ಬಂಟ್ವಾಳ: ಧರ್ಮದ ತಿರುಳನ್ನು ತಿಳಿಸುವ ಕೆಲಸ ದೇವಸ್ಥಾನಗಳಿಂದ ಅಗಬೇಕಾಗಿದೆ, ಆದರೆ ದುರ್ದೈವ ದೇವಸ್ಥಾನಗಳು ವ್ಯಾಪಾರ ಕೇಂದ್ರಗಳಾಗಿ ಬದಲಾವಣೆ ಅಗುತ್ತಿದೆ, ಈ ಕ್ರಮ ಸರಿಯಲ್ಲ, ಜೀವನದ ಪದ್ದತಿಯನ್ನು, ಕ್ರಮಗಳನ್ನು, ವ್ಯವಸ್ಥೆಗಳನ್ನು ಜವಾಬ್ದಾರಿಗಳನ್ನು ತಿಳಿಸುವ ಕಾರ್ಯ ಧರ್ಮಗಳಿಂದ ಆಗಬೇಕಾಗಿದೆ ಅದು ಹಿಂದೂ ಧರ್ಮದಲ್ಲಿ ಮಾತ್ರ ಸಾಧ್ಯ ಎಂದು ವಿವೇಕಾನಂದ ಕಾಲೇಜಿನ ಅಧ್ಯಕ್ಷ ಆರ್.ಎಸ್.ಎಸ್. ಪ್ರಮುಖ ಡಾ. ಪ್ರಭಾಕರ್ ಭಟ್ ಕಲ್ಲಡ್ಕ ಅವರು ಹೇಳಿದರು. ‌
ಅವರು ಶ್ರೀ ಸುಬ್ರಾಯ ನಾವೂರೇಶ್ವರ ವಿಷ್ಣು ಮೂರ್ತಿ ನಾವೂರ ದೇವಸ್ಥಾನದ ನವೀಕರಣ ಪುನಃ ಪ್ರತಿಷ್ಠಾಷ್ಟಬಂಧ, ಬ್ರಹ್ಮಕಲಶೋತ್ಸವದ ಸಭಾ ಕಾರ್ಯಕ್ರಮದಲ್ಲಿ ಧಾರ್ಮಿಕ ಉಪನ್ಯಾಸ ನೀಡಿದರು. ದೇವಸ್ಥಾನಗಳು ಉಳಿಯಬೇಕು, ಧರ್ಮ ಉಳಿಯಬೇಕು, ಶೃದ್ದಾಕೇಂದ್ರಗಳು ಉಳಿಯಬೇಕು ಅದಕ್ಕೆ ದೇವಸ್ಥಾನದ ಮೂಲಕ ಒಗ್ಗಟ್ಟು ಅಗಬೇಕಾಗಿದೆ ಎಂದರು.
ಓಂಕಾರದ ಎದುರಿನಲ್ಲಿ ಕುಳಿತು ದ್ಯಾನ ಮಾಡುವ ವ್ಯವಸ್ಥೆಗಳು ಪ್ರತಿ ಮನೆಯಲ್ಲಿ ಆಗಬೇಕಾಗಿದೆ, ಧರ್ಮದ ಚಿಂತನೆಗಳನ್ನು ತಿಳಿಸುವ ಕೆಲಸ ಮನೆಮನಗಳಲ್ಲಿ ಆಗಬೇಕಾಗಿದೆ ಎಂದು ಅವರು ತಿಳಿಸಿದರು.
ಇಂಗ್ಲೀಷ್ ಮಾಧ್ಯಮದಲ್ಲಿ ಕಲಿತ ಮಗು ಧರ್ಮವನ್ನು ಕಲಿಯಲು ಸಾದ್ಯವಿಲ್ಲ, ನಂಬಲು ಸಾಧ್ಯವಿಲ್ಲ. ನಂಬಿಕೆಗಳು ಸತ್ಯವಾಗಿದೆ, ಮೂಲನಂಬಿಕೆಗಳು ಮುಂದಿನ ಪೀಳಿಗೆಗೆ ತಿಳಿಸುವ ಉಳಿಸುವ ಪ್ರಯತ್ನ ನಾವೆಲ್ಲರೂ ಒಗ್ಗಟ್ಟಾಗಿ ಮಾಡಬೇಕು.

ಶರೀರ ಪ್ರದರ್ಶನಕ್ಕೆ ಅಲ್ಲ, ಉಡುಗೆ ತೊಡುಗೆಗಳ ಬಗ್ಗೆ ಅರಿವಿರಲಿ ಎಂದು ಅವರು ಹೇಳಿದರು. ಮಂಗಳೂರು ಗಲಭೆಯ ಸಂದರ್ಭದಲ್ಲಿ ಮಂಗಳೂರು ಪೊಲೀಸ್ ಕಮೀಷನರ್ ತೆಗೆದುಕೊಂಡ ನಿರ್ಧಾರಿಂದ ಬಂಟ್ವಾಳ ಶಾಂತಿಯಾಗಿ ಉಳಿದಿದೆ, ಅವರ ಉತ್ತಮ ಕೆಲಸಕ್ಕಾಗಿ
ಅಭಿನಂದನೆ ಸಲ್ಲಿಸುತ್ತೇನೆ ಎಂದು ಅವರು ಹೇಳುತ್ತಾ, ಕವಲು ದಾರಿಯಲ್ಲಿ ನಾವಿದ್ದೇವೆ, ದೇಶವನ್ನು ಅರಾಜಕತೆಯತ್ತ ಕೊಂಡು ಹೋಗುವ ಕೆಲಸಗಳು ಕೆಲವೊಂದು ಶಕ್ತಿಗಳಿಂದ ಅಗುತ್ತಿದೆ ಎಂದು ಅವರು ಹೇಳಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಸಿ ಮಾತನಾಡಿದ ಜಿ.ಪಂ. ಆಧ್ಯಕ್ಷೆ ಮೀನಾಕ್ಷಿ ಶಾಂತಿಗೂಡು ಅವರು, ದೇವಸ್ಥಾನದ ಅಭಿವೃದ್ಧಿಯಿಂದ ಧಾರ್ಮಿಕ ಕಾರ್ಯಕ್ರಮದಿಂದ ನಮ್ಮ ಸಂಸ್ಕೃತಿ ಉಳಿಯುತ್ತದೆ. ಮಗು ಸುಸಂಸ್ಕೃತವಾಗಿ ಬೆಳೆದರೆ ಧರ್ಮ ಉಳಿಯುತ್ತದೆ, ದೇವಸ್ಥಾನಗಳು ಬೆಳೆಯುತ್ತದೆ. ಧಾರ್ಮಿಕ ಕೆಲಸಗಳಲ್ಲಿ ಹೆಚ್ಚು ತೊಡಗಿಸಿಕೊಳ್ಳಿ ಎಂದು ಅವರು ತಿಳಿಸಿದರು.
ವೇದಿಕೆಯಲ್ಲಿ ಉದ್ಯಮಿ ರಘನಾಥ ಸೋಮಯಾಜಿ, ಜ್ಯೋತಿಷಿ ಕಾರಿಂಜ ವೆಂಕಟರಮಣ ಮುಚ್ಚಿನ್ನಾಯ, ಗಂಗಾಧರ ಪೂಜಾರಿ ಅಮೈ, ಎನ್.ಪದ್ಮನಾಭ ಭಟ್ ಮೈಸೂರು, ರಮಾನಂದ ಭಟ್ ಸುರತ್ಕಲ್, ನಾರಾಯಣ ಪೂಜಾರಿ ಬೊಳ್ಳುಕಲ್ಲು, ಶ್ರೀಪತಿ ಭಟ್, ಹರಿಕೃಷ್ಣ ಬಂಟ್ವಾಳ, ಮುರಳೀಧರ್ ಭಟ್, ರಾಮಚಂದ್ರ ಭಟ್ ಉಪಸ್ಥಿತರಿದ್ದರು.
ದಿನೇಶ್ ಸಾಲಿಯಾನ್ ಕನಪಾದೆ ಸ್ವಾಗತಿಸಿ, ಸುರೇಶ್ ಎಸ್.ನಾವೂರ ವಂದಿಸಿದರು.

LEAVE A REPLY

 Click this button or press Ctrl+G to toggle between Kannada and English

Please enter your comment!
Please enter your name here