ಮಂಜೇಶ್ವರ: ಅಂಗಡಿಗೆಂದು ತೆರಳಿದವಳು ವಾಪಸ್ಸು ಮನೆಗೆ ಬರದೆ ಕಾಣೆಯಾಗಿರುವ ಬಗ್ಗೆ ವಿಟ್ಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ‌

ಮಂಜೇಶ್ವರ ತಾಲೂಕಿನ ಎಣ್ಮಕಜೆ ಗ್ರಾಮದ ನಾಲ್ಕ ಮನೆಯ ಪ್ರಕಾಶ್ ಎಂಬವರ ಮಗಳು ವಿದ್ಯಾಶ್ರೀ, 19 ವರ್ಷದ ಯುವತಿ ಕಾಣೆಯಾದವಳು.

ಜ.17 ರಂದು ಶುಕ್ರವಾರ ಇವರು ಕೇಪು ಗ್ರಾಮದ ಕಲ್ಲಂಗಳ ವಿಶ್ವನಾಥ ನಾಯ್ಕ ಎಂಬವರ ಮನೆಯಿಂದ ಅಂಗಡಿಗೆ ಹೋಗಿ ಬರುತ್ತೇನೆ ಎಂದು ಹೇಳಿ ಹೋದವಳು ವಾಪಸ್ಸು ಮನೆಗೆ ಬಾರದೆ ಕಾಣೆಯಾಗಿರುತ್ತಾಳೆ ಎಂದು ಆಕೆಯ ಸಹೋದರ ಅಜಿತ್ ಅವರು ದೂರು ನೀಡಿದ್ದಾರೆ. ಅವರು ನೀಡಿದ ದೂರಿನಂತೆ ಪ್ರಕರಣ ದಾಖಲಾಗಿದೆ.

LEAVE A REPLY

 Click this button or press Ctrl+G to toggle between Kannada and English

Please enter your comment!
Please enter your name here