ಬಿ.ಸಿ.ರೋಡ್: ಈ ಪ್ರಪಂಚದಲ್ಲಿ ನಾವು ಎರಡು ರೀತಿಯ ಜನರನ್ನು ಕಾಣುತ್ತೇವೆ. ಒಂದು ನಿದ್ದೆ ಮಾಡುವವರು. ಇನ್ನೊಂದು ನಿದ್ದೆ ಮಾಡಿದಂತೆ ನಟಿಸುವವರು. ನಿದ್ದೆ ಮಾಡುವವರನ್ನು ಎಬ್ಬಿಸಬಹುದು ಆದರೆ ನಿದ್ದೆ ಮಾಡಿದಂತೆ ನಟಿಸುವವರನ್ನು ಎಬ್ಬಿಸಲು ಸಾಧ್ಯವಿಲ್ಲ. ದೇಶದಲ್ಲಿ ಕೂಡಾ ಎಲ್ಲರನ್ನು ತಿದ್ದಲು ಸಾಧ್ಯವಿಲ್ಲ. ಆದರೆ ಈ ಕಲಿಯುಗದಲ್ಲೂ ಇಂತಹ ದೇವತಾಕಾರ್ಯಗಳನ್ನು ಮಾಡುವ ಮೂಲಕ ಒಂದಷ್ಟು ನೆಮ್ಮದಿಯನ್ನಾದರೂ ಕಂಡುಕೊಳ್ಳಬಹುದು ಎಂದು ಮಾಣಿಲ ಶ್ರೀ ಮೋಹನದಾಸ ಸ್ವಾಮೀಜಿ ತಿಳಿಸಿದರು.
ಅವರು ನಾಣ್ಯ ನಾಗಮಂಡಲೋತ್ಸವದ ಪ್ರಯುಕ್ತ ನಡೆಯುವ ವೈದಿಕ ಹಾಗೂ ಧಾರ್ಮಿಕ ಕಾರ್ಯಕ್ರಮಗಳ ಉದ್ಘಾಟಿಸಿ ಆಶೀರ್ವಚನ ನೀಡಿ ನಾಣ್ಯ ಕ್ಷೇತ್ರದಲ್ಲಿರುವ ನಾಗರಕ್ತೇಶ್ವರಿ ಯಾವುದೇ ಕಾರ್ಯ ಮಾಡಲು ಇಲ್ಲವೇ ಮಾಡಿಸಲು ಸಮರ್ಥರು. ಆ ಕಾರಣದಿಂದ ಈ ನಾಣ್ಯದ ಮಣ್ಣಿನಲ್ಲಿ ಒಂದು ರೀತಿಯ ಶಕ್ತಿ ಇದೆ. ನಾಗದೇವರಿಗೂ, ನಮ್ಮ ಕುಟುಂಬದ ದೇವರಿಗೂ, ಪ್ರಕೃತಿಗೂ, ಕುಡಿಯುವ ನೀರಿಗೂ, ವಾಯು ದೇವರಿಗೂ ಒಂದು ರೀತಿಯ ಸಂಬಂಧ ಇದೆ. ನಾಗದೇವರು ಸಂಪತ್ತಿನ ಅಧಿದೇವತೆಯಾಗಿರುತ್ತಾರೆ ಎಂದು ತಿಳಿಸಿದರು.
ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪೊಳಲಿ ರಾಜರಾಜೇಶ್ವರಿ ದೇವಸ್ಥಾನದ ಆಡಳಿತ ಮೊಕ್ತೇಸರ ಡಾ. ಮಂಜಯ್ಯ ಶೆಟ್ಟಿ ಅಮ್ಮುಂಜೆಗುತ್ತು ವಹಿಸಿದ್ದರು. ವೇದಿಕೆಯಲ್ಲಿ ಆಡಳಿತ ಸಮಿತಿಯ ಅಧ್ಯಕ್ಷ ಪೂವಪ್ಪ ಬಂಗೇರ ನಾಣ್ಯ, ನಾಗಮಂಡಲೋತ್ಸವ ಸಮಿತಿಯ ಪ್ರಧಾನ ಸಂಚಾಲಕ ತೇವು ತಾರನಾಥ ಕೊಟ್ಟಾರಿ ಫರಂಗಿಪೇಟೆ, ಅರ್ಕುಳಬೀಡು ವಜ್ರನಾಭ ಶೆಟ್ಟಿ, ನಾಗಮಂಡಲೋತ್ಸವ ಸಮಿತಿಯ ಪ್ರಕಾಶ್ಚಂದ್ರ ರೈ ದೇವಸ್ಯ, ಉದ್ಯಮಿ ಗೋಪಾಲಕೃಷ್ಣ ಆಚಾರ್ಯ, ಪ್ರದಾನ ಕಾರ್ಯದರ್ಶಿ ಮನೋಜ್ ಆಚಾರ್ಯ ನಾಣ್ಯ, ಕೋಶಾಧಿಕಾರಿ ಪದ್ಮನಾಭ ಶೆಟ್ಟಿ ಪುಂಚಮೆ ಫರಂಗಿಪೇಟೆ ಉಪಸ್ಥಿತರಿದ್ದರು. ನಾಗಮಂಡಲೋತ್ಸವ ಸಮಿತಿಯ ಗೌರವಾಧ್ಯಕ್ಷ ಐತಪ್ಪ ಆಳ್ವ ಸುಜೀರುಗುತ್ತು ಸ್ವಾಗತಿಸಿದರು. ಕಾರ್ಯಾಧ್ಯಕ್ಷ ಚಂದ್ರಹಾಸ ಡಿ. ಶೆಟ್ಟಿ ಪ್ರಸ್ತಾವಿಕವಾಗಿ ಮಾತನಾಡಿದರು. ಕಾರ್ಯದರ್ಶಿ ಮಾಧವ ನಾಣ್ಯ ವಂದಿಸಿದರು.

LEAVE A REPLY

 Click this button or press Ctrl+G to toggle between Kannada and English

Please enter your comment!
Please enter your name here