ವಿಟ್ಲ: ವಿಟ್ಲ ಮಹತೋಭಾರ ಶ್ರೀ ಪಂಚಲಿಂಗೇಶ್ವರ ದೇವಸ್ಥಾನದಲ್ಲಿ ವರ್ಷಂಪ್ರತಿ ನಡೆಯುವ ಕಾಲಾವಧಿ ಜಾತ್ರೋತ್ಸವ ಮಂಗಳವಾರದಂದು ಧ್ವಜಾರೋಹಣದೊಂದಿಗೆ ಆರಂಭಗೊಂಡಿತು. ನಾನಾ ವೈದಿಕ ವಿಧಿವಿಧಾನಗಳೊಂದಿಗೆ ಆರಂಭಗೊಂಡವು. ಪ್ರತಿಷ್ಠಾ ಬ್ರಹ್ಮಕಲಶೋತ್ಸವದ ೬ನೇ ವರ್ಷದ ಈ ಜಾತ್ರೋತ್ಸವದಲ್ಲಿ ಸಹಸ್ರಾರು ಮಂದಿ ಭಕ್ತರು ದೇವರ ಜಾತ್ರೆಯ ಕೊಡಿ ಏರುವ ಸಂದರ್ಭದಲ್ಲಿ ಭಾಗವಹಿಸಿದ್ದರು. ಧ್ವಜಾರೋಹಣದ ಬಳಿಕ ದೇವಸ್ಥಾನದ ವಠಾರದಲ್ಲಿ ಅನ್ನ ಸಂತರ್ಪಣೆ ನಡೆಯಿತು.
ದೇಗುಲದ ಅನುವಂಶಿಕ ಆಡಳಿತದಾರರಾದ ವಿಟ್ಲ ಅರಮನೆಯ ಪರವಾಗಿ ಕೃಷ್ಣಯ್ಯ ಬಲ್ಲಾಳ್, ತಂತ್ರಿಗಳು, ಅರ್ಚಕ ವೃಂದ, ಸೀಮೆಯ ಗುರಿಕ್ಕಾರರು, ಆಡಳಿತ ಸಮಿತಿ ಪದಾಧಿಕಾರಿಗಳು ಇದ್ದರು. ಶ್ರೀ ಕ್ಷೇತ್ರದಲ್ಲಿ ಸೂರ್‍ಯೋದಯದಿಂದ ಸೂರ್‍ಯಸ್ತದವರೆಗೆ ಅರ್ಧ ಏಕಾಹ ಭಜನೆ ನಡೆಯಿತು. ಸಂಜೆ ಶ್ರೀ ಪಂಚಲಿಂಗೇಶ್ವರ ದೇವರಿಗೆ ನೂತನ ರಜತ ಕವಚವನ್ನು ಅದ್ದೂರಿ ಮೆರವಣಿಗೆಯ ಮೂಲಕ ತಂದು ಸಮರ್ಪಿಸಲಾಯಿತು.
ಬಳಿಕ ವಿಟ್ಲ ಶ್ರೀ ಚಂದ್ರನಾಥ ಬಸದಿಯಿಂದ ಭಜನಾ ಉಲ್ಪೆ ಮೆರವಣಿಗೆ ನಡೆಯಿತು. ಭಜನಾ ಮಂಗಳೋತ್ಸವ ನಡೆದ ಬಳಿಕ ಶ್ರೀ ಕ್ಷೇತ್ರದಲ್ಲಿ ವಿಶೇಷ ಲಕ್ಷ ದೀಪೋತ್ಸವ ನಡೆಯಿತು.

 

LEAVE A REPLY

 Click this button or press Ctrl+G to toggle between Kannada and English

Please enter your comment!
Please enter your name here