and English

Please enter your comment!
Please enter your name here